ಬೆಂಗಳೂರು: ಕರ್ನಾಟಕದಲ್ಲಿ ಹೊಸ ವರ್ಷಾಚರಣೆ (New Year 2022) ಮತ್ತು ಕ್ರಿಸ್‌ಮಸ್ ಆಚರಣೆಗೆ ರಾಜ್ಯ ಸರಕಾರ ಅವಕಾಶ ಕಲ್ಪಿಸಿದೆ. ಆದರೆ ಕೋವಿಡ್ ಮಾರ್ಗಸೂಚಿಯಂತೆಯೇ ಆಚರಿಸಬೇಕೆಂದು ಸೂಚಿಸಿದೆ. ಆದರೆ ಬಹಿರಂಗವಾಗಿ ಹೊಸ ವರ್ಷಾಚರಣೆ ಹಾಗೂ ಬಾರ್, ಪಬ್‌ಗಳಲ್ಲಿ ಡಿಜೆಗೆ ಬ್ರೇಕ್ ಹಾಕಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2ರವರೆಗೆ ಹೊಸ ರೂಲ್ಸ್ ರಾಜ್ಯದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು.
ರಾಜ್ಯದಲ್ಲಿ ಓಮಿಕ್ರಾನ್ ಹಾಗೂ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕೋವಿಡ್ ತಾಂತ್ರಿಕ ಸಮಿತಿಯ ಸಭೆ ನಡೆಸಿದ್ರು. ಸಭೆಯ ನಂತರ ಮಾತನಾಡಿದ ಅವರು, ಬಹಿರಂಗವಾಗಿ ಹೊಸ ವರ್ಷಾಚರಣೆಯ ಮಾಡುವುದಕ್ಕೆ ಅವಕಾಶ ನಿರಾಕರಿಸಲಾಗಿದೆ. ಸಾರ್ವಜನಿಕವಾಗಿ ಜನರು ಹೊಸ ವರ್ಷಾಚರಣೆಯನ್ನು ಮಾಡುವಂತಿಲ್ಲ. ಅಲ್ಲದೇ ಕ್ಲಬ್, ಪಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಡಿಜೆ ಪಾರ್ಟಿ ಆಯೋಜನೆಗೆ ಅವಕಾಶವಿಲ್ಲ ಎಂದಿದ್ದಾರೆ.
ಅಪಾರ್ಟ್‌ಮೆಂಟ್‌ಗಳಲ್ಲಿಯೂ ಡಿಜೆ ಪಾರ್ಟಿ ಆಯೋಜಿಸುವಂತಿಲ್ಲ. ಪಬ್, ಬಾರ್, ಕ್ಲಬ್‌ಗಳಿಗೆ ಹೋಗುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆಯನ್ನು ಪಡೆದಿರಬೇಕು. ಡಿಸೆಂಬರ್ 30ರಿಂದ ಜನವರಿ 2ರವರೆಗೆ ರಾಜ್ಯದಲ್ಲಿ ಹೊಸ ವರ್ಷಾಚರಣೆಯ ಈ ಹೊಸ ರೂಲ್ಸ್ ಜಾರಿಯಲ್ಲಿ ಇರಲಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕ್ರಿಸ್‌ಮಸ್ ಆಚರಣೆಯನ್ನು ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮನವಿ ಮಾಡಿಕೊಂಡಿದ್ದಾರೆ.
ಎಂಜಿ ರೋಡ್ ಬ್ರಿಗೇಡ್ ರೋಡ್ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ, ಅಲ್ಲದೇ ಬಾರ್ ಆಂಡ್ ರೆಸ್ಟೋರೆಂಟ್‌ಗಳಲ್ಲಿ ಶೇ. 50ರಷ್ಟು ಪ್ರವೇಶಕ್ಕೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗಿದೆ. ರಾಜ್ಯದಲ್ಲಿ ದಿನೇ ದಿನೇ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈಗಾಗಲೇ ಕೇಂದ್ರ ಸರಕಾರ ಫೆಬ್ರವರಿ ತಿಂಗಳಲ್ಲಿ ಓಮಿಕ್ರಾನ್ ಸ್ಪೋಟವಾಗುವ ಸೂಚನೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕಠಿಣ ನಿಯಮ ಜಾರಿಗೆ ಬರುವ ಸಾಧ್ಯತೆಯಿದೆ.
ಇದನ್ನೂ ಓದಿ : Omicron Coronavirus : ದೇಶದಲ್ಲಿ ಸದ್ದಿಲ್ಲದೇ ಏರಿಕೆ ಕಂಡ ಒಮಿಕ್ರಾನ್ ಪ್ರಕರಣ: ದೇಶಾದ್ಯಂತ 200 ಪ್ರಕರಣ ವರದಿ
ಇದನ್ನೂ ಓದಿ : Athiya Shetty : ಬಾಡಿ ಶೇಮಿಂಗ್ ಮಾಡುವವರ ವಿರುದ್ಧ ಖಡಕ್ ಹೇಳಿಕೆ ಕೊಟ್ಟ ನಟಿ ಆಥಿಯಾ ಶೆಟ್ಟಿ
( Restrictions on Mass New Year 2022 Celebrations From december 30 to January 2nd : CM Basavaraj Bommai)