ಭಾನುವಾರ, ಏಪ್ರಿಲ್ 27, 2025
HomebusinessKMF Energy Drinks : ಕೆಎಂಎಫ್ ಎನರ್ಜಿ ಡ್ರಿಂಕ್ಸ್‌ ಮಾರುಕಟ್ಟೆಗೆ : ರಾಜ್ಯದ ಹಾಲು ಉತ್ಪಾದಕರಿಗೆ...

KMF Energy Drinks : ಕೆಎಂಎಫ್ ಎನರ್ಜಿ ಡ್ರಿಂಕ್ಸ್‌ ಮಾರುಕಟ್ಟೆಗೆ : ರಾಜ್ಯದ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ

- Advertisement -

KMF Energy Drinks  : ಕರ್ನಾಟಕದ ಕ್ಷೀರೋದ್ಯಮಿಗಳ ಪಾಲಿಗೆ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳ ಖರೀದಿದಾರರಿಗೆ ಆಸರೆಯಾಗಿರೋದು ಕೆಎಂಎಫ್. ಸರ್ಕಾರಿ ಉದ್ಯಮವಾಗಿದ್ದೂ ಮಾರುಕಟ್ಟೆಯಲ್ಲಿ ತನ್ನ ಗುಣಮಟ್ಟದಿಂದಲೇ‌ ಬ್ರ್ಯಾಂಡ್ ಎನ್ನಿಸಿರೋ ಕೆಎಂಎಫ್ ಇದೀಗ ಮಾರುಕಟ್ಟೆಯ ಟ್ರೆಂಡ್ ತಕ್ಕಂತೆ ಸ್ಪರ್ಧೆ ಒಡ್ಡಲು ಏನರ್ಜಿ ಡ್ರಿಂಕ್ (KMF Energy Drinks ) ಉತ್ಪಾದನೆಗೆ ಸಿದ್ಧವಾಗಿದೆ.

KMF Energy Drinks to market Good news for milk producers of the Karnataka Kannada News
Image Credit to Original Source

ನಂದಿನಿ ಮತ್ತು ಕೆಎಂಎಫ್ ಹಾಲು, ಗಿಣ್ಣ, ಮೊಸರು, ತುಪ್ಪ, ಸ್ವೀಟ್, ಬನ್, ಬ್ರೆಡ್ ಹೀಗೆ ನಾನಾ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರ್ಕೆಟಿಂಗ್ ಮೂಲಕ ಜನ ಮೆಚ್ಚುಗೆ ಗಳಿಸಿದೆ. ಈಗ ಯುವಜನತೆಯನ್ನು ತನ್ನತ್ತ ಸೆಳೆಯುವ ಉದ್ದೇಶದಿಂದ ಎನರ್ಜಿ ಡ್ರಿಂಕ್ ಮಾರುಕಟ್ಟೆಗೆ ತರಲು ಸಿದ್ಧವಾಗಿದೆ.

ಕರ್ನಾಟಕದ ಹೆಮ್ಮೆಯ ಕೆಎಂಎಫ್​ ನಂದಿನಿ ಇದೀಗ ಎನೆರ್ಜಿ ಡ್ರಿಂಕ್​​​ ಪ್ರಾಡಕ್ಟ್​ ಗಳನ್ನು ಮಾರುಕಟ್ಟೆಗೆ ತರಲು ಯೋಚಿಸಿದೆ. ಹಾಲಿನ ಕೂಲ್ ಡ್ರಿಂಕ್​ ಗಳನ್ನು ಮಾತ್ರ ಉತ್ಪಾದಿಸುತ್ತಿದ್ದ ಕೆಎಂಎಫ್​​ ಇದೀಗ ಸಾಫ್ಟ್​ ಡ್ರಿಂಕ್ಸ್ ಕ್ಷೇತ್ರಕ್ಕೂ ಈ ಮೂಲಕ ಲಗ್ಗೆ ಇಡ್ತಿದೆ. ಪ್ರಾಯೋಗಿಕವಾಗಿ ಇದನ್ನು ಬೆಂಗಳೂರು ಮಾರುಕಟ್ಟೆಗೆ ಮೊದಲು ಪರಿಚಯಿಸಲು ನಿರ್ಧರಿಸಿದ್ದು, ಸಿಗೋ ರೆಸ್ಪಾನ್ಸ್ ಮೇಲೆ ಕೆಎಂಎಫ್ ಎನರ್ಜಿ ಡ್ರಿಂಕ್ ಭವಿಷ್ಯ ನಿರ್ಧಾರವಾಗಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ 80 ಸಾವಿರ ಅರ್ಜಿ ತಿರಸ್ಕಾರ :ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಮಾತ್ರ ಸಿಗುತ್ತೆ ಹಣ

ಕ್ಷೀರ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕರ್ನಾಟಕದ ಹೆಮ್ಮೆಯ ಕೆಎಂಎಫ್​ ನಂದಿನಿ ತನ್ನದೇ ಆದ ಛಾಪು ಮೂಡಿಸಿದೆ. ಘಟಾನುಘಟಿ ಬ್ರ್ಯಾಂಡುಗಳಿಗೆ ಪೈಪೋಟಿ ಕೊಟ್ಟು ತನ್ನದೇ ಆದ ಹೆಸರನ್ನು ನಂದಿನಿ ಗಳಿಸಿಕೊಂಡಿದೆ. ಹಾಲಿನಿಂದ ತಯಾರಿಸಿರುವ ಹಲವು ಉತ್ಪನಗಳ್ಳ ಕ್ವಾಲಿಟಿ ಹಾಗೂ ಕ್ವಾಂಟಿಟಿಯೇ ನಂದಿನಿ ಯಶಸ್ಸಿನ ಸೀಕ್ರೆಟ್​. ಇದೀಗ ಕೆಎಂಎಫ್​​ ನಂದಿನಿ ಎನೆರ್ಜಿ ಡ್ರಿಂಕ್ಸ್ ಗಳನ್ನು ಪರಿಚಯಿಸಲು ಮುಂದಾಗಿದ್ದು ಮೊದಲ ಬಾರಿಗೆ 200 ಎಂಎಲ್ ಬಾಟಲಿಗಳ ಮೂಲಕ ಎನರ್ಜಿ ಡ್ರಿಂಕ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಕೆಎಂಎಫ್​ ಇದೇ ಮೊದಲ ಬಾರಿಗೆ ನಂದಿನಿ ಸ್ಪ್ಲಾಶ್​​ ಹಾಗೂ ನಂದಿನಿ ಬೌನ್ಸ್ ಎನ್ನುವ ಎರಡು ರೀತಿಯ ಎಜೆರ್ನಿ ಡ್ರಿಂಕ್ ಗಳನ್ನು ಪರಿಚಯಿಸುತ್ತಿದೆ. ಇದನ್ನು ವೆಸ್ಟ್ ಇಂಡೀಸ್​ ಹಾಗೂ ಅಮೆರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯದಲ್ಲಿ ಡಿಸ್ಪ್ಲೇ ಮಾಡಲಾಗುತ್ತಿದ್ದು, ಆರಂಭಿಕವಾಗಿ ಬೆಂಗಳೂರು ಮಾರುಕಟ್ಟೆಗೆ ಬಿಡಲಿದೆ. ಇದರ ಬೆಲೆ 10 ರೂಪಾಯಿಯಂತೆ ನಿಗದಿ ಪಡಿಸಲಾಗಿದೆ. ಇದು ಇತರೆ ಕಾರ್ಪೋರೇಟ್ ಬ್ರ್ಯಾಂಡ್​ ಗಿಂತ ಆರೋಗ್ಯಕರ ತಂಪು ಪಾನೀಯ ಎಂದು ನಂದಿನಿ ಹೇಳಿಕೊಂಡಿದೆ.

ಇದನ್ನೂ ಓದಿ : 40 ವರ್ಷ ಮೇಲ್ಪಟ್ಟವರಿಗೆ ಪ್ರತೀ ತಿಂಗಳು ಸಿಗಲಿದೆ 12,000 ರೂಪಾಯಿ !

ಅಲ್ಲದೇ ಯಾವುದೇ ಕೆಮಿಕಲ್ ಅಥವಾ ಪ್ರಿರ್ಸವೇಟಿವ್ ಬಳಸದೇ ಆರೋಗ್ಯಕರವಾಗಿ ಸಿದ್ದಪಡಿಸಲಾಗಿದೆ ಎಂದು ನಂದಿನಿ ಹೇಳಿಕೊಂಡಿದೆ. ಸದ್ಯಕ್ಕೆ ಕೆಎಂಎಫ್ ಬೆಂಗಳೂರಿನಲ್ಲಿ ಮಾತ್ರ ಈ ಎನರ್ಜಿ ಡ್ರಿಂಕ್ ಮಾರುಕಟ್ಟೆಗೆ ಬಿಡಲಿದ್ದು, ಇದರ ಗುಣಮಟ್ಟ, ಜನರ ರೆಸ್ಪಾನ್ಸ್ ಹಾಗೂ ಬೇಡಿಕೆಯ ಆಧಾರದ ಮೇಲೆ ಈ‌ ಎನರ್ಜಿ ಡ್ರಿಂಕ್ ಇತರ ಕಡೆಗೂ ಪೊರೈಕೆಯಾಗೋ ಸಾಧ್ಯತೆ ಇದೆ.ಒಟ್ಟು ಮೂರು ಬಗೆಯ ಫ್ಲೇವರ್​​ ಗಳನ್ನು ನಂದಿನಿ ಪರಿಚಯಿಸಲಿದೆ.

KMF Energy Drinks to market Good news for milk producers of the Karnataka Kannada News
Image Credit to Original Source

ಈಗಾಗಲೇ ಹಲವು ಕಾರ್ಪೋರೇಟ್​ ಕಂಪೆನಿಗಳ ಎನೆರ್ಜಿ ಡ್ರಿಂಕ್​ ಗಳು ಮಾರುಕಟ್ಟೆಯನ್ನು ಹಿಡಿತದಲ್ಲಿ ಇಟ್ಟುಕೊಂಡಿದೆ. ಆದರೆ ಅವುಗಳಲ್ಲಿ ಸಕ್ಕರೆ ಹಾಗೂ ಆರೋಗ್ಯಕ್ಕೆ ಹಾನಿಕರವಾದ ಸಂರಕ್ಷಕಗಳ ಬಳಕೆ ಅತಿಯಾಗಿದೆ ಅನ್ನೋ ಆರೋಪವಿದೆ. ಹೀಗಾಗಿ ಕೆ.ಎಂಎಫ್ ಸಿದ್ಧಪಡಿಸಿ ಮಾರುಕಟ್ಟೆಗೆ ಬಿಡಲಿರೋ ಉತ್ಪನ್ನದ ಮೇಲೆ ಜನರ ನೀರಿಕ್ಷೆ ಸಹಜವಾಗಿಯೇ ಹೆಚ್ಚಿದೆ. ಆದರೆ ನಂದಿನಿಯ ಈ ಹೊಸ ಎನೆರ್ಜಿ ಡ್ರಿಂಕ್​ ಗಳು ಇವೆಲ್ಲದಕ್ಕೂ ಠಕ್ಕರ್​​ ಕೊಡುತ್ತಾ ಎನ್ನುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ : PM Awas Yojana : ಹೊಸ ಮನೆ ಕಟ್ಟಿಸುವವರಿಗೆ ಕೇಂದ್ರ ಸರಕಾರದಿಂದ ಸಿಗಲಿದೆ 30 ಲಕ್ಷ ರೂಪಾಯಿ

ಒಂದೊಮ್ಮೆ ಕೆಎಂಎಫ್ ಎನರ್ಜಿ ಡ್ರಿಂಕ್ ನಲ್ಲೂ ಯಶಸ್ಸು ಕಂಡರೇ ಉದ್ಯಮ ಕ್ಷೇತ್ರದಲ್ಲಿ ಮತ್ತಷ್ಟು ಬೆಳವಣಿಗೆ ಹೊಂದಲಿದ್ದು ಇದು ರಾಜ್ಯದ ಹಾಲು ಉತ್ಪಾದಕರಿಗೂ ಉತ್ತೇಜನ‌ನೀಡಲಿದೆ ಅನ್ನೋದು ಮಾರುಕಟ್ಟೆ ವಿಶ್ಲೇಷಕರ ಅಂಬೋಣ.

KMF Energy Drinks to market: Good news for milk producers of the Karnataka Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular