ಸೋಮವಾರ, ಏಪ್ರಿಲ್ 28, 2025
HomekarnatakaKodi Mutt Sri : ಈ ಬಾರಿಯೂ ನಿಜವಾಗುತ್ತಾ ಕೋಡಿ ಶ್ರೀ ಭವಿಷ್ಯ

Kodi Mutt Sri : ಈ ಬಾರಿಯೂ ನಿಜವಾಗುತ್ತಾ ಕೋಡಿ ಶ್ರೀ ಭವಿಷ್ಯ

- Advertisement -

ದೇಶದಲ್ಲಿ ಈಗಾಗಲೇ ದೊಂಬಿಗಳು ಹೆಚ್ಚಿದ್ದು, ಕೋಮುಸಾಮರಸ್ಯ ಕದಡಿರುವಾಗಲೇ ದೇಶದಲ್ಲಿ ಮತ್ತಷ್ಟು ಕೋಮು ಗಲಭೆಗಳಾಗುತ್ತದೆ.‌ ಕೊಲೆಗಳು ನಡೆಯುತ್ತದೆ.‌ ಮಾರಕ ಕಾಯಿಲೆಗಳು ತಾಂಡವವಾಡಿ ಸೌಂದರ್ಯವಂತ ಹೆಣ್ಣುಮಕ್ಕಳ ಅಂಗಾಂಗ ಕಿತ್ತುಕೊಳ್ಳುವಂತಾಗುತ್ತದೆ ಎಂಬ ಭಯಂಕರ ಹಾಗೂ ವಿಚಿತ್ರ ಭವಿಷ್ಯ ನುಡಿಯೋ ಮೂಲಕ ಕೋಡಿಮಠದ ಶ್ರೀಗಳು (Kodi Mutt Sri Shivananda Shivayogi Rajendra Swamiji ) ಜನರಿಗೆ ಆತಂಕ ಮೂಡಿಸಿದ್ದಾರೆ.

ಹಾಸನದ ಅರಸೀಕೆರೆ ಕೋಡಿಮಠದ ಕೋಡಿಶ್ರೀ ಭವಿಷ್ಯಕ್ಕೆ ಅದರದ್ದೇ ಆದ ಮಹತ್ವದವಿದೆ. ಪ್ರತಿ ಭಾರಿಯೂ ಶ್ರೀಗಳು ನುಡಿದ ಭವಿಷ್ಯ ನಿಜವಾಗೋದರಿಂದ ಜನರು ಕೋಡಿಮಠದ ಶ್ರೀಗಳ ಭವಿಷ್ಯವಾಣಿ ಬಂದ್ರೇ ಭಯಗೊಳ್ಳುತ್ತಾರೆ. ಇದಕ್ಕೆ ಸರಿಹೊಂದುವಂತೆ ಈ ಭಾರಿ ಶ್ರೀಗಳು ಭಯಾನಕ ಭವಿಷ್ಯ ನುಡಿದಿದ್ದಾರೆ. ಅಶಾಂತಿ, ಮತೀಯಗಲಭೆ, ದೊಂಬಿಗಳು ಸಾವು-ನೋವುಗಳು ಕೊಲೆಗಳಾಗುತ್ತವೆ. ವಿಶೇಷವಾಗಿ ಎಲೆಕ್ಟ್ರಿಕ್‌ನಿಂದ ಅಪಾಯವಿದೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಂಗಗಳನ್ನು ಕಿತ್ತುತಿಂತಾರೆ
. ರಾಜಕೀಯ ವಿಪ್ಲವವಾಗುತ್ತೆ, ರಾಜಕೀಯ ಗುಂಪುಗಳಾಗುತ್ತವೆ

ಬೆಂಕಿಯ ‌ಅನಾಹುತ ಜಾಸ್ತಿ, ಗಾಳಿ, ಸಿಡಿಲು, ಗುಡುಗು ವಿಪರೀತ. ಇಲ್ಲಿಯತನಕ ಕಂಡು ಕೇಳರಿಯದ ಬಹುದೊಡ್ಡ ಅಘಾತ ಭಾರತದಲ್ಲಿ ಆಗುತ್ತದೆ. ಈ ವರ್ಷ ಮಳೆ ಕಂಡಮಂಡಲ. ಅದಲ್ಲಿ ಆಯ್ತು ಹೋದಲ್ಲಿ ಹೋಯ್ತುಮಲ್ನಾಡ್ ಹೋಗಿ ಬಯಲು‌ ಆಗುತ್ತೆ, ಬಯಲು ಹೋಗಿ ಮಲ್ನಾಡ್ ಆಗುತ್ತೆ.ಆ ತರ ಅವಕಾಶ ಮಳೆಗೆ ಇದೆ. ಭಾರತದಲ್ಲಿ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ನಡೆಯುತ್ತದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಅಲ್ಲದೆಡ ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆಯಾಗುತ್ತದೆ ಎಂದಿದ್ದಾರೆ. ಕೋಡಿಶ್ರೀಗಳ ಈ ಭವಿಷ್ಯವನ್ನು ವಿವಿಧ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಸುಂದರಿಯರ ಅಂಗಾಂಗಗಳನ್ನು ಕಿತ್ತು ತಿನ್ನಲಾಗುತ್ತದೆ ಎಂಬುದನ್ನು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತದೆ ಎಂಬರ್ಥದಲ್ಲಿ ಅರ್ಥೈಸಲಾಗುತ್ತಿದ್ದು, ಮಳೆ ರಾಜ್ಯದಲ್ಲೇ ಒಂದೆಡೆ ಭಾರಿ ಅನಾಹುತ ಸೃಷ್ಟಿಸಿದರೇ ಇನ್ನೊಂದೆಡೆ ಅನಾವೃಷ್ಠಿಯಾಗಿ ಸಮಸ್ಯೆ ಉಂಟಾಗಲಿದೆ ಎಂದು ಕೋಡಿಶ್ರೀಗಳು ಎಚ್ಚರಿಸಿದ್ದಾರೆ.

ಮೊದ ಮೊದಲು ವರ್ಷದ ಆರಂಭ ಹಾಗೂ ಹಬ್ಬದ ಸಂದರ್ಭದಲ್ಲಿ ಮಾತ್ರ ಭವಿಷ್ಯ ನುಡಿಯುತ್ತಿದ್ದ ಕೋಡಿಶ್ರೀಗಳು ಇತ್ತೀಚಿಗೆ ಹಲವಾರು ಸಂದರ್ಭದಲ್ಲಿ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ. ಬೊಮ್ಮಾಯಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ವಿಚಿತ್ರವಾಗಿ ಭವಿಷ್ಯ ನುಡಿದಿದ್ದ ಶ್ರೀಗಳು ಸೂತ್ರಧಾರಿ ಪಟ್ಟ ಅಳಿಯುತ್ತದೆ. ಆದರೆ ಸೂತ್ರಧಾರಿ‌ ಸರ್ಕಾರವನ್ನು ನಡೆಸುತ್ತಾನೆ ಎಂದಿದ್ದರು. ಅದರಂತೆ ಬಿಎಸ್ವೈ ಅಧಿಕಾರದಿಂದ ಇಳಿದರೂ ಬೊಮ್ಮಾಯಿ ಮೂಲಕ ತಮ್ಮ ಅಧಿಕಾರ ಮುಂದುವರೆಸುತ್ತಾ ಬಂದಿದ್ದಾರೆ. ಒಟ್ಟಿನಲ್ಲಿ ಯುಗಾದಿ ವೇಳೆ ಕೋಡಿಶ್ರೀಗಳು ನುಡಿದಿರುವ ಈ ಭವಿಷ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಭವಿಷ್ಯದಲ್ಲಿ ವಿಶ್ವಕ್ಕೆ ಶಾಂತಿಗಿಂತ ಅಶಾಂತಿಯೇ ಕಾದಿದೆ ಎಂಬುದನ್ನು ಶ್ರೀಗಳು ಖಚಿತಪಡಿಸಿದ್ದಾರೆ.

Kodi Mutt Sri Shivananda Shivayogi Rajendra Swamiji predicts in the year 2022

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular