PV Sindhu Commonwealth Games : ಭಾರತದ ಧ್ವಜಧಾರಿಯಾಗಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧೂ

ಬರ್ಮಿಂಗ್’ಹ್ಯಾಮ್: ಇಂಗ್ಲೆಂಡ್’ನ ಬರ್ಮಿಂಗ್’ಹ್ಯಾಮ್’ನಲ್ಲಿ ಗುರುವಾರ ಆರಂಭವಾಗಲಿರುವ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟಕ್ಕೆ (Commonwealth Games) ಕ್ಷಣಗಣನೆ ಆರಂಭವಾಗಿದೆ. ಕಾಮನ್’ವೆಲ್ತ್ ಗೇಮ್ಸ್ ಕ್ರೀಡಾ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ದೇಶಗಳ ಕ್ರೀಡಾತಾರೆಗಳು ಪಥಸಂಚಲನ ನಡೆಸಲಿದ್ದು, ಪಥಸಂಚಲನದಲ್ಲಿ ಒಲಿಂಪಿಕ್ ಪದಕ ವಿಜೇತೆ, ಖ್ಯಾತ ಶಟ್ಲರ್ ಪಿ.ವಿ ಸಿಂಧೂ (PV Sindhu) ಭಾರತದ ಧ್ವಜಧಾರಿಯಾಗಲಿದ್ದಾರೆ. ತ್ರಿವರ್ಣಧ್ವಜ ಹಿಡಿಯಲಿರುವ ಸಿಂಧೂ, ಭಾರತ ತಂಡವನ್ನು ಪಥಸಂಚಲನದಲ್ಲಿ ಮುನ್ನಡೆಸಲಿದ್ದಾರೆ.

ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ, 27 ವರ್ಷದ ಸಿಂಧೂ 2016ರ ರಿಯೊ ಒಲಿಂಪಿಕ್ಸ್’ನಲ್ಲಿ ಬೆಳ್ಳಿ ಪದಕ ಮತ್ತು2020ರ ಟೋಕಿಯೊ ಒಲಿಂಪಿಕ್ಸ್’ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಕಾಮನ್ವೆಲ್ತ್ ಗೇಮ್ಸ್’ನಲ್ಲಿ ಸಿಂಧೂ ಒಂದು ಚಿನ್ನ ಸಹಿತ ಒಟ್ಟು ಮೂರು ಪದಕ ಗೆದ್ದಿದ್ದಾರೆ.

2018ರ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್’ನ ಮಿಕ್ಸೆಡ್ ತಂಡ ವಿಭಾಗದಲ್ಲಿ ಚಿನ್ನ, ಮಹಿಳಾ ಸಿಂಗಲ್ಸ್’ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧೂ 2014ರ ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ಸ್’ನ ಮಹಿಳಾ ಸಿಂಗಲ್ಸ್’ನಲ್ಲಿ ಕಂಚಿನ ಪದಕ ಗೆದ್ದಿದ್ದರು.​

ಇದನ್ನೂ ಓದಿ : Women Cricketers Marriage Story : ಮಂದಾನ, ಮಿಥಾಲಿ, ಹರ್ಮನ್, ಮಹಿಳಾ ಕ್ರಿಕೆಟರ್”ಗಳೇಕೆ ಮದುವೆಯಾಗಲ್ಲ.. ಇಲ್ಲಿದೆ ಅಸಲಿ ಸತ್ಯ !

ಇದನ್ನೂ ಓದಿ : World Test Championship Final : ಟೆಸ್ಟ್ ವಿಶ್ವಕಪ್ ಫೈನಲ್’ಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಆತಿಥ್ಯ

Indian Badminton Player PV Sindhu flagbearer at CWG opening ceremony

Comments are closed.