ಮಂಗಳೂರು : ಕೇರಳದಲ್ಲಿ ನಿಫಾ ವೈರಸ್ (Nipah Virus Case ) ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಕರ್ನಾಟಕದಲ್ಲಿಯೂ ಹೈಅಲರ್ಟ್ (karnataka High Alert) ಘೋಷಿಸಲಾಗಿದೆ. ಅದ್ರಲ್ಲೂ ಕರ್ನಾಟಕ – ಕೇರಳ ಗಡಿ (Karnataka – Kerala Border) ಭಾಗವಾಗಿರುವ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗಡಿಭಾಗಗಳಲ್ಲಿ ನಿರ್ಬಂಧ ಹೇರಲಾಗಿದೆ. ಜಿಲ್ಲೆಯಲ್ಲಿ ಜ್ವರ ಪೀಡಿತರ ಮೇಲೆ ಹದ್ದಿನಕಣ್ಣು ಇರಿಸಲಾಗಿದೆ.
ನಿಫಾ ವೈರಸ್ ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ (Health Department) ಸಕಲ ವ್ಯವಸ್ಥೆಗಳನ್ನು ಕೈಗೊಂಡಿದೆ. ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸಿಯವ ಸರಕು ಸಾಗಾಣಿಕೆ, ಸೇರಿದಂತೆ ಎಲ್ಲಾ ವಾಹನಗಳನ್ನು ತಫಸಣೆಗೆ ಒಳಪಡಿಸಲು ಚೆಕ್ ಪೋಸ್ಟ್ ತೆರೆಯುವಂತೆ ಆರೋಗ್ಯ ಇಲಾಖೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.
ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಎಲ್ಲರನ್ನೂ ಕೂಡ ತಪಾಸಣೆಗೆ ಒಳಪಡಿಸಬೇಕು. ಅಲ್ಲದೇ ಕೇರಳದಿಂದ ಕರ್ನಾಟಕಕ್ಕೆ ಸರಕು ತುಂಬಿದ ವಾಹನಗಳಲ್ಲಿ ಬರುವ ಹಣ್ಣುಗಳನ್ನು ಪರಿಶೀಲನೆ ನಡೆಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಇದನ್ನೂ ಓದಿ : ನಿಫಾ ವೈರಸ್ ಪ್ರಕರಣ ಹೆಚ್ಚಳ: ಶಾಲೆಗಳಿಗೆ ರಜೆ ಘೋಷಣೆ, ಕೇರಳದಲ್ಲಿ ಲಾಕ್‌ಡೌನ್ ಜಾರಿ ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಹೈ ಅಲರ್ಟ್ (Nipah High Alert ) :
ಕೇರಳದಲ್ಲಿ ನಿಫಾ ಸೋಂಕಿತ ಪ್ರಕರಣ ಹೆಚ್ಚುತ್ತಿರುವುದು ಕರ್ನಾಟಕದ ಕರಾವಳಿ ಭಾಗದ ಜನರಿಗೆ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರ ಆರೋಗ್ಯಧಿಕಾರಿ ಡಾ.ಸುದರ್ಶನ್ ಅವರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಗಳಲ್ಲಿರುವ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಜ್ವರ ಪೀಡಿತ ಜನರ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ತಿಳಿಸಿದೆ. ಈಗಾಗಲೇ ರಾಜ್ಯ ಸರಕಾರ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ಸ್ಥಾಪಿಸಿದೆ.
ಸರಕಾರಿ ಆಸ್ಪತ್ರೆ ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡುಬಂದರೆ ಕೂಡಲೇ ಡಿಎಚ್‌ಒ ಮತ್ತು ಕಣ್ಗಾವಲು ಅಧಿಕಾರಿಗೆ ತಿಳಿಸಲು ತಿಳಿಸಲಾಗಿದೆ. ಸಾರ್ವಜನಿಕರು ಜ್ವರವನ್ನು ನಿರ್ಲಕ್ಷಿಸದೆ ವೈದ್ಯಕೀಯ ಸಲಹೆ ಪಡೆಯುವಂತೆ ಡಾ.ಸುದರ್ಶನ್ ಸಲಹೆ ನೀಡಿದರು.
ಇದನ್ನೂ ಓದಿ : ಸ್ನಾನ ಮಾಡಿದ ತಕ್ಷಣವೇ ಟವೆಲ್ ಸುತ್ತಿಕೊಳ್ಳಬೇಡಿ ! ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ
ಕೇರಳದಲ್ಲಿ ಪತ್ತೆಯಾಗಿರುವ ನಿಫಾ ವೈರಸ್ ಸೋಂಕಿನ ಬಗ್ಗೆ ಜಿಲ್ಲೆಯ ಜನರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು. ಜ್ವರ ಬಂದ ತಕ್ಷಣ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ. ಎಲ್ಲಾ ಜ್ವರ ಪ್ರಕರಣಗಳು ನಿಫಾ ಎಂದು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿ ಜಾರಿಯಾಯ್ತು ನಿಫಾ ಮಾರ್ಗಸೂಚಿ ?
- ಕೇರಳ ಗಡಿಯಲ್ಲಿ ಸ್ವಯಂಪ್ರೇರಿತ ಮತ್ತು ಜಾಗರೂಕ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಹೇಳಿದೆ.
- ನಿಫಾ ವೈರಸ್ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಕ್ಷಿಪ್ರ ಪ್ರತಿಕ್ರಿಯೆ ತಂಡದ ಸಭೆಯನ್ನು ಕರೆಯಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.
- ದಕ್ಷಿಣ ಕನ್ನಡದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು ನಿಫಾ ವೈರಸ್ ಪ್ರಕರಣಗಳನ್ನು ವರದಿ ಮಾಡುತ್ತವೆ ಮತ್ತು ತಕ್ಷಣ ಜಿಲ್ಲಾ ಕಚೇರಿ ಅಥವಾ ಘಟಕಕ್ಕೆ ತಿಳಿಸುತ್ತವೆ.
- ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಮತ್ತು ಎಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ನಿಫಾ ವೈರಸ್ ನಿರ್ವಹಣೆಗಾಗಿ ಪ್ರತ್ಯೇಕ 10 ಹಾಸಿಗೆಗಳ ವಾರ್ಡ್‌ಗಳನ್ನು ಒದಗಿಸುವುದು.
- ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ವೈದ್ಯಾಧಿಕಾರಿಗಳಿಗೆ ಜ್ವರ ಕಣ್ಗಾವಲು ಘಟಕಗಳನ್ನು ಬಲಪಡಿಸಲಾಗುವುದು.
- ಈ ವೈರಸ್ ಬಗ್ಗೆ ಆರೋಗ್ಯ ವೃತ್ತಿಪರರಿಗೆ, ವಿಶೇಷವಾಗಿ ಶಸ್ತ್ರಚಿಕಿತ್ಸಕರಿಗೆ ಅರಿವು ಮತ್ತು ಪರಿಣಾಮಕಾರಿ ವ್ಯವಸ್ಥೆಯನ್ನು ಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
Image Credit to Original Source
ಇದನ್ನೂ ಓದಿ : ಬೆಂಗಳೂರಲ್ಲಿ 2 ತಿಂಗಳಲ್ಲಿ 3,200 ಡೆಂಗ್ಯೂ ಪ್ರಕರಣ : ಎಚ್ಚರಿಕೆ ಕೊಟ್ಟ ಆರೋಗ್ಯ ಸಚಿವ, ಏನಿದರ ಲಕ್ಷ್ಮಣ
ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಪ್ರಕರಣ ವರದಿಯಾಗಿದೆ. ಕೇರಳ ಬುಧವಾರ ನಿಪಾ ವೈರಸ್‌ನ ಮತ್ತೊಂದು ಪ್ರಕರಣವನ್ನು ವರದಿ ಮಾಡಿದೆ ಮತ್ತು ಕೋಝಿಕ್ಕೋಡ್‌ನಲ್ಲಿ ಹೊಸ ಪಾಸಿಟಿವ್ ಪ್ರಕರಣದ ದೃಢೀಕರಣದೊಂದಿಗೆ ಸೋಂಕಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಮೂರಕ್ಕೆ ಏರಿದೆ. ಈಗಾಗಲೇ ಕೇರಳದಲ್ಲಿ ನಿಫಾ ಸೋಂಕಿಗೆ ತುತ್ತಾಗಿ ಇಬ್ಬರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಕೇರಳ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಕಂಟೋನ್ಮೆಂಟ್ ಝೋನ್‌ಗಳನ್ನು ತೆರೆಯಲಾಗಿದ್ದು, ಶಾಲೆಗಳಿಗೆ ಮುಂದಿನ ಆದೇಶದ ವರೆಗೆ ರಜೆ ಘೋಷಣೆ ಮಾಡಲಾಗಿದೆ.
ನಿಫಾ ವೈರಸ್ ಲಕ್ಷಣಗಳೇನು ?
ನಿಫಾ ವೈರಸ್ ಸೋಂಕು ಸಾಮಾನ್ಯವಾಗಿ ಮನುಷ್ಯರಿಗೆ ಪ್ರಾಣಿಗಳಿಂದ ಹರಡುತ್ತದೆ. ಅದ್ರಲ್ಲೂ ಮುಖ್ಯವಾಗಿ ಬಾವಲಿಗಳಿಂದ ಹಡುತ್ತದೆ. ಬಾವಲಿಗಳು ಕಚ್ಚಿರುವ ಹಣ್ಣು, ತರಕಾರಿಗಳನ್ನು ತಿನ್ನುವುದರಿಂದ ಈ ಸೋಂಕು ಹರಡುವ ಸಾಧ್ಯತೆ ತೀರಾ ಹೆಚ್ಚು. ಇನ್ನು ಈ ವೈರಸ್‌ನ ಕಾಲಾವಧಿ 4 ರಿಂದ 12 ದಿನಗಳು. ವೈರಸ್ ಸೋಂಕಿತ ವ್ಯಕ್ತಿಗಳಲ್ಲಿ ಆರಂಭದಲ್ಲಿ ಜ್ವರ, ತಲೆನೋವು, ಸುಸ್ತು, ವಾಂತಿ ಕಾಣಿಸಿಕೊಳ್ಳಲಿದೆ.
ನಿಫಾ ಸೋಂಕಿತ ರೋಗಿಯ ನಡವಳಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ಅದರಲ್ಲೂ ಶೀತ, ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಡಬಹುದು. ಇನ್ನೂ ಕೆಲವರು ಸ್ನಾಯು ಸೆಳೆತ, ತೀವ್ರ ಆಯಾಸದಿಂದಲೂ ಬಳಲುವ ಸಾಧ್ಯತೆಯಿದೆ.

ನಿಫಾ ವೈರಸ್ ಭಾರತದಲ್ಲಿ ಪತ್ತೆ ಯಾವಾಗ ? ಎಲ್ಲಿ ?
ಇನ್ನು ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲೇನಲ್ಲಾ. ಈ ಹಿಂದೆಯೂ 2018 ಮತ್ತು 2021 ರಲ್ಲಿ ಕೇರಳದಲ್ಲಿ ನಿಫಾ ಸೋಂಕು ವರದಿಯಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್ ಕೇರಳದ ಕೋಝಿಕ್ಕೋಡ್‌ನಲ್ಲಿ ಮೇ 19, 2018 ರಂದು ವರದಿಯಾಗಿತ್ತು.
ಕಲುಷಿತ ಆಹಾರದಿಂದ ದೂರವಿರಿ !
ವಿಶ್ವ ಆರೋಗ್ಯ ಸಂಸ್ಥೆ (WHO) ನಿಫಾ ಸೋಂಕನ್ನು ಪ್ರಾಣಿಗಳಿಂದ ಜನರಿಗೆ ಹರಡುವ ಝೂನೋಟಿಕ್ ಕಾಯಿಲೆ ಎಂದು ವ್ಯಾಖ್ಯಾನಿಸಿದೆ. ಪ್ರಮುಖವಾಗಿ ಈ ಸೋಂಕು ಕಲುಷಿತ ಆಹಾರದ ಮೂಲಕ ಹರಡುತ್ತೆ. ನಿಫಾ ಸೋಂಕು ವಿಶ್ವದಲ್ಲಿ ಮೊದಲ ಬಾರಿಗೆ ಒತ್ತೆಯಾಗಿದ್ದು, ಮಲೇಷ್ಯಾದಲ್ಲಿ. ಹಂದಿಗಳಿಂದಾಗಿ ಈ ಸೋಂಕು ಹರಡಿತ್ತು ಎನ್ನಲಾಗುತ್ತಿದೆ.
ಇನ್ನು ಮಲೇಷ್ಯಾ ನಂತರದಲ್ಲಿ ಬಾಂಗ್ಲಾ ದೇಶ ಮತ್ತು ಭಾರತದಲ್ಲಿ ನಿಫಾ ಸೋಂಕು ಪತ್ತೆಯಾಗಿದ್ದು, ಹಣ್ಣುಗಳನ್ನು ಬಾವಲಿಗಳು ತಿನ್ನುವುದರಿಂದ ಈ ವೇಳೆ ಬಾವಲಿಗಳ ಮೂತ್ರ ಹಾಗೂ ಲಾಲಾರಸದಿಂದ ಹರಡಿದೆ. ಪ್ರಮುಖವಾಗಿ ಕಚ್ಚಾ ಖರ್ಜೂರ ಸೇವನೆಯಿಂದ ಈ ಸೋಂಕು ವ್ಯಾಪಿಸಿದೆ ಎಂದು ಹೇಳಲಾಗುತ್ತಿದೆ.
ನಿಫಾ ವೈರಸ್ ಎಂದರೇನು ?
ನಿಪಾ ವೈರಸ್ (NiV) ಒಂದು ಝೂನೋಟಿಕ್ ವೈರಸ್, ಅಂದರೆ ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಇದು ಮೊದಲು 1998 ರಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದಲ್ಲಿ ಹೊರಹೊಮ್ಮಿತು, ಪ್ರಾಥಮಿಕವಾಗಿ ದೇಶೀಯ ಹಂದಿಗಳ ಮೇಲೆ ಪರಿಣಾಮ ಬೀರಿದೆ.
ಕೇವಲ ಹಂದಿ ಮಾತ್ರವಲ್ಲದೇ ನಾಯಿ, ಬೆಕ್ಕು, ಆಡು, ಕುದುರೆ, ಕುರಿ ಸೇರಿದಂತೆ ಹಲವು ಸಾಕುಪ್ರಾಣಿಗಳು ಹಾಗೂ ಬಾವಲಿಗಳಲ್ಲಿ ಈ ನಿಫಾ ವೈರಸ್ ಪತ್ತೆಯಾಗಿದೆ. ನಿಫಾ ವೈರಸ್ ವಾಯುಗಾಮಿ ಸೋಂಕು ಅಲ್ಲ, ಸಾಕುಪ್ರಾಣಿಗಳಿಂದಲೇ ಅತೀ ವೇಗದಲ್ಲಿ ಈ ಸೋಂಕು ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಿಫಾ ಸೋಂಕಿತ ಪ್ರಕರಣಗಳ ಪೈಕಿ ಶೇಕಡಾ 40 ರಿಂದ 75 ರಷ್ಟು ಸಾವಿನ ಪ್ರಮಾಣ ಹೊಂದಿದೆ.
ನಿಫಾ ಮಾರಣಾಂತಿಕವೂ ಹೌದು. ಜ್ವರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ರೆ ಸಾವನ್ನೂ ತರಲಿದೆ. ತೀವ್ರ ತೆರನಾಗಿ ಸೋಂಕು ದೇಹವನ್ನು ವ್ಯಾಪಿಸಿದ ನಂತರದಲ್ಲಿ ವೈರಸ್ ಎನ್ಸೆಫಾಲಿಟಿಸ್, ಮೆದುಳಿನ ಸೋಂಕು ಕಾಣಿಸಿಕೊಳ್ಳಲಿದೆ. ಹೀಗಾಗಿ ಯಾವುದೇ ಜ್ವರ ಕಾಣಿಸಿಕೊಂಡ್ರು ಕೂಡ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.
ನಿಫಾ ವೈರಸ್ ಮುಂಜಾಗ್ರತಾ ಕ್ರಮಗಳೇನು ?
ನಿಫಾ ವೈರಸ್ ತಡೆಗೆ ಹಲವು ಅಗತ್ಯ ಕ್ರಮಗಳನ್ನು ಮನೆಯಲ್ಲಿಯೇ ಕೈಗೊಳ್ಳಬಹುದು. ಮನೆಯಲ್ಲಿ ಹಣ್ಣುಗಳನ್ನು ತಿನ್ನುವಾಗ ತೊಳೆದು, ಬಹಳ ಎಚ್ಚರಿಕೆಯಿಂದ ಬಳಸುವುದು ಉತ್ತಮ. ಬಾವಲಿ ಸೇರಿದಂತೆ ಸಾಕು ಪ್ರಾಣಿಗಳಿಂದ ಅಂತರವನ್ನು ಕಾಪಾಡಿಕೊಳ್ಳಬೇಕು. ಸೋಂಕು ನಿಯಂತ್ರಣ ಕ್ರಮಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ : ನಿಮ್ಮ ವಯಸ್ಸು 35 ವರ್ಷವೇ? ಹಾಗಾಗಿ ಈಗಲೇ ಈ ಕೆಲಸ ಬಿಡಿ, ಇಲ್ಲದಿದ್ದರೆ ವೃದ್ಧಾಪ್ಯದಲ್ಲಿ ಈ ಸಮಸ್ಯೆ ಗ್ಯಾರಂಟಿ
ಇನ್ನು ಫರಿದಾಬಾದ್‌ನ ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ.ಅನುರಾಗ್ ಅಗರ್ವಾಲ್ ಅವರು ನಿಪಾ ವೈರಸ್ ಸೋಂಕಿನ ತಡೆಗಟ್ಟುವ ಕ್ರಮಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಇಂಡಿಯಾ ಟುಡೆ ವರದಿ ಮಾಡಿದೆ. ವೈದ್ಯರು ಸೂಚಿಸಿರುವ ಅಗತ್ಯ ಕ್ರಮಗಳು ಯಾವುವು ಎಂದು ನೋಡುವುದಾದ್ರೆ.
- ನಿಕಟ ಸಂಪರ್ಕ ತಪ್ಪಿಸಿ :
ನಿಫಾ ವೈರಸ್ ಸೋಂಕಿತ ವ್ಯಕ್ತಿಗಳಿಂದ, ವಿಶೇಷವಾಗಿ ರೋಗ ಲಕ್ಷಣಗಳನ್ನು ಹೊಂದಿರುವ ಜನರಿಂದ ದೂರವಿರಿ.
- ನೈರ್ಮಲ್ಯ:
ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯುವ ಮೂಲಕ ಉತ್ತಮ ಕೈ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. - ಬಾವಲಿ ತಿಂದ ಹಣ್ಣುಗಳನ್ನು ತಪ್ಪಿಸಿ :
ನಿಫಾ ವೈರಸ್ ಹೆಚ್ಚಾಗಿ ಹಣ್ಣಿನ ಬಾವಲಿಗಳ ಮೂಲಕ ಹರಡುತ್ತದೆ. ಅವರೊಂದಿಗೆ ಸಂಪರ್ಕವನ್ನು ತಪ್ಪಿಸಿ ಮತ್ತು ಬಾವಲಿ ಲಾಲಾರಸ ಅಥವಾ ಮೂತ್ರದಿಂದ ಕಲುಷಿತಗೊಂಡಿರುವ ಹಣ್ಣುಗಳನ್ನು ಸೇವಿಸಬೇಡಿ.
- ಕ್ವಾರಂಟೈನ್ ಕ್ರಮಗಳು :
ಶಂಕಿತ ಪ್ರಕರಣಗಳನ್ನು ತ್ವರಿತವಾಗಿ ಗುರುತಿಸುವುದು ಮತ್ತು ಪ್ರತ್ಯೇಕಿಸುವುದು ಸಮುದಾಯಗಳಲ್ಲಿ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.
Kerala nipah virus high alert in Karnataka, what is the Nipah Virus symptom ?