Karnataka weather report: ಕರ್ನಾಟಕದಲ್ಲಿ 5 ದಿನ ಮಳೆ: ತಮಿಳುನಾಡಿನಲ್ಲಿ ರೆಡ್‌ ಅಲರ್ಟ್‌ ಘೋಷಣೆ

ಬೆಂಗಳೂರು: (Karnataka weather report) ಬಂಗಾಳಕೊಲ್ಲಿಯಲ್ಲಿ ಸೃಷ್ಠಿಯಾಗಿರುವ ಮ್ಯಾಂಡಸ್‌ ಚಂಡಮಾರುತದ ತೀವ್ರತೆ ಹೆಚ್ಚಾಗಿದ್ದು, ಕರಾವಳಿ ಪ್ರದೇಶದತ್ತ ಸಾಗಿ ಬರುತ್ತಿದೆ. ಇದರ ಪರಿಣಾಮ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಳಿಯ ಜೊತೆ ಮಳೆಯು ಇರಲಿದೆ. ಇಂದಿನಿಂದ ಡಿಸೆಂಬರ್‌ 14 ರವರೆಗೆ ರಾಜ್ಯದ ರಾಜಧಾನಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮ್ಯಾಂಡಸ್‌ ಚಂಡಮಾರುತವು (Karnataka weather report ) ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರಾವಳಿಯತ್ತ ಆಗಮಿಸಿದೆ. ಇಂದು ಉತ್ತರಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಹಾಗೂ ವಿಜಯಪುರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಡಿಸೆಂಬರ್‌ 11ರಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ನೀಡಲಾಗಿದೆ. ಡಿಸೆಂಬರ್‌ 12ರಂದು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ನೀಡಲಾಗಿದೆ. ಉತ್ತರ ಕರ್ನಾಟಕದ ಕೊಪ್ಪಳ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್‌, ಕಲಬುರಗಿ, ಬಾಗಲಕೋಟೆ ಮಗರಗಳಲ್ಲೂ ಮಳೆ ಬೀಳುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ.

ತಮಿಳುನಾಡಿನಲ್ಲಿ ಮ್ಯಾಂಡಸ್‌ ಚಂಡಮಾರುವ ಅಪ್ಪಳಿಸಿದ ಹಿನ್ನಲೆಯಲ್ಲಿ ಭೂಕುಸಿತ ಉಂಟಾಗಿದ್ದು, ಚೆನ್ನೈನ ಹಲವಾರು ಭಾಗಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಆರಂಭವಾಗಿದೆ. ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಪಟ್ನಂಪಕ್ಕಂ ಕೂಡ ಜಲಾವೃತವಾಗಿದೆ. ಮುಂದಿನ 3 ಗಂಟೆಗಳಲ್ಲಿ ತಮಿಳುನಾಡಿನ ರಾಣಿಪೆಟ್ಟೈ, ವೆಲ್ಲೂರು, ವಿಲುಪುರಂ, ತಿರುವಣ್ಣಾಮಲೈ, ಸೇಲಂ, ಕಲ್ಲಕ್ಕುರಿಚಿ, ತಿರುಪಟ್ಟೂರು ಜಿಲ್ಲೆಗಳು ಮತ್ತು ಪುದುಚೇರಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : IT Ride: ತೆರಿಗೆ ವಂಚನೆ ಆರೋಪದಲ್ಲಿ ಬೆಂಗಳೂರಿನ ಹಲವೆಡೆ ಐಟಿ ದಾಳಿ

ಇದನ್ನೂ ಓದಿ : Karnataka weather report: ರಾಜ್ಯದಲ್ಲಿ ಇಂದಿನಿಂದ ಡಿ. 12ರವರೆಗೆ ಭಾರೀ ಮಳೆ: ಮ್ಯಾಂಡಸ್‌ ಚಂಡಮಾರುತದ ಹಿನ್ನಲೆ ಹಳದಿ ಅಲರ್ಟ್‌ ಘೋಷಣೆ

ಮಾಂಡೌಸ್ ಚಂಡಮಾರುತವು ಇಂದು ಪುದುಚೇರಿ ಮತ್ತು ಶ್ರೀಹರಿಕೋಟಾವನ್ನು ದಾಟುವ ನಿರೀಕ್ಷೆಯಿರುವುದರಿಂದ ಶುಕ್ರವಾರ ಪುದುಚೇರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ತಮಿಳುನಾಡಿನ ದಿಂಡುಗಲ್ ಜಿಲ್ಲಾಧಿಕಾರಿ ಸಿರುಮಲೈ ಮತ್ತು ಕೊಡೈಕೆನಾಲ್‌ನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿದ್ದಾರೆ. ತಮಿಳುನಾಡು, ಪುದುಚೇರಿ ಮತ್ತು ಆಂಧ್ರಪ್ರದೇಶದ ಮೂರು ರಾಜ್ಯಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದೆ. ಡಾಪ್ಲರ್ ಹವಾಮಾನ ರಾಡಾರ್ ಕಾರೈಕಲ್ ಮತ್ತು ಚೆನ್ನೈನಲ್ಲಿ ಚಂಡಮಾರುತದ ಮೇಲೆ ನಿಗಾ ಇರಿಸಲಾಗಿದೆ.

(Karnataka weather report) Cyclone Mandus, which has formed in the Bay of Bengal, has increased in intensity and is moving towards the coastal region. As a result of this, heavy rains will occur in the state for the next four to five days, according to the Meteorological Department. Many parts of the state including Bengaluru will experience cold and rain.

Comments are closed.