Panama Papers : ಏನಿದು ಪನಾಮ ಪೇಪರ್ಸ್ ಲೀಕ್​? ಇದರಲ್ಲಿ ಐಶ್ವರ್ಯಾ ರೈ ಹೆಸರು ಸಿಲುಕಿದ್ದೇಗೆ? ಇಲ್ಲಿದೆ ಮಾಹಿತಿ

ಸುಮಾರು ಐದು ವರ್ಷಗಳ ಹಿಂದೆ ವಿಶ್ವಾದ್ಯಂತ ತಲ್ಲಣ ಮೂಡಿಸಿದ್ದ ಪನಾಮ ಪೇಪರ್ಸ್ ( Panama Papers leaks )​ ಸೋರಿಕೆ ಹಗರಣ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ ಬಾಲಿವುಡ್​ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Abhishek Bachchan)​ ಹೆಸರು ಪನಾಮ ಪೇಪರ್ಸ್​ ಹಗರಣದಲ್ಲಿ ಸಿಲುಕಿಕೊಂಡಿದೆ. ಪನಾಮ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ಐಶ್ವರ್ಯಾ ರೈರನ್ನು ಜಾರಿ ನಿರ್ದೇಶನಾಲಯ ಸತತ ಐದೂವರ ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಹಾಗಾದರೆ ಏನಿದು ಪನಾಮ ಪೇಪರ್ಸ್ ಹಗರಣ..? ಇದರಲ್ಲಿ ಐಶ್ವರ್ಯಾ ರೈ ವಿರುದ್ಧ ಎದುರಾದ ಆರೋಪಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಏನಿದು ಪನಾಮ ಪೇಪರ್ಸ್ ಲೀಕ್​..?

ಪನಾಮ ಉತ್ತರ ಹಾಗೂ ದಕ್ಷಿಣ ಅಮೆರಿಕದ ಮಧ್ಯ ಭಾಗದಲ್ಲಿರುವ ಒಂದು ದೇಶವಾಗಿದೆ. ಇದೇ ದೇಶದ ಕಂಪನಿ ಮೊಸಾಕ್​ ಫೇನ್ಸೆಕಾ. ಈ ಕಂಪನಿಯನ್ನು 1977ರಲ್ಲಿ ಸ್ಥಾಪನೆ ಮಾಡಲಾಯ್ತು. ಪ್ರಪಂಚಾದ್ಯಂತ ಇದರೊಂದಿಗೆ 3 ಲಕ್ಷ ಕಂಪನಿಗಳು ಸಂಬಂಧ ಹೊಂದಿವೆ. ಇವುಗಳ ಏಜೆಂಟ್​ಗಳಾಗಿ ಕಾರ್ಯ ನಿರ್ವಹಿಸುತ್ತದೆ. ಮೊಸಾಕ್​ ಫೊನ್ಸೆಕಾದ ಲಕ್ಷಾಂತರ ದಾಖಲೆಗಳು ಸೋರಿಕೆಯಾಗಿದ್ದು ಇದನ್ನೇ ಪನಾಮ ಪೇಪರ್ಸ್​ ಲೀಕ್​ ಎಂದು ಹೇಳಲಾಗುತ್ತದೆ.

ಈ ದಾಖಲೆಗಳು ಜರ್ಮನ್​ ಪತ್ರಿಕೆ Süddeutsche Zeitung ಅನ್ನು ತಲುಪಿತ್ತು. ಅದು ಈ ದಾಖಲೆಗಳನ್ನು ತನಿಕಾ ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟವಾದ ಐಸಿಐಜೆಗೆ ಹಸ್ತಾಂತರಿಸಿದೆ. ಇದರ ನಂತರ ವಿಶ್ವದ 78 ದೇಶಗಳ 107 ಮಾಧ್ಯಮ ಸಂಸ್ಥೆಗಳ 400ಕ್ಕೂ ಹೆಚ್ಚು ಪತ್ರಕರ್ತರು ಒಟ್ಟಾಗಿ ಈ ದಾಖಲೆಗಳ ಪರಿಶೀಲನೆಯನ್ನು ಮಾಡಿದರು.

ICIJ 1977 ರಿಂದ 2015 ರವರೆಗಿನ ಸುಮಾರು 40 ವರ್ಷಗಳ ದಾಖಲೆಗಳನ್ನು ಪರಿಶೀಲಿಸಿತು ಮತ್ತು 2.25 ಲಕ್ಷಕ್ಕೂ ಹೆಚ್ಚು ಆಫ್‌ಶೋರ್ ಕಂಪನಿಗಳನ್ನು ತನಿಖೆ ಮಾಡಿದೆ. ಇದರ ನಂತರ, 2016 ರ ಆರಂಭದಲ್ಲಿ, ICIJ ವಿಶ್ವದ 193 ದೇಶಗಳ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಹೆಸರನ್ನು ಇದರಲ್ಲಿ ಬಹಿರಂಗಪಡಿಸಿತು. ಈ ಜನರು ಮೋಸ್ಕಾ ಫೋನ್ಸೆಕಾ ಸಹಾಯದಿಂದ ಹಣ ವರ್ಗಾವಣೆ ಮತ್ತು ತೆರಿಗೆ ವಂಚನೆ ಮೂಲಕ ತಮ್ಮ ಸಂಪತ್ತನ್ನು ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಪನಾಮ ಪೇಪರ್‌ಗಳ ಸೋರಿಕೆ ಪಟ್ಟಿಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಬೆನಜೀರ್ ಭುಟ್ಟೊ, ಈಜಿಪ್ಟ್ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್, ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಸೇರಿದಂತೆ ವಿಶ್ವದ 140 ಪ್ರಬಲ ರಾಜಕಾರಣಿಗಳ ಹೆಸರುಗಳು ಥಳುಕು ಹಾಕಿಕೊಂಡಿವೆ.

ಈ ಪಟ್ಟಿಯಲ್ಲಿ ಸುಮಾರು 500 ಭಾರತೀಯರ ಹೆಸರೂ ಇತ್ತು. ಅವರಲ್ಲಿ ಅಮಿತಾಬ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್, ಡಿಎಲ್‌ಎಫ್‌ನ ಕೆಪಿ ಸಿಂಗ್, ಇಂಡಿಯಾ ಬುಲ್ಸ್‌ನ ಸಮೀರ್ ಗೆಹ್ಲೋಟ್, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಸೇರಿದಂತೆ ಹಲವು ಪ್ರಭಾವಿಗಳ ಹೆಸರುಗಳಿವೆ. ಈ ಕೇಸ್​ನ ಬಳಿಕ ಅಂದಿನ ಪಾಕ್​ ಪ್ರಧಾನಿ ನವಾಜ್​ ಷರೀಫ್​ ತಮ್ಮ ಪದವಿಯಿಂದ ಕೆಳಗಿಳಿದಿದ್ದರು.

ಇದನ್ನು ಓದಿ :Delhi’s Mohalla clinic : ದೆಹಲಿ ಮೊಹಲ್ಲಾ ಕ್ಲಿನಿಕ್​ನಲ್ಲಿ ಔಷಧಿ ಸೇವಿಸಿದ ಮೂವರು ಮಕ್ಕಳು ಸಾವು..!

ಇದನ್ನೂ ಓದಿ : Omicron Coronavirus : ದೇಶದಲ್ಲಿ ಸದ್ದಿಲ್ಲದೇ ಏರಿಕೆ ಕಂಡ ಒಮಿಕ್ರಾನ್​ ಪ್ರಕರಣ: ದೇಶಾದ್ಯಂತ 200 ಪ್ರಕರಣ ವರದಿ

Panama Papers leaks mossac fonseca Aishwarya Rai Abhishek Bachchan

Comments are closed.