Earthquake in Dakshina Kannada : ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿಂದು ಮತ್ತೆ ಲಘು ಭೂಕಂಪನ : ಆತಂಕದಲ್ಲಿ ಜನತೆ

ಮಂಗಳೂರು : ಕಳೆದ ಎರಡು ದಿನಗಳ ಹಿಂದೆಯಷ್ಟೇ ದಕ್ಷಿಣ ಕನ್ನಡ ಹಾಗೂ ಮಡಿಕೇರಿ ಜಿಲ್ಲೆಯಲ್ಲಿ ಲಘು ಭೂಕಂಪ (Earthquake in Dakshina Kannada) ಉಂಟಾದ ಬೆನ್ನಲ್ಲೇ ಇದೀಗ ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಘು ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 7.45ರ ಸುಮಾರಿಗೆ ಭೂಮಿ ಕಂಪಿಸಿದ್ದು, ಪ್ರಾಣ ಉಳಿಸಿ ಕೊಳ್ಳಲು ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಸಂಪಾಜೆ, ಅರಂತೋಡು, ಪೆರಾಜೆ, ಜಾಲ್ಸೂರು, ಉಬರಡ್ಕ, ತೊಡಿಕಾನ, ಮಿತ್ತೂರು ಮುಂತಾದೆಡೆ ಕಂಪನದ ಅನುಭವವಾಗಿದೆ. ಬೆಳಗ್ಗೆ 7.45ರ ಸುಮಾರಿಗೆ ಭೂಮಿಯು ಅಲುಗಾಡುವ ಮೊದಲು, ಮನೆಗಳೊಳಗಿದ್ದ ಪಾತ್ರೆಗಳೆಲ್ಲ ಕೆಳಗೆ ಉರುಳಿ ಬಿದ್ದಿತ್ತು. ಅಲ್ಲದೇ ಮೂರರಿಂದ ನಾಲ್ಕು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿತ್ತು. ಜೂನ್ 25 ರಂದು ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ದಾಖಲಾಗಿತ್ತು. ಬೆಳಿಗ್ಗೆ 9.09 ರ ಸುಮಾರಿಗೆ ದಾಖಲಾಗಿದೆ ಮತ್ತು ವ್ಯಾಪ್ತಿ ಭೂಕಂಪದ ಕೇಂದ್ರದಿಂದ 4.7 ಕಿ.ಮೀ. ದೂರದಲ್ಲಿ ತೀವ್ರತೆ ದಾಖಲಾಗಿತ್ತು.

ಮೂರು ದಿನಗಳ ಹಿಂದೆ ದಕ್ಷಿಣ ಕನ್ನಡ, ಹಾಸನ ಮತ್ತು ಕೊಡಗು ಜಿಲ್ಲೆಗಳ ಕೆಲವು ಭಾಗಗಳಲ್ಲಿ ಲಘು ಭೂಕಂಪನ ಸಂಭವಿಸಿದೆ. ಜನರು ಭಯಭೀತರಾಗಿ ಮನೆಯಿಂದ ಓಡಿ ಬಂದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಯಲ್ಲಿ ಭೂಕಂಪ. ಕೊಡಗು ಜಿಲ್ಲೆಯ ಚೆಂಬು, ಕರಿಕೆ ಮತ್ತು ಸಂಪಂಜೆಯಲ್ಲಿ ಇಂದು ಮುಂಜಾನೆ ಸುಮಾರು 3 ರಿಂದ 4 ಸೆಕೆಂಡುಗಳ ಕಾಲ ಭೂಕಂಪನದ ಅನುಭವವಾಗಿದೆ. ಜನರು ಮನೆಯಿಂದ ಓಡಿ ಹೋದ ಘಟನೆ ನಡೆದಿದೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಲ್ಲಿ ಭೂಕಂಪ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲುಗುಂಡಿ ಮತ್ತು ಗೂನಡ್ಕ ಭಾಗದಲ್ಲಿ ಭೂಕಂಪನದ ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕಳೆದ ಗುರುವಾರ ಹಾಸನ ಜಿಲ್ಲೆ ಮತ್ತು ನೆರೆಯ ಪ್ರದೇಶಗಳಲ್ಲಿ ಬೆಳ್ಳಂಬೆಳಗ್ಗೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗ್ರಾಮಗಳು ಹಾಗೂ ಸೋಮವಾರಪೇಟೆ ಸಮೀಪದ ಗ್ರಾಮಗಳಲ್ಲಿ ಕಂಪನದ ಅನುಭವವಾಗಿದೆ. ಮನೆಗಳು, ರಸ್ತೆಗಳು ಬಿರುಕು ಬಿಟ್ಟಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಹಿರ್ದೆಸೆಯಲ್ಲಿ ತಂಗಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಪ್ರಕಾರ ಕರ್ನಾಟಕ ಭೂಕಂಪನದ ಕೇಂದ್ರಬಿಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ನಾಗರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲುಗನಹಳ್ಳಿ ಗ್ರಾಮವಾಗಿದೆ.

ಇದನ್ನೂ ಓದಿ : suicide : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮಕ್ಕಳ ಜೊತೆ ಪತ್ನಿ ನೇಣಿಗೆ ಶರಣು

ಇದನ್ನೂ ಓದಿ : Mumbai Building Collapse: ಮುಂಬೈನಲ್ಲಿ ಕಟ್ಟಡ ಕುಸಿತ ;ಇಬ್ಬರು ಸಾವು , 20-22 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ

Karnataka today again Earthquake in Dakshina Kannada

Comments are closed.