ಬೆಂಗಳೂರು: Namma Metro QR Code : ಸಿಲಿಕಾನ್ ಸಿಟಿಯ ಉದ್ಯೋಗಸ್ಥರು, ಶಿಕ್ಷಕರು ಹಾಗೂ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ ಎನ್ನಿಸಿರೋ ನಮ್ಮ ಮೆಟ್ರೋ ಇತ್ತೀಚಿಗೆ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವ ದಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಗಿಫ್ಟ್ ನೀಡಿದ್ದು, ನಾಳೆಯಿಂದ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣಿಗರು ಕೇವಲ ಮೊಬೈಲ್ ಬಳಸಿ ನಮ್ಮಮೆಟ್ರೋ ದಲ್ಲಿ ಸಂಚರಿಸಬಹುದಾಗಿದೆ.
ಹೌದು ನಮ್ಮ ಮೆಟ್ರೋದಲ್ಲಿ ನಾಳೆಯಿಂದ ಕ್ಯೂ ಆರ್ ಕೋಡ್ ಬಳಸಿ ಪ್ರಯಾಣಿಸುವ ವ್ಯವಸ್ಥೆ ಆರಂಭವಾಗಲಿದೆ. ಎಂಟ್ರಿ ಗೇಟ್ ನಲ್ಲಿ ಅಳವಡಿಸಲಾದ ಕ್ಯೂ ಆರ್ ಕೋಡನ್ನು ನೀವು ಸ್ಕ್ಯಾನ್ ಮಾಡಿ, ನಿಮಗೆ ಅಗತ್ಯವಾದ ಮಾರ್ಗವನ್ನು ಅಯ್ದುಕೊಂಡು ನೀವು ಪ್ರಯಾಣಿಸುವ ಸ್ಥಳವನ್ನು ನಮೂದಿಸಿ ಹಣ ಪಾವತಿಸಬಹುದು. ಮೊದಲು ನಮ್ಮ ಮೆಟ್ರೋ ಎಂಬ ಮೊಬೈಲ್ ಅಪ್ಲಿಕೇಶನ್ ಡೌನ್ ಲೌಡ್ ಮಾಡಿಕೊಂಡು ನೋಂದಾಯಿತರಾಗಬೇಕು. ನಂತರ ಅಧಿಕೃತ ಬಿಎಂಅರ್ ಸಿಎಲ್ ನ ವಾಟ್ಸ್ ಅಪ್ ಚಾಟ್ ನಂಬರ್ 8105556677 ಗೆ ಹಾಯ್ ಎಂಬ ಮೆಸೆಜ್ ಕಳಿಸುವ ಮೂಲಕ QR ಟಿಕೇಟ್ ಪಡೆಯಬಹುದು.
ಒಂದು ಭಾರಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡ ಬಳಿಕ ಪ್ರತಿನಿತ್ಯ ನೀವು ಎಲ್ಲಿಂದ ಎಲ್ಲಿಗೆ ಪ್ರಯಾಣಿಸಬೇಕೆಂಬುದನ್ನು ನಮೂದಿಸಿ ಟಿಕೇಟ್ ಪಡೆಯಬಹುದು. ಬಳಿಕ ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಚಾಲಿತ ಗೇಟ್ ಗಳ ಮೂಲಕ ಕ್ಯೂ ಆರ್ ರೀಡರ್ ಗಳಿಗೆ ತಮ್ಮ ಮೊಬೈಲ್ ನಲ್ಲಿರೋ ಕ್ಯೂಅರ್ ಟಿಕೇಟ್ ಗಳನ್ನು ಸ್ಕ್ಯಾನ್ ಮಾಡಿ ಒಳ ಪ್ರವೇಶಿಸಬಹುದು ಮತ್ತು ಪ್ರಮಾಣದ ಬಳಿಕ ಹೊರಬೀಳಬಹುದು. ರಾಜ್ಯೋತ್ಸವದ ಹೊತ್ತಿನಲ್ಲಿ ಪ್ರಯಾಣಿಕರಿಗೆ ಇಂತಹದೊಂದು ಸಿಹಿಸುದ್ದಿ ನೀಡಿರೋ ನಮ್ಮ ಮೆಟ್ರೋ ಇದರೊಂದಿಗೆ ಡಿಜಿಟಲಿಕರಣ ಪ್ರೇರೇಪಿಸುವ ನಿಟ್ಟಿನಲ್ಲಿ QR ಕೋಡ್ ನಲ್ಲಿ ಟಿಕೇಟ್ ಪಡೆಯುವವರಿಗೆ ಶೇಕಡಾ 5 ರಷ್ಟು ರಿಯಾಯತಿ ನೀಡಲಿದೆ.
Namma Metro is happy to give additional facility for commuters- QR Code based Single Journey Metro Travel Tickets can be downloaded from WhatsApp from 1st Nov 2022. Commuters are requested to make use of this facility @cpronammametro @iyerbharathi #KannadaRajyotsava pic.twitter.com/JUvDyrY1PH
— Srivas Rajagopalan (@srivasrbmrccoi1) October 31, 2022
ಕೇವಲ ರಿಯಾಯತಿ ಮಾತ್ರವಲ್ಲದೇ, ಒಂದೊಮ್ಮೆ ಟಿಕೇಟ್ ಖರೀದಿಸಿದ ಬಳಿಕ ಪ್ರಯಾಣ ರದ್ದಾದರೇ, ಅಂದೇ ಟಿಕೇಟ್ ರದ್ಧತಿ ವ್ಯವಸ್ಥೆ ಬಳಿಕ ಹಣ ಹಿಂಪಡೆಯುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಈ ಕ್ಯೂ ಆರ್ ಪಡೆಯುವ ಬಗ್ಗೆ ಮಾಹಿತಿ ಪಡೆಯುವ ಅವಕಾಶ ನೀಡಲಾಗಿದೆ. ಒಟ್ಟಿನಲ್ಲಿ ನಮ್ಮ ಮೆಟ್ರೋ ಟಿಕೇಟ್ ಹಾಗೂ ಚೆಂಜ್ ,ಸಮಯ ಉಳಿತಾಯದ ಸಮಸ್ಯೆ ತಪ್ಪಿಸಲು ಕ್ಯೂ ಆರ್ ಕೋಡ್ ಪರಿಚಯಿಸಿದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ : Karnataka Weather Report : ನ.2 ರಿಂದ ಮತ್ತೆ ವರುಣಾರ್ಭಟ :ಕರ್ನಾಟಕದಲ್ಲಿ Yellow Alert ಘೋಷಣೆ
ಇದನ್ನೂ ಓದಿ : Parking Policy: ಬೆಂಗಳೂರಿಗರೇ ಗಮನಿಸಿ; ಇನ್ಮುಂದೆ ಬೇಕಾಬಿಟ್ಟಿ ಗಾಡಿ ಪಾರ್ಕ್ ಮಾಡಿದ್ರೆ ಬೀಳುತ್ತೆ ಫೈನ್
karnataka rajyotsava 2022 Namma Metro Strat QR Code for Passengers