ಬೆಂಗಳೂರು : ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ನಟ ಸುದೀಪ್ (Kiccha Sudeep join Congress ) . ಸಿನಿಮಾದ ಹೊರತಾಗಿ ಸಿಸಿಎಲ್ ಕ್ರಿಕೆಟ್ ಕಪ್ ಸೇರಿದಂತೆ ವಿಭಿನ್ನ ಚಟುವಟಿಕೆಗಳ ಮೂಲಕ ಚಿತ್ರರಂಗವನ್ನು ಒಗ್ಗೂಡಿಸುವ ಪ್ರಯತ್ನ ಮಾಡ್ತಿದ್ದಾರೆ. ಈ ಮಧ್ಯೆ ಸುದೀಪ್ ರಾಜಕೀಯಕ್ಕೂ ಬರ್ತಾರಾ ಅನ್ನೋ ವಿಚಾರ ಸದ್ದು ಮಾಡ್ತಿದ್ದು, ಇದಕ್ಕೆ ಪೂರಕ ಎಂಬಂತೆ ಸುದೀಪ್ ಡಿಕೆಶಿ ಹಾಗೂ ನಳಪಾಡ್ ಜೊತೆಗಿನ ಪೋಟೋ ವೈರಲ್ ಆಗಿದೆ. ಸುದೀಪ್ ಕೈಪಾಳಯ ಸೇರ್ತಾರಾ ಅನ್ನೋ ಸಂಗತಿ ಚರ್ಚೆ ಹುಟ್ಟುಹಾಕಿದೆ.
ಸುದೀಪ್ ಸ್ಯಾಂಡಲ್ ವುಡ್ ಅಂಗಳ ದಾಟಿ ಪ್ಯಾನ್ ಇಂಡಿಯಾ ಸ್ಟಾರ್ ಮಟ್ಟಕ್ಕೆ ಬೆಳೆದುನಿಂತಿದ್ದಾರೆ. ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರೋ ಸುದೀಪ್ ರಾಜಕೀಯಕ್ಕೆ ಬರ್ತಾರಾ ಅನ್ನೋ ಚರ್ಚೆ ಹಿಂದಿನಿಂದಲೂ ಇದೆ. ಈಗ ಸುದೀಪ್ ಮತ್ತು ಡಿಕೆಶಿ ಜೊತೆಗಿರೋ ಪೋಟೋ ವೈರಲ್ ಆಗಿದೆ. ಹೀಗಾಗಿ ಸುದೀಪ್ ಕಾಂಗ್ರೆಸ್ ಸೇರ್ಪಡೆ ಗೊಳ್ತಾರಾ ಎಂಬ ಚರ್ಚೆ ಆರಂಭವಾಗಿದೆ. ಈ ಹಿಂದೆ ನಟಿ ರಮ್ಯ ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿದ್ದ ಕಾಲದಲ್ಲಿ ಬಹಿರಂಗವಾಗಿ ನಟ ಸುದೀಪ್ ಗೆ ಆಹ್ವಾನ ನೀಡಿದ್ದರು. ಆದರೆ ಸುದೀಪ್ ಯಾವುದೇ ಅಹ್ವಾನಕ್ಕೂ ಮಣಿದಿರಲಿಲ್ಲ.
ಹಾಗೇ ನೋಡಿದರೇ ಸುದೀಪ್ ಗೆ ರಾಜಕೀಯ ಬಂಧ ಇನ್ನು ನಿನ್ನೆಯದಲ್ಲ. ಸುದೀಪ್ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಹೀಗೆ ಎಲ್ಲ ಪಕ್ಷಗಳ ಜೊತೆಗೂ ಆತ್ಮೀಯವಾದ ಸಂಬಂಧ ಹೊಂದಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರೋ ಬಿಜೆಪಿ ಸರ್ಕಾರದ ಜೊತೆಗೆ ಸುದೀಪ್ ಗುರುತಿಸಿಕೊಂಡಿದ್ದು, ರಾಜ್ಯದ ಕಾಮಧೇನು ಗೋ ಸಂರಕ್ಷಣೆಯ ಯೋಜನೆಯ ರಾಯಭಾರಿ ಯಾಗಿಯೂ ಸುದೀಪ್ ನೇಮಕರಾಗಿದ್ದಾರೆ.
ಈಗ 2023 ರ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಸುದೀಪ್ ಕಾಂಗ್ರೆಸ್ ಜೊತೆ ಕೈಜೋಡಿಸುತ್ತಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಸುದೀಪ್ ಡಿಕೆಶಿ ಮತ್ತು ನಳಪಾಡ್ ಜೊತೆಗಿನ ಪೋಟೋ ನೋಡಿದ ಮೇಲೆ ಅಭಿಮಾನಿಗಳು ಸುದೀಪ್ ಕಾಂಗ್ರೆಸ್ ಗೆ ಸೇರಿದ್ದಾರಾ ಎಂಬ ಅನುಮಾನ ಮೂಡಿದೆ. ಆದರೆ ಇದಕ್ಕೆ ಸುದೀಪ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಚುನಾವಣೆ ಸಂದರ್ಭವಾಗಿರೋದರಿಂದ ಯಾವುದು ಅಸಾಧ್ಯವಲ್ಲ ಎಂಬ ಮಾತು ಕೇಳಿಬರ್ತಿದೆ.
ಸುದೀಪ್ ಕಳೆದ ಚುನಾವಣೆಯಲ್ಲಿ ಮುನಿರತ್ನ ಸೇರಿದಂತೆ ಹಲವು ರಾಜಕಾರಣಿಗಳ ಪರ ಪ್ರಚಾರ ನಡೆಸಿದ್ದರು. ಸಿಎಂ ಬೊಮ್ಮಾಯಿಯವರ ಜೊತೆ ಆತ್ಮೀಯವಾದ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಸುದೀಪ್ ಕೇವಲ ಒಂದು ಪಕ್ಷದ ಜೊತೆ ಗುರುತಿಸಿಕೊಳ್ಳೋದು ಅನುಮಾನ ಅನ್ನೋ ದು ಸುದೀಪ್ ಆತ್ಮೀಯರ ಅಂಬೋಣ.
ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ: ಡಾ.ಜಿ.ಪರಮೇಶ್ವರ್ ರಾಜೀನಾಮೆ
ಇದನ್ನೂ ಓದಿ : ನನ್ನ ಬೆಂಬಲಿಗರಿಗೆ ಡಿಕೆ ಶಿವಕುಮಾರ್ ಟಿಕೇಟ್ ಕೊಡ್ತಿಲ್ಲ: ಸಿದ್ದರಾಮಯ್ಯ ಹೈಕಮಾಂಡ್ ಗೆ ಬರೆದ ಪತ್ರ ವೈರಲ್
Kiccha Sudeep join Congress Sudeep photo with DK Shivakumar goes viral