Sylvester daCunha died : ಅಮುಲ್ ಗರ್ಲ್ ಜಾಹೀರಾತು ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ

ನವದೆಹಲಿ : (Sylvester daCunha died) ಅಮುಲ್‌ ಬ್ರ್ಯಾಂಡ್‌ ಅನ್ನು ವಿಶ್ವದಾದ್ಯಂತ ಪರಿಚಯಿಸಿದ್ದು ಅಮುಲ್‌ ಗರ್ಲ್‌ ಜಾಹೀರಾತು. 1960ರ ದಶಕದಲ್ಲಿ ಕಾಣಿಸಿಕೊಂಡ ಈ ಜಾಹೀರಾತು ವಿಶ್ವಮಟ್ಟದಲ್ಲಿ ಅಮುಲ್‌ ಬ್ರ್ಯಾಂಡ್‌ಗೆ ದೊಡ್ಡಮಟ್ಟದ ಪ್ರಖ್ಯಾತಿಯನ್ನು ತಂದುಕೊಟ್ಟಿತ್ತು. ಅಮುಲ್‌ ಗರ್ಲ್‌ ಜಾಹೀರಾತಿನ ಸೃಷ್ಟಿಕರ್ತ ಸಿಲ್ವೆಸ್ಟರ್‌ ಡಕುನ್ಹಾ ನಿಧನರಾಗಿದ್ದಾರೆ ಎಂದು ಗುಜರಾತ್‌ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಮಾಹಿತಿ ನೀಡಿದ್ದಾರೆ.

1960ರ ದಶಕದಲ್ಲಿ ಆರಂಭವಾದ ‘ಅಮುಲ್‌ ಗರ್ಲ್‌’ ಅಭಿಯಾನದ ಸೃಷ್ಟಿಕರ್ತ, ಜಾಹೀರಾತು ಉದ್ಯಮದ ಹಿರಿಯ ಉದ್ಯಮಿ ಸಿಲ್ವೆಸ್ಟರ್‌ ಡಕುನ್ಹಾ. ಮುಂಬೈನಲ್ಲಿ ದಕುನ್ಹಾ ಕಮ್ಯುನಿಕೇಷನ್ಸ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಸಿಲ್ವೆಸ್ಟರ್ ಡಕುನ್ಹಾ ಅವರು 1966 ರಲ್ಲಿ GCMMF ಒಡೆತನದ ಅಮುಲ್ ಬ್ರಾಂಡ್‌ಗಾಗಿ ‘ಅಟ್ಟರ್ಲಿ ಬಟರ್ಲಿ’ ಅಭಿಯಾನವನ್ನು ರೂಪಿಸಿದ್ದರು. ಭಾರತೀಯ ಹುಡುಗಿಯೊಬ್ಬಳು ಫ್ರಾಕ್‌ ಧರಿಸಿ ಕೈಯಲ್ಲಿ ಅಮುಲ್‌ ಬೆಣ್ಣೆ ಹಿಡಿದು ನಿಂತಿರುವ ಕಾರ್ಟೂನ್‌ ಗೃಹಿಣಿಯರನ್ನು ತನ್ನತ್ತ ಸೆಳೆದಿತ್ತು. ಮಾತ್ರವಲ್ಲ ಭಾರತದಲ್ಲಿ ಆರಂಭಗೊಂಡ ಅಮುಲ್‌ ಗರ್ಲ್‌ ಅಭಿಯಾನ ಇಂದು ವಿಶ್ವಮಟ್ಟದಲ್ಲಿ ಬಹುಪ್ರಖ್ಯಾತಿಯನ್ನು ಪಡೆದುಕೊಂಡಿತ್ತು.

ಇದನ್ನೂ ಓದಿ : Delhi Crime News : 5-ಸ್ಟಾರ್ ಹೋಟೆಲ್‌ನಲ್ಲಿ 2 ವರ್ಷ ತಂಗಿದ್ದ ವ್ಯಕ್ತಿ 58 ಲಕ್ಷರೂ. ಬಿಲ್ ಪಾವತಿಸದೆ ಎಸ್ಕೇಪ್

ಇದನ್ನೂ ಓದಿ : Karnataka Milk Price Hike : ಕರ್ನಾಟಕ ಹಾಲಿನ ದರ ಏರಿಕೆ : ಕೆಎಂಎಫ್ ನೂತನ ಅಧ್ಯಕ್ಷರು ಹೇಳಿದ್ದೇನು?

ಸಿಲ್ವೆಸ್ಟರ್ ಡಕುನ್ಹಾ ಅವರು ಆರಂಭಿಸಿದ ಜಾಹೀರಾತು ಏಜೆನ್ಸಿಯನ್ನು ಇದೀಗ ಅವರ ಮಗ ರಾಹುಲ್‌ ದಕುನ್ನಾ ಮುನ್ನೆಡೆಸುತ್ತಿದ್ದಾರೆ. ಡಕುನ್ಹಾ ಅವರ ನಿಧನಕ್ಕೆ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಸಂತಾಪ ಸೂಚಿಸಿದ್ರೆ, ತೃಣಮೂಲ ಕಾಂಗ್ರೆಸ್‌ ಸಂಸದ ಡೆರೆಕ್‌ ಒ ಬ್ರೇನ್‌ ಅವರು ಸಿಲ್ವೆಸ್ಟರ್ ಡಕುನ್ಹಾ ಅವರನ್ನು ಜಾಹೀರಾತು ದಂತಕಥೆ ಎಂದು ಕರೆದಿದ್ದಾರೆ.

Sylvester daCunha died : Amul Girl Creator Sylvester daCunha dies

Comments are closed.