ಭಾನುವಾರ, ಏಪ್ರಿಲ್ 27, 2025
HomeElectionಬಿಜೆಪಿ ಸೋಲಿಗೆ ಸುದೀಪ್ ಹೊಣೆ ? ಆರೋಪಕ್ಕೆ ಬೊಮ್ಮಾಯಿ ಖಡಕ್ ರಿಯಾಕ್ಷನ್

ಬಿಜೆಪಿ ಸೋಲಿಗೆ ಸುದೀಪ್ ಹೊಣೆ ? ಆರೋಪಕ್ಕೆ ಬೊಮ್ಮಾಯಿ ಖಡಕ್ ರಿಯಾಕ್ಷನ್

- Advertisement -

ಬೆಂಗಳೂರು : kiccha sudeep CM Bommai : ರಾಜ್ಯದಲ್ಲಿ ಗೆಲುವಿನ ನೀರಿಕ್ಷೆಯಲ್ಲಿದ್ದ ಬಿಜೆಪಿ ಸರ್ಕಾರ ಹಿಂದೆಂದೂ ಕಾಣದಂತ ಹೀನಾಲ ಸೋಲು ಕಂಡಿದೆ. ಈ ಮಧ್ಯೆ ಬಿಜೆಪಿ ಹೀನಾಯ ಸೋಲಿನ ಹೊಣೆ ಹೊತ್ತಿರೋ ಸಿಎಂ ಬೊಮ್ಮಾಯಿ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ಹೊತ್ತಿನಲ್ಲಿ ಬಿಜೆಪಿ ಸೋಲಿಗೆ ಸುದೀಪ್ ಕಾರಣ ಎಂಬ ಚರ್ಚೆ ಆರಂಭವಾಗಿದೆ. ಈ ಮಾತಿಗೆ ಬೊಮ್ಮಾಯಿ ಸಖತ್ ತಿರುಗೇಟು ನೀಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸೋತಿದೆ. ಹಾಲಿ ಮಂತ್ರಿಗಳು ಸೇರಿದಂತೆ ಒಟ್ಟು ೬೦ ಕ್ಕೂ ಹೆಚ್ಚು ಎಮ್ ಎಲ್ ಎ ಗಳು ಹೀನಾಯವಾಗಿ ಸೋಲು ಕಂಡಿದ್ದಾರೆ. ಹೀಗಾಗಿ ಬಿಜೆಪಿ ಸೋಲಿಕೆ ಕಾರಣ ಏನು ಎಂಬ ಚರ್ಚೆ ಆರಂಭವಾಗಿದೆ. ಇದಕ್ಕೆ ನಟ ಸುದೀಪ್ ಪರ ಪ್ರಚಾರಕ್ಕೆ ಬಂದಿದ್ದು ಬಿಜೆಪಿಗೆ ಪ್ಲಸ್ ಆಗಿಲ್ಲ. ಸುದೀಪ್ ಪ್ರಚಾರಕ್ಕೆ ಬಂದಿದ್ದರಿಂದಲೇ ಬಿಜೆಪಿ ಓಟು ಒಡೆದಿದ್ದು, ಅದರಿಂದಲೇ ಬಿಜೆಪಿ ತನ್ನ ಗೆಲ್ಲುವ ಕ್ಷೇತ್ರಗಳನ್ನು ಕಳೆದುಕೊಂಡಿದೆ ಎಂದು ಹಲವರು ಟೀಕಿಸಿದ್ದಾರೆ. ಆದರೆ ಈ ಆರೋಪಗಳನ್ನು ಪರಾಜಿತ ಬಿಜೆಪಿಯ ಸಿಎಂ ಬೊಮ್ಮಾಯಿ ಸಾರಾಸಗಾಟಾಗಿ ತಿರಸ್ಕರಿಸಿದ್ದಾರೆ. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ಸೋಲಿಗೆ ಅನೇಕ ಕಾರಣಗಳಿವೆ. ಆದರೂ ಸೋಲಿನ ನೇರ ಹೊಣೆಯನ್ನು ನಾನೇ ಹೊರುತ್ತೇನೆ ಎಂದಿದ್ದಾರೆ.

ನಮ್ಮ ವೋಟ್ ಬ್ಯಾಂಕ್ ಸರಿಯಾಗಿ ಕ್ರೋಡೀಕರಣವಾಗಿಲ್ಲ. ಲೋಕಸಭಾ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿಯಲ್ಲ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ಸೋಲಿಗೆ ಸುದೀಪ್ ಕಾರಣವೇ ಎಂಬ ಮಾಧ್ಯಮದ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಕೆರಳಿ ಕೆಂಡವಾದ್ರು, ಮಾತ್ರವಲ್ಲ ನಾನು ಆಗಲೇ ಹೇಳಿದ್ದೇನೆ.‌ಸುದೀಪ್ ರಾಜಕಾರಣಿಯಲ್ಲ. ಅವರು ನಮ್ಮ ಹಾಗೂ ಪಕ್ಷದ ಮೇಲಿನ ಅಭಿಮಾನದಿಂದ ಪ್ರಚಾರಕ್ಕೆ ಬಂದಿದ್ದರು. ಹೀಗಾಗಿ ಅವರನ್ನು ನಮ್ಮ ಸೋಲಿಗೆ ಹೊಣೆ ಮಾಡೋದು ಸರಿಯಲ್ಲ. ನನ್ನ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದಿದ್ದಾರೆ.

ಸುದೀಪ್ ಪ್ರಚಾರ ನಡೆಸಿದ್ದ ಬಹತೇಕ ಕ್ಷೇತ್ರಗಳ ಅಭ್ಯರ್ಥಿಗಳು ಸೋತಿದ್ದು, ಸುದೀಪ್ (kiccha sudeep) ಸ್ಟಾರ್ ಪ್ರಚಾರ ಬಿಜೆಪಿ ಗೆ ವರ್ಕೌಟ್ ಆಗಲಿಲ್ಲ ಎಂಬ ಟೀಕೆಗಳು ಎಲ್ಲೆಡೆ ವ್ಯಕ್ತವಾಗಿದೆ. ಆದರೆ ಈ ಆರೋಪಗಳಿಗೆ ಬೊಮ್ಮಾಯಿ ಕೆಂಡಾಮಂಡಲರಾಗಿದ್ದು, ಸುದೀಪ್ ರನ್ನು ಯಾವುದಕ್ಕೂ ಹೊಣೆ ಮಾಡಬಾರದು. ಅವರು ರಾಜಕಾರಣಿಯಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸುದೀಪ್ ಕೂಡ ಬಿಜೆಪಿ ಸೋಲಿನ ಹೊರೆ ಹೊರುವಂತಾಗಿದ್ದು ದುರಂತ.

ಇದನ್ನೂ ಓದಿ : ಯಾರಾಗ್ತಾರೆ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ?

ಇದನ್ನೂ ಓದಿ : Horoscope Today May 14 : ಹೇಗಿದೆ ಇಂದಿನ ಜಾತಕಫಲ

kiccha sudeep responsible for BJP defeat Karnataka assembly Election 2023 CM Bommai reaction to the allegation

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular