ವಿಧಾನಸೌಧದ ಅಂಗಳದಲ್ಲೇ ಇದ್ಯಾ ಸರಕಾರದ ಅವಧಿ ನಿರ್ಧರಿಸೋ ಶಕ್ತಿ: ಇದು ರಾಜಕಾರಣದ EXCLUSIVE STORY

ಬೆಂಗಳೂರು : ಕರ್ನಾಟಕದ ಶಕ್ತಿಸೌಧ ಅಂತಾನೇ ಕರೆಯಿಸಿಕೊಳ್ಳುವ ವಿಧಾನಸೌಧಕ್ಕೆ( Vidhana Soudha) ವಾಸ್ತದೋಷವಿದೆಯಾ ? ಹೀಗೊಂದು ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಅದ್ರಲ್ಲೂ ಕಾಂಗ್ರೆಸ್‌ ಪಕ್ಷದ ರಾಜ್ಯದ ಅಧಿಕಾರದ ಗದ್ದುಗೆ ಏರುವ ಹೊತ್ತಲ್ಲೇ ಪ್ರಮಾಣ ವಚನಕ್ಕಾಗಿ ಬದಲಿ ಸ್ಥಳದ ಹುಡುಕಾಟ ನಡೆಯುತ್ತಿದೆ. ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ರೆ ಅವರು ಐದು ವರ್ಷ ಆಡಳಿತ ನಡೆಸೋದಿಲ್ಲಾ ಅನ್ನೋ ಮಾತು ಕೇಳಿಬರುತ್ತಿದೆ.

ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ್ರೆ ಅದ್ದೂರಿಯಾಗಿಯೇ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯ ನೆರವೇರುತ್ತಿದೆ. ರಾಜಭವನದ ಗಾಜಿನ ಮನೆಯಲ್ಲಿಯೇ ಬಹುತೇಕ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯ ನೆರವೇರಿದೆ. ಇನ್ನೂ ಕೆಲವರು ಅರಮನೆ ಮೈದಾನದಲ್ಲಿ ನಡೆಸಿದ್ರೆ, ರಾಮಕೃಷ್ಣ ಹೆಗಡೆ ಅವರು ವಿಧಾನ ಸೌಧದ ಮುಂಭಾಗದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ತದನಂತರದಲ್ಲಿ ಕಾಂಗ್ರೆಸ್‌ ಪಕ್ಷದ ಎಸ್.ಎಂ.ಕೃಷ್ಣ, ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಕೂಡ ಇದೇ ವಿಧಾನಸೌಧದ ಮುಂಭಾಗದಲ್ಲಿಯೇ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.

ಆದರೆ ವಿಧಾನಸೌಧದ ಮುಂಭಾಗದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದ ಯಾರೊಬ್ಬರ ಮುಖ್ಯಮಂತ್ರಿಗಳು ಕೂಡ ಐದು ವರ್ಷ ಅಧಿಕಾರವನ್ನು ಪೂರ್ಣಗೊಳಿಸಿಲ್ಲ. ರಾಮಕೃಷ್ಣ ಹೆಗಡೆ ಅವರು ಕರ್ನಾಟಕದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲ ಅವಧಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಎರಡು ವರ್ಷ ಆಡಳಿತ ನಡೆಸಿದ್ದರು. ತದನಂತರ ಪೂರ್ಣ ಪ್ರಮಾಣದಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದು ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಲ್ಲದೇ ದೇಶದ ಪ್ರಧಾನಿ ಆಗುವ ಅವಕಾಶವೂ ಒದಗಿಬಂದಿತ್ತು. ಆದರೆ ದುರದೃಷ್ಟವಶಾತ್‌ ಎಂಬಂತೆ ರಾಮಕೃಷ್ಣ ಹೆಗಡೆ ಅವರ ವಿರುದ್ದ ಟೆಲಿಪೋನ್‌ ಕದ್ದಾಲಿಕೆಯ ಆರೋಪ ಕೇಳಿಬಂದು ಮೂರೇ ವರ್ಷಕ್ಕೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದರು.

ತದನಂತರದಲ್ಲಿ ಎಸ್.ಎಂ.ಕೃಷ್ಣ ಕಾಂಗ್ರೆಸ್‌ ಪಕ್ಷದಿಂದ ಸಿಎಂ ಆಗಿ ವಿಧಾನಸೌಧದ ಮುಂಭಾಗದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ ಸಂಪೂರ್ಣ ಐದು ವರ್ಷಗಳ ಕಾಲ ಅವರು ಅಧಿಕಾರ ನಡೆಸಿಲ್ಲ. ನಂತರ ಕಾಂಗ್ರೆಸ್‌ ಜೊತೆ ನೀಡಿದ್ದ ಬೆಂಬಲವನ್ನು ವಾಪಾಸ್‌ ಪಡೆದು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದ ಜೆಡಿಎಸ್‌ ಪಕ್ಷದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡಿದ್ದರೂ ಕೂಡ, ಅವರ ಆಡಳಿತ ಅವಧಿ ಇಪ್ಪತ್ತು ತಿಂಗಳಿಗೆ ಸೀಮಿತವಾಗಿತ್ತು. ಅಲ್ಲದೇ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡು ಜೆಡಿಎಸ್‌ ಅಧಿಕಾರಕ್ಕೆ ಬಂದಿದ್ದರೂ ಕೂಡ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಐದು ವರ್ಷಗಳ ಸಂಪೂರ್ಣ ಆಡಳಿತ ನಡೆಸಲು ಸಾಧ್ಯವಾಗಿರಲಿಲ್ಲ.

ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದ ಮುಂಭಾಗದಲ್ಲಿ ಅದ್ದೂರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಆದರೆ ಅವರು ಕೂಡ ಅವಧಿ ಪೂರ್ಣ ಅಧಿಕಾರ ನಡೆಸಲು ಸಾಧ್ಯವಾಗಿರಲ್ಲ. ಸಿದ್ಧರಾಮಯ್ಯನವರು 2013 ರಲ್ಲಿ ಕಂಠೀರವ ಕ್ರೀಡಾಂಗಣ ದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹೀಗಾಗಿ ಅವರು ಐದು ವರ್ಷ ಪೂರ್ತಿ ಗೊಳಿಸಿದರು. ಹೀಗಾಗಿ ಈ ಭಾರಿಯೂ ವಾಸ್ತು ದೋಷದ ಭಯಕ್ಕೆ ವಿಧಾನ ಸೌಧ ಬಿಟ್ಟು ಬೇರೆ ಕಡೆ ಪ್ರಮಾಣ ವಚನ ಸ್ವೀಕರಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಸಿಎಂ ಯಾರಾಗಬೇಕೆನ್ನೋದು ಅಂತಿಮ ಗೊಂಡಲ್ಲಿ ಇದೇ 18 ರಂದು ಕಾಂಗ್ರೆಸ್ ಶಕ್ತಿಸೌಧದಿಂದ ದೂರದಲ್ಲಿ ಅಧಿಕಾರ ಸ್ವೀಕರಿಸೋದು ಖಚಿತ.

ದೇವರಾಜ್‌ ಅರಸು ಅವರ ನಂತರದಲ್ಲಿ ಕರ್ನಾಟಕದಲ್ಲಿ ಅವಧಿ ಪೂರ್ಣ ಅಧಿಕಾರ ನಡೆಸಿದ ಮುಖ್ಯಮಂತ್ರಿ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದರು. ಸಿದ್ದರಾಮಯ್ಯ ಅವರು 5 ವರ್ಷ 4 ದಿನ ಕಾಲ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಇದೀಗ ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿದ್ದು, ನೂತನ ಮುಖ್ಯಮಂತ್ರಿಯ ಪ್ರಮಾಣವಚನಕ್ಕೆ ಸಿದ್ದತೆಗಳು ಜೋರಾಗಿ ನಡೆಯುತ್ತಿದೆ. ಈ ಬಾರಿಯೂ ವಿಧಾನಸೌಧದ (Vidhana Soudha) ಬದಲು ಅನ್ಯ ಸ್ಥಳಗಳಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದವರು 18 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಲ್ಲದೇ 6 ಬಾರಿ ಇದುವರೆಗೂ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಲಾಗಿದೆ.

ಇದನ್ನೂ ಓದಿ : ಡಿಕೆ ಶಿವಕುಮಾರ್‌ ದೆಹಲಿ ಪ್ರವಾಸ ರದ್ದು, ಆರ್‌ಎಸ್‌ಎಸ್‌ ನಾಯಕರನ್ನು ಭೇಟಿಯಾದ ಬಸವರಾಜ್‌ ಬೊಮ್ಮಾಯಿ

ಇದನ್ನೂ ಓದಿ : Exclusive : ಸಿಎಂ ಜೊತೆ ಸಚಿವರ ಪಟ್ಟಿಯೂ ಫೈನಲ್‌ : 27 ಜಿಲ್ಲೆ 49 ಸಂಭಾವ್ಯ ಸಚಿವರು

ಐದು ವರ್ಷ ಕರ್ನಾಟಕ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳು :

  1. ಎಸ್.ನಿಜಲಿಂಗಪ್ಪ : 5ವರ್ಷ 343 ದಿನ
  2. ದೇವರಾಜ್‌ ಅರಸ್‌ : 5 ವರ್ಷ 286 ದಿನ
  3. ಸಿದ್ದರಾಮಯ್ಯ : 5 ವರ್ಷ 4 ದಿನ

Comments are closed.