ಸೋಮವಾರ, ಏಪ್ರಿಲ್ 28, 2025
HomekarnatakaKarnataka rains : ಮುಂದಿನ ಮೂರು ದಿನ ಕರ್ನಾಟಕದಲ್ಲಿ ಅಬ್ಬರಿಸಲಿದೆ ಮಳೆ : ಈ ಜಿಲ್ಲೆಗಳಲ್ಲಿ...

Karnataka rains : ಮುಂದಿನ ಮೂರು ದಿನ ಕರ್ನಾಟಕದಲ್ಲಿ ಅಬ್ಬರಿಸಲಿದೆ ಮಳೆ : ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

- Advertisement -

ಬೆಂಗಳೂರು : (Karnataka rains) ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್‌ ತಿಂಗಳ ಆರಂಭದಿಂದಲೂ, ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದು, ಮತ್ತುಳಿದ ದಿನಗಳಲ್ಲಿ ಒಣಹವೆಯಿಂದ ಕೂಡಿದ ವಾತಾವರಣ ಇತ್ತು. ಈ ವಾರದ ಆರಂಭದಿಂದಲೇ ಸಂಜೆವರೆಗೂ ಮೋಡ ಕವಿದ ವಾತಾವರಣದಿಂದ ಕೂಡಿದ್ದು, ರಾತ್ರಿ ವೇಳೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದೆ. ಇನ್ನು ರಾಜ್ಯದಲ್ಲಿ ಜೂನ್‌ 25ರಿಂದ ಮುಂಗಾರು ಮಳೆ ಚುರುಕುಗೊಳ್ಳಲಿದ್ದು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಅದರಲ್ಲೂ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಲಿದ್ದು, ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಕುಂದಾಪುರ, ಮಳವಳ್ಳಿ, ಕೋಟ, ಸಾಲಿಗ್ರಾಮ, ಕಾರ್ಕಳ, ಮಂಗಳೂರು ವಿಮಾನ ನಿಲ್ದಾಣ, ಬರಗೂರು, ಚಾಮರಾಜನಗರ, ಸುಳ್ಯ, ಹರದನಹಳ್ಳಿ, ಮುಲ್ಕಿ, ಸಂತೆ ಬೆನ್ನೂರು, ಚನ್ನಗಿರಿ, ಹೊನ್ನಾಳಿ, ಹೊಸಕೋಟೆ, ಯಲಹಂಕ, ಸಿಂಧನೂರು, ಸಿದ್ದಾಪುರ, ಚಿಕ್ಕಮಗಳೂರು, ದೇವನಹಳ್ಲೀ, ಉತ್ತರಹಳ್ಳಿ, ತಿಪಟೂರು, ಮದ್ದೂರು, ಮೂಡಿಗೆರೆಯಲ್ಲಿ ಮಳೆಯಾಗಲಿದೆ.

ರಾಜ್ಯದ ಕರಾವಳಿಯಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿರುಗಾಳಿಯು ಗಂಟೆಗೆ 40-45 ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ಮೀನುಗಾರರು, ಪ್ರವಾಸಿಗರು ಸಮುದ್ರ ಬಳಿ ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕಾಗಿದೆ.

ಇದನ್ನೂ ಓದಿ : Karnataka Milk Price Hike : ಕರ್ನಾಟಕ ಹಾಲಿನ ದರ ಏರಿಕೆ : ಕೆಎಂಎಫ್ ನೂತನ ಅಧ್ಯಕ್ಷರು ಹೇಳಿದ್ದೇನು?

ಇದನ್ನೂ ಓದಿ : Mid Day Meal : ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ, ಬಾಳೆಹಣ್ಣು ಕಟ್‌

ಜಿಲ್ಲೆಯಾದ್ಯಂತ ಮಳೆ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ಅಗ್ನಿಶಾಮಕ, ಗೃಹ ರಕ್ಷಕ ದಳದಲ್ಲಿ ಒಟ್ಟು 8 ಬೋಟ್‌ ಗಳಿದ್ದು, ಬೈಂದೂರು, ಮಲ್ಪೆ, ಕುಂದಾಪುರ, ಕಾರ್ಕಳ ಹಾಗೂ ಉಡುಪಿಯ ಅಗ್ನಿಶಾಮಕ ಕಚೇರಿಗಳಲ್ಲಿ 7 ಬೋಟುಗಳು ಲಭ್ಯವಿದ್ದು, ಗೃಹರಕ್ಷಕ ದಳದ ಬ್ರಹ್ಮಾವರ ಹಾಗೂ ಪಡುಬಿದ್ರಿಯಲ್ಲಿ ತಲಾ 1 ಬೋಟ್‌ ಜೊತೆಗೆ 7 ಜನರ ತಂಡವನ್ನು ಸಜ್ಜುಗೊಳಿಸಳಾಗಿದೆ. ಗೃಹ ರಕ್ಷಕದಳದಿಂದ ಸಮುದ್ರ ತೀರದ ಪ್ರದೇಶಗಳಲ್ಲಿ 10 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮಂಗಳೂರು ಕೇಂದ್ರ ಕಚೇರಿಯಲ್ಲಿ 100 ಸಿಬ್ಬಂದಿಗಳನ್ನು ಒಳಗೊಂಡಿರುವ ಎಸ್‌ಡಿಆರ್‌ಎಫ್‌ ತಂಡ ಹಾಗೂ 25 ಸಿಬ್ಬಂದಿಗಳನ್ನು ಒಳಗೊಂಡಿರುವ ಎನ್‌ಡಿಆರ್‌ಎಫ್‌ ತಂಡವನ್ನು ನಿಯೋಜಿಸಲಾಗಿದೆ. ಉಡುಪಿ ಜಿಲ್ಲೆಯ ಕಂಟ್ರೋಲ್‌ ರೂಮ್‌ ನಂಬ್ರ : 1077/0820=2574802 ಜಿಲ್ಲಾ ಅಗ್ನಿಶಾಮಕ ಕಚೇರಿ : 0820-2520333 ಜಿಲ್ಲಾಗೃಹರಕ್ಷಕ ದಳ : 0820 -2533650

Karnataka rains: Heavy rains in Karnataka for the next three days: Yellow alert announced in these districts

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular