Karnataka Rajyotsava 2022 : ಕನ್ನಡ ರಾಜ್ಯೋತ್ಸವದ ಇತಿಹಾಸ, ಮಹತ್ವ, ಆಚರಣೆ : ಸಂಪೂರ್ಣ ಮಾಹಿತಿ

(Karnataka Rajyotsava 2022 )ಕನ್ನಡ ರಾಜ್ಯೋತ್ಸವ ಕನ್ನಡಿಗರು ಹೆಮ್ಮೆಯಿಂದ ತಲೆಯೆತ್ತಿ ನೋಡುವ ದಿನ. ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರಾಂತ್ಯಗಳನ್ನು ಒಗ್ಗೂಡಿಸಿ ಒಂದು ರಾಜ್ಯವನ್ನಾಗಿ ಘೋಷಣೆ ಮಾಡಿದ ದಿನ ನವೆಂಬರ್‌ 1. ಇದೇ ಕಾರಣಕ್ಕೆ ಈ ದಿನವನ್ನು ಕನ್ನಡಿಗರು ನಾಡಹಬ್ಬವಾಗಿ ಆಚರಿಸುತ್ತಾರೆ. ಕರ್ನಾಟಕ ರಾಜ್ಯೋತ್ಸವದ ದಿನವನ್ನು ಸರಕಾರ ರಜಾ ದಿನವೆಂದು ಘೋಷಣೆ ಮಾಡಿದೆ. ಇಡೀ ಕರ್ನಾಟಕ ರಾಜ್ಯದಾದ್ಯಂತ ಕನ್ನಡಿಗರು ಹೆಮ್ಮೆಯಿಂದ ಆಚರಿಸುತ್ತಾರೆ . ಈಗ ನಾವು 67 ನೇ ಕರ್ನಾಟಕ ರಾಜ್ಯೋತ್ಸವ(Karnataka Rajyotsava 2022 )ದ ಸಂಭ್ರಮದಲ್ಲಿದ್ದೇವೆ. ಈ ಕುರಿತು ಕನ್ನಡ ರಾಜ್ಯೋತ್ಸವದ ಇತಿಹಾಸ , ಮಹತ್ವ , ಆಚರಣೆ , ಪ್ರಶಸ್ತಿಗಳ ಕುರಿತಾಗಿ ಕೆಲವು ಮಾಹಿತಿಗಳನ್ನು ತಿಳಿಯೋಣ .

ಕನ್ನಡ ರಾಜ್ಯೋತ್ಸವ(Karnataka Rajyotsava 2022 )ದ ಇತಿಹಾಸ :

ಕರ್ನಾಟಕ ಏಕಿಕರಣ ಚಳುವಳಿಯನ್ನು ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು 1905 ರಲ್ಲಿ ಪ್ರಾರಂಭಿಸಿದರು . ಭಾರತವು ಗಣರಾಜ್ಯವಾದ ನಂತರ ರಾಜ್ಯವಾರು ವಿಂಗಡಣೆಗಳು ಪ್ರಾರಂಭಗೊಂಡವು . ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಾಂತ್ಯಗಳು ಹರಿದು ಹಂಚಿ ಹೋಗಿದ್ದವು . ಕನ್ನಡ ಭಾಷಿಕರೆಲ್ಲರೂ ಕನ್ನಡ ನಾಡಿಗೆ ಸೇರಬೇಕು ಎನ್ನುವ ಆಶಯ ಗಟ್ಟಿಯಾಗತೊಡಗಿತು . ನಂತರ ರಾಜ್ಯ ಪುನರ್‌ ಸಂಘಟನಾ ಕಾಯ್ದೆ ಜಾರಿಗೆ ಬಂದು ಕೊಡಗು ಕರ್ನಾಟಕದ ಭಾಗವಾಯಿತು. ಮದ್ರಾಸ್‌ , ಬಾಂಬೆ , ಹೈದ್ರಾಬಾದ್‌ ಗಳಲ್ಲಿ ಸೇರಿಕೊಂಡಿದ್ದ ಕನ್ನಡ ಮಾತನಾಡುವವರ ನೆಲ ಕರ್ನಾಟಕದೊಳಗೆ ಸೇರಿಕೊಂಡಿತು . ದಕ್ಷಿಣ ಭಾರತದಲ್ಲಿ ಹರಿದು ಹಂಚಿಹೋಗಿದ್ದ ಎಲ್ಲಾ ಪ್ರಾಂತ್ಯಗಳನ್ನು ಒಗ್ಗೂಡಿಸಿ ಮೈಸೂರು ರಾಜ್ಯ 1950 ನವೆಂಬರ್‌ 1 ರಲ್ಲಿ ಉದಯವಾಯಿತು . ಆ ದಿನವನ್ನೇ ನಾವಿಂದು ಕನ್ನಡ ರಾಜ್ಯೋತ್ಸವ ಎಂದು ಆಚರಿಸಲಾಗುತ್ತಿದೆ .

ಇದನ್ನೂ ಓದಿ : Karnataka : ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದಿದ್ದು ಹೇಗೆ.. ಕನ್ನಡ ಧ್ವಜದಲ್ಲಿ ಹಳದಿ, ಕೆಂಪು ಬಣ್ಣ ಯಾಕಿದೆ, ಇಲ್ಲಿದೆ ಮಾಹಿತಿ

ಕನ್ನಡ ರಾಜ್ಯೋತ್ಸವದ ಮಹತ್ವ ;
ಕನ್ನಡ ಇತಿಹಾಸ , ಹೋರಾಟಗಳು ಹಾಗೂ ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಅದೇಷ್ಟೋ ಮಹನೀಯರನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವವು ಅತಿ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ . ಅಲ್ಲದೇ ಕನ್ನಡ ನಾಡಿಗಾಗಿ , ನಾಡು ನುಡಿಗಾಗಿ ದುಡಿದ ಮಹನೀಯರನ್ನು ಗೌರವಿಸುವ ಮೂಲಕ ಜನತೆಗೆ ನಾಡಿನ ಸೇವೆಯನ್ನು ಮುಂದುವರಿಸಲು ಪ್ರೇರಣೆ ನೀಡಿದಂತಾಗುತ್ತದೆ . ಕನ್ನಡ ನಾಡು ನುಡಿಯ ಮಹತ್ವವನ್ನು ಕನ್ನಡ ಜನತೆ ಅರಿತುಕೊಂಡಾಗ ಮಾತ್ರವೇ ಕನ್ನಡಕ್ಕಾಗಿ , ರಾಜ್ಯ ಏಕೀಕರಣಕ್ಕಾಗಿ ದುಡಿದ ಮಹನೀಯರ ಶ್ರಮಕ್ಕೆ ಮತ್ತು ಕನ್ನಡ ರಾಜ್ಯೋತ್ಸವದ ಆಚರಣೆಗೆ ಒಂದು ಸಾರ್ಥಕತೆ ಸಿಗುತ್ತದೆ .

ಇದನ್ನೂ ಓದಿ : ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆ

ಕನ್ನಡ ರಾಜ್ಯೋತ್ಸವದ ಆಚರಣೆ ;
ನಾಡಿನ ಸಮಸ್ತ ಜನತೆ ಯಾವುದೇ ಜಾತಿ , ಧರ್ಮ , ಪಂಥಗಳ ಭೇದ ಭಾವಗಳಿಲ್ಲದೆ ಒಗ್ಗಟ್ಟಿನಿಂದ ಆಚರಿಸುವ ಏಕೈಕ ಹಬ್ಬ ಕನ್ನಡ ರಾಜ್ಯೋತ್ಸವ . ಅರಿಶಿನ , ಕುಂಕುಮದ ಸಂಕೇತವೆಂಬಂತೆ ಹಳದಿ ಕೆಂಪು ಮಿಶ್ರಿತ ಬಾವುಟವನ್ನು ಶಾಲಾ-ಕಾಲೇಜು , ಕಂಪನಿ , ಸರ್ಕಾರಿ ಕಚೇರಿಗಳಲ್ಲಿ ಭಾನೆತ್ತರಕ್ಕೆ ಹಾರಿಸುತ್ತಾ, ನಾಡಗೀತೆಯನ್ನು ಹಾಡುವ ಮೂಲಕವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ . ಕೆಲವು ಕನ್ನಡ ಪರ ಸಂಘಟನೆಗಳು, ಸ್ವಯಂ ಸೇವಾ ಸಂಘಗಳು, ಎನ್ ಜಿ ಒಗಳು ಸಹ ಕನ್ನಡ ಮಾತೆ ಭುವನೇಶ್ವರಿಯ ಭಾವಚಿತ್ರವನ್ನಿಟ್ಟು ಮೆರವಣಿಗೆಗಳನ್ನು ನಡೆಸುತ್ತಾರೆ . ರಾಜ್ಯೋತ್ಸವದ ಸಂದರ್ಭದಲ್ಲಿ ರಕ್ತದಾನ ಶಿಬಿರಗಳು, ಕನ್ನಡ ಪರ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ . ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳ ಮೂಲಕ ಕನ್ನಡಕ್ಕಾಗಿ , ಕನ್ನಡ ನಾಡಿಗಾಗಿ ದುಡಿದವರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ.

ಇದನ್ನೂ ಓದಿ : Kannada Rajyotsava 2022 : ಕನ್ನಡ ರಾಜ್ಯೋತ್ಸವದ ಬಗ್ಗೆ ನಿಮಗೆಷ್ಟು ಗೊತ್ತು ?

ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನೀಯರು ;

ನೂರಾರು ಮಹನೀಯರು , ಲಕ್ಷಾಂತರ ಪ್ರಜೆಗಳ ಹೋರಾಟದ ಫಲವಾಗಿ ಇಂದು ನಾವು ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ . ಕನ್ನಡ ನಾಡು ಏಕೀಕರಣವಾಗಲು ಹಲವು ಮಹನೀಯರ ಕೊಡುಗೆ ಅಪಾರ . ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾವ್‌ , ಕೆ. ಶಿವರಾಮ್‌ ಕಾರಂತ್‌ , ಕುವೆಂಪು , ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ , ಹುಯಿಲಗೋಳ ನಾರಾಯಣರಾವ್‌ , ಎ.ಎನ್‌ ಕೃಷ್ಣರಾವ್‌ , ಬಿ.ಎಮ್‌ ಶ್ರೀಕಂಠಯ್ಯ ಸೇರಿದಂತೆ ನೂರಾರು ಮಹನೀಯರು ಹಾಗೂ ಲಕ್ಷಾಂತರ ಪ್ರಜೆಗಳ ಹೋರಾಟದ ಫಲವೇ ಈ ಕನ್ನಡ ರಾಜ್ಯೋತ್ಸವ .

ಕನ್ನಡ ರಾಜ್ಯೋತ್ಸವ ಪ್ರಶಸ್ತಿ;

ಕರ್ನಾಟಕ ಸರ್ಕಾರದಿಂದ ಕೊಡಲಾಗುವ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯೇ ಈ ಕನ್ನಡ ರಾಜ್ಯೋತ್ಸವ ಪ್ರಶಸ್ತಿ . ಕಲೆ , ಸಾಹಿತ್ಯ, ಸಿನಿಮಾ ,ಸಂಗೀತ , ಯಕ್ಷಗಾನ, ಶಿಲ್ಪಕಲೆ ,ಚಿತ್ರಕಲೆ , ಸಮಾಜಸೇವೆ, ಪತ್ರಿಕೋದ್ಯಮ , ಕ್ರೀಡೆ , ಶಿಕ್ಷಣ , ತಂತ್ರಜ್ಞಾನ ಸೇರಿದಂತೆ ವಿವಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ .

ಈ ರಾಜ್ಯೋತ್ಸವ ಪ್ರಶಸ್ತಿಯನ್ನು1955 ರಿಂದ ನೀಡಲು ಆರಂಭಿಸಲಾಗಿದೆ.ಸಾಮಾನ್ಯವಾಗಿ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತದೆ . ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿಯ ಗೌರವ ಧನ , 25 ಗ್ರಾಂ ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ, ಮತ್ತು ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ . ಅಲ್ಲದೆ ಅರ್ಹ ಪ್ರಶಸ್ತಿ ಪುರಸ್ಕೃತರಿಗೆ ಸರ್ಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮ ಕೂಡ ಜಾರಿಯಲ್ಲಿದೆ . ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಕಡೆಯಿಂದ ಪ್ರಶಸ್ತಿ ಪ್ರಧಾನವಾಗುತ್ತದೆ

Comments are closed.