India Vs England test : ಭಾರತವನ್ನು ಸೋಲಿಸುವುದು ಸುಲಭವಲ್ಲ.. ಇಂಗ್ಲೆಂಡ್ ಎಚ್ಚರಿಕೆ ಕೊಟ್ಟ ಸ್ವಂತ ಆಟಗಾರ

ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ (India Vs England test) ಭಾರತ ಕ್ರಿಕೆಟ್ ತಂಡದ ಜುಲೈ ಒಂದರಿಂದ ಆತಿಥೇಯರ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲಿದೆ. ಇದು ಕಳೆದ ವರ್ಷ ಕೋವಿಡ್ ಕಾರಣದಿಂದ ಮೊಟಕುಗೊಂಡಿದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯ.

ಭಾರತ Vs ಆತಿಥೇಯ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಟೆಸ್ಟ್ ಪಂದ್ಯಕ್ಕೆ ಕೇವಲ 2 ದಿನ ಉಳಿದಿರುವ ಹೊತ್ತಲ್ಲಿ, ಇಂಗ್ಲೆಂಡ್ ತಂಡಕ್ಕೆ ಅವರದ್ದೇ ಆಟಗಾರನೊಬ್ಬ ಎಚ್ಚರಿಕೆ ನೀಡಿದ್ದಾನೆ. ಭಾರತವನ್ನು ಸೋಲಿಸುವುದು ಸುಲಭವಲ್ಲ (India Is A Tough Side To Beat) ಎಂದು ವಾರ್ನಿಂಗ್ ಕೊಟ್ಟಿದ್ದಾನೆ. ತಮ್ಮದೇ ತಂಡದ ಆಟಗಾರರಿಗೆ ಈ ರೀತಿ ಎಚ್ಚರಿಕೆ ಕೊಟ್ಟಿರುವುದು ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್”ಮನ್ ಡಾವಿಡ್ ಮಲಾನ್ (Dawid Malan).

“5ನೇ ಟೆಸ್ಟ್ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ. ಭಾರತ ಸರಣಿಯಲ್ಲಿ ಈಗಾಗಲೇ 2-1ರಲ್ಲಿ ಮುನ್ನಡೆಯಲ್ಲಿದೆ. ಯಾವುದೇ ಕಂಡಿಷನ್’ಗಳಲ್ಲಿ ತನ್ನನ್ನು ಸೋಲಿಸುವುದು ಕಷ್ಟ ಎಂಬುದನ್ನು ಭಾರತ ತಂಡ ಈಗಾಗಲೇ ಸಾಬೀತು ಮಾಡಿದೆ. ಕಳೆದ ಕೆಲ ವರ್ಷಗಳಿಂದ ಅವರು ಅದ್ಭುತ ಆಟವಾಡುತ್ತಿದ್ದಾರೆ. ಇಂಗ್ಲೆಂಡ್ ತಂಡವೂ ಹೊಸ ನಾಯಕ, ಹೊಸ ತರಬೇತುದಾರನ ಮುಂದಾಳತ್ವದಲ್ಲಿ ಆಡುತ್ತಿದೆ. ಹೀಗಾಗಿ ಇದು ಎರಡೂ ತಂಡಗಳಿಗೂ ಹೊಸ ಸವಾಲು”

ಡಾವಿಡ್ ಮಲಾನ್, ಇಂಗ್ಲೆಂಡ್ ತಂಡದ ಆಟಗಾರ.

ಕಳೆದ ವರ್ಷ ಕೋವಿಡ್ ಕಾರಣದಿಂದ ಮೊಟಕುಗೊಂಡಿದ್ದ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಭಾರತ 2-1ರಲ್ಲಿ ಮುನ್ನಡೆ ಪಡೆದಿದೆ. ಎಡ್ಜ್”ಬಾಸ್ಟನ್ ಮೈದಾನದಲ್ಲಿ ಶುಕ್ರವಾರ ಆರಂಭವಾಗಲಿರುವ 5ನೇ ಟೆಸ್ಟ್ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡರೂ ಸಾಕು, 15 ವರ್ಷಗಳ ನಂತರ ಕ್ರಿಕೆಟ್ ಜನಕರ ನಾಡಿನಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲಲಿದೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ನಾಯಕತ್ವ ವಹಿಸಿಕೊಂಡ ನಂತರ ಆತಿಥೇಯ ಇಂಗ್ಲೆಂಡ್ ತಂಡವೂ ಭರ್ಜರಿ ಫಾರ್ಮ್”ನಲ್ಲಿದ್ದು, ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.

5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳ ಫಲಿತಾಂಶ:
ಪ್ರಥಮ ಟೆಸ್ಟ್ (ನಾಟಿಂಗ್’ಹ್ಯಾಮ್): ಪಂದ್ಯ ಡ್ರಾ
ದ್ವಿತೀಯ ಟೆಸ್ಟ್ (ಲಾರ್ಡ್ಸ್): ಭಾರತಕ್ಕೆ 151 ರನ್ ಗೆಲುವು
3ನೇ ಟೆಸ್ಟ್ (ಲೀಡ್ಸ್): ಇಂಗ್ಲೆಂಡ್’ಗೆ ಇನ್ನಿಂಗ್ಸ್ ಮತ್ತು 76 ರನ್ ಗೆಲುವು
4ನೇ ಟೆಸ್ಟ್ (ಓವಲ್): ಭಾರತಕ್ಕೆ 157 ರನ್ ಗೆಲುವು

ಇದನ್ನೂ ಓದಿ : Earthquake in Dakshina Kannada : ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿಂದು ಮತ್ತೆ ಲಘು ಭೂಕಂಪನ : ಆತಂಕದಲ್ಲಿ ಜನತೆ

ಇದನ್ನೂ ಓದಿ : Mumbai Building Collapse: ಮುಂಬೈನಲ್ಲಿ ಕಟ್ಟಡ ಕುಸಿತ ;ಇಬ್ಬರು ಸಾವು , 20-22 ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ

India Vs England test Defeating India is not easy, England own player to warn

Comments are closed.