ಮಂಗಳವಾರ, ಏಪ್ರಿಲ್ 29, 2025
HomekarnatakaJanotsava Progarame Canceled : ಪ್ರವೀಣ್‌ ಹತ್ಯೆ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ : ಬೆದರಿದ ಬಿಜೆಪಿ...

Janotsava Progarame Canceled : ಪ್ರವೀಣ್‌ ಹತ್ಯೆ ಬೆನ್ನಲ್ಲೇ ಕಾರ್ಯಕರ್ತರ ಆಕ್ರೋಶ : ಬೆದರಿದ ಬಿಜೆಪಿ ಸರಕಾರ, ಜನೋತ್ಸವ ಕಾರ್ಯಕ್ರಮ ರದ್ದು

- Advertisement -

ಬೆಂಗಳೂರು : ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು (praveen Nettar) ಹತ್ಯೆ ಪ್ರಕರಣ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ರಾಜ್ಯ ಸರಕಾರ ಕೂಡ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಬೆದರಿದೆ. ರಾಜ್ಯ ಸರಕಾರಕ್ಕೆ ಮೂರು ವರ್ಷ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಜನೋತ್ಸವ ಕಾರ್ಯಕ್ರಮವನ್ನು (Janotsava Progarame Canceled) ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (basavaraj bommai) ಅವರು ದಿಢೀರ್‌ ರದ್ದು ಮಾಡಿದ್ದಾರೆ.

ತಡರಾತ್ರಿ ಸುದ್ದಿಗೋಷ್ಠಿ ನಡೆಸಿರುವ ಸಿಎಂ ಬೊಮ್ಮಾಯಿ ಅವರು, ದೊಡ್ಡಬಳ್ಳಾಪುರ ಹಾಗೂ ವಿಧಾನ ಸೌಧದಲ್ಲಿ ಜನೋತ್ಸವ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿತ್ತು. ಆದ್ರೆ ಪ್ರವೀಣ್‌ ಹತ್ಯೆಯ ಸಂದರ್ಭದಲ್ಲಿ ಕಾರ್ಯಕ್ರಮ ನಡೆಸುವುದು ಸೂಕ್ತ ಅಲ್ಲಾ ಅನ್ನೋ ಕಾರಣಕ್ಕೆ ರದ್ದುಗೊಳಿಸಲಾಗಿದೆ ಎಂದಿದ್ದಾರೆ. ನನ್ನ ಕಾರ್ಯಕರ್ತನ ಹಾಗೂ ಪ್ರತೀ ಸಾರ್ವಜನಿಕ ಜೀವವೂ ಮುಖ್ಯ. ದುಷ್ಕೃತ್ಯ ಎಸಗುವವರ ವಿರುದ್ದ ಮುಂದಿನ ದಿನಗಳಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಿದ್ದೇವೆ. ನಾನು ಯುವ ಜನತೆಯ ಆಕ್ರೋಶವನ್ನು ಅರ್ಥ ಮಾಡಿಕೊಳ್ಳುತ್ತೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವ ಭರವಸೆ ನೀಡುತ್ತೇನೆ ಎಂದಿದ್ದಾರೆ.

ಪ್ರವೀಣ್‌ ನೆಟ್ಟಾರು ಹತ್ಯೆಯ ಸುದ್ದಿ ಬಂದ ನಂತರದಲ್ಲಿ ನೋವು, ಕಳವಳ ನನ್ನೊಳಗೆ ಆಗಿತ್ತು. ಪೊಲೀಸರಿಗೆ ಕೊಡಬೇಕಾದ ಎಲ್ಲಾ ಸೂಚನೆಗಳನ್ನು ನೀಡಿದ್ದೇನೆ. ಅಮಾಯಕ ಯುವಕನನ್ನು ಯೋಜನಾ ಬದ್ದವಾಗಿ ಹತ್ಯೆಗೈದಿದ್ದು ಖಂಡನೀಯ. ರಾಜ್ಯ ಸರಕಾರದ ಮೂರು ವರ್ಷದ ಸಾಧನೆಯನ್ನು ಜನರಿಗೆ ತೋರಿಸುವ ನಿಟ್ಟಿನಲ್ಲಿ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇಡೀ ದಿನ ಅದೇ ಕಾರ್ಯಕ್ರಮದಲ್ಲಿದ್ದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿ ಇದ್ದಾಗ 22 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿತ್ತು. ಆದರೆ ಹತ್ಯೆಗೈದ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಕಾಂಗ್ರೆಸ್‌ ಸರಕಾರ ಹಿಂಪಡೆದಿದೆ. ಇದರಿಂದಲೇ ಇಂತಹ ಸಂಘಟನೆಗಳಿಗೆ ಬಲ ಬಂದಂತಾಗಿದೆ. ಇಂತಹ ಸಂಘಟನೆಗಳ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕಾಗಿದೆ. ಅಲ್ಲದೇ ವಿಶೇಷ ತರಬೇರತಿ ಪಡೆದಿರುವ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ರಚನೆಯ ಕುರಿತು ನಿರ್ಧಾರ ಮಾಡಿದ್ದೇವೆ. ಅಲ್ಲದೇ ದುಷ್ಕೃತ್ಯ ಎಸಗುತ್ತಿರುವ ಸಂಘಟನೆಗಳನ್ನು ನಿಷೇಧಿಸಲು ತನ್ನದೇ ಆದ ಕಾನೂನು ಇದೆ. ಆ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ ಎಂದಿದ್ದಾರೆ.

ಇದನ್ನೂ ಓದಿ : Praveen Nettaru murder : ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣದಲ್ಲಿ 10 ಮಂದಿ ಶಂಕಿತರು ವಶಕ್ಕೆ

ಇದನ್ನೂ ಓದಿ : Praveen’s murder : ಕನ್ಹಯ್ಯ ಲಾಲ್​ ಪರ ಪೋಸ್ಟ್​ ಹಾಕಿದ್ದೇ ಪ್ರವೀಣ್​ ಪಾಲಿಗೆ ಮಾರಕವಾಯ್ತಾ: ಮನೆ ಕಟ್ಟಿಸಬೇಕಿದ್ದ ಜಾಗದಲ್ಲಿ ಅಂತ್ಯಕ್ರಿಯೆ

Karnataka Praveen Murder Case Bjp Activist Outrage Janotsava Progarame Canceled Says CM Basavaraj Bommai

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular