Karnataka weather forecast: ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ 3 ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: (Karnataka weather forecast) ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನಲೆಯಲ್ಲಿ ಇಂದು ಕೂಡ ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮತ್ತೆ ಮಳೆ ಪ್ರಾರಂಭವಾಗಿದ್ದು, ಇಂದಿನಿಂದ ಡಿಸೆಂಬರ್‌ 29 ರವೆಗೆ ರಾಜ್ಯದ ಹಲವೆಡೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹೆಚ್ಚು ಮಳೆ(Karnataka weather forecast)ಯಾಗುವ ಸಾಧ್ಯತೆಯಿದ್ದು, ಡಿ. 30 ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಮಂಡ್ಯ, ಕೊಡಗು, ಹಾಗೂ ತುಮಕೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆಯಿದ್ದು, ಕೆಲವೆಡೆ ಇನ್ನೂ ಮೂರು ದಿನಗಳ ಕಾಲ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರು, ಮೈಸೂರು, ಕೋಲಾರ ಹಾಗೂ ಇನ್ನೂ ಕೆಲವು ಜಿಲ್ಲೆಗಳಲ್ಲಿ ನಾಳೆಯೂ ಕೂಡ ಮಳೆಯಾಗುವ ಸಾಧ್ಯೆತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಡಿ. 29 ರವರೆಗೂ ಕರ್ನಾಟಕದಲ್ಲಿ ಮಳೆ ಮುಂದುವರಿಯಲಿದ್ದು, ದಕ್ಷಿಣ ಒಳನಾಡಿನಲ್ಲಿ ಮಳೆಯ ಪ್ರಮಾಣ ಹೆಚ್ಚಿದೆ.

ಇನ್ನೂ ಲಕ್ಷದ್ವೀಪಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಕೇರಳ ಹಾಗೂ ಮಾಹೆಯಲ್ಲಿ ಗುಡುಗು, ಮಿಂಚಿನ ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಒಡಿಶಾದಲ್ಲಿ ಮಂಜು ಕವಿದ ವಾತಾವರಣವಿದ್ದು, ಪಂಜಾಬ್‌, ಹರಿಯಾಣ, ಹಾಗೂ ಚಂಡೀಗಢದಲ್ಲಿ ದಟ್ಟವಾದ ಮಂಜು ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : Vaccine compulsory: ಬಾರ್‌, ಪಬ್‌ ಗೆ ಹೋಗುವ ಮುನ್ನ ಹುಷಾರ್ !‌ 2 ಡೋಸ್‌ ಕೋವಿಡ್ ಲಸಿಕೆ ಕಡ್ಡಾಯ

ಇದನ್ನೂ ಓದಿ : Venugopal Doot Arrest: ಸಾಲ ವಂಚನೆ ಪ್ರಕರಣ: ವಿಡಿಯೋಕಾನ್‌ ಗ್ರೂಪ್‌ ಪ್ರವರ್ತಕ ವೇಣುಗೋಪಾಲ್‌ ದೂತ್‌ ಅರೆಸ್ಟ್‌

ಇದನ್ನೂ ಓದಿ : BF.7 virus in bengaluru: ಬೆಂಗಳೂರಿನಲ್ಲೂ ಕಾಲಿಟ್ಟ BF.7 ಚೀನಾ ವೈರಸ್?‌ ಚೀನಾದಿಂದ ಬಂದಿದ್ದ ವ್ಯಕ್ತಿಗೆ ಸೋಂಕು ದೃಡ

ಇದನ್ನೂ ಓದಿ : Corona increase: ಕರ್ನಾಟಕದಲ್ಲಿ ಜಾರಿಯಾಗತ್ತಾ ಟಫ್‌ ರೂಲ್ಸ್:‌ ಇಂದು ಹೈ ವೋಲ್ಟೆಜ್‌ ಮೀಟಿಂಗ್‌

ಇದನ್ನೂ ಓದಿ : Karnataka weather forecast: ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಇದನ್ನೂ ಓದಿ : Surathkal Section 144 : ಸುರತ್ಕಲ್ ನಲ್ಲಿ ಚಾಕು ಇರಿದು ವ್ಯಕ್ತಿ ಕೊಲೆ : ಸೆಕ್ಷನ್‌ 144 ಜಾರಿ

(Karnataka weather forecast) Rain will continue in 9 districts including Bengaluru today also in the background of depression in the Bay of Bengal.

Comments are closed.