ಕೋಟ (Udupi News) : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಕೋಟ ಡಾ.ಶಿವರಾಮ ಕಾರಂತರ ಹೆಸರಲ್ಲಿ ನೀಡಲಾಗುವ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು (Dr. Shivarama Karanth Huttura Prashasti-2023) ಖ್ಯಾತ ಗಾಯಕ ಡಾ.ವಿದ್ಯಾಭೂಷಣ (Dr.Vidyabhushana) ಅವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಪ್ರಧಾನಿಸಿದ್ದಾರೆ.
ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಇದರ ಆಶ್ರಯದಲ್ಲಿ ಕೋಟದ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಕಾರಂತ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಡಾ.ವಿದ್ಯಾಭೂಷಣ ಅವರಿಗೆ ಪ್ರಶಸ್ತಿಯನ್ನು ಪ್ರಧಾನಿಸಲಾಗಿದೆ.
ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂಡ್ ಗೆಹ್ಲೋಟ್ ಅವರು ಡಾ.ವಿದ್ಯಾಭೂಷಣ ಅವರಿಗೆ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಈ ವೇಳೆ ಕನ್ನಡದಲ್ಲೇ ಭಾಷಣವನ್ನು ಆರಂಭಿಸಿದ ರಾಜ್ಯಪಾಲರು ಕಾರಂತರು ಗಾಂಧೀಜಿ ಅವರ ಅನುಯಾಯಿಯಾಗಿದ್ದರು. ವಿಶ್ವಕೋಶ ಎಂದೇ ಖ್ಯಾತರಾಗಿರುವ ಕಾರಂತರು ಆಧುನಿ ಠ್ಯಾಗೋರ್ ಎಂದಿದ್ದಾರೆ.
ಇದನ್ನೂ ಓದಿ : ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ದೈಹಿಕ ಶಿಕ್ಷಕ ಸತೀಶ್ ಶೆಟ್ಟಿ ಆಯ್ಕೆ
ಇನ್ನು ಕಾರಂತರ ಹೆಸರಲ್ಲಿ ನೀಡುವ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿಯಷ್ಟೇ ಶ್ರೇಷ್ಟತೆಯನ್ನು ಹೊಂದಿದೆ ಎಂದು ಡಾ. ವಿದ್ಯಾಭೂಷಣ ಅವರು ಹೇಳಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಡಾ.ಶಿವರಾಮ ಕಾರಂತ ಅವರ ಬದುಕು ಎಲ್ಲರಿಗೂ ಸ್ಪೂರ್ತಿದಾಯಕ. ಯಾವುದೇ ಪ್ರಶಸ್ತಿ ನಮ್ಮನ್ನು ಅರಸಿಕೊಂಡು ಬರಬೇಕೇ ವಿನಹಃ, ನಾವು ಯಾವುದೇ ಪ್ರಶಸ್ತಿಯ ಹಿಂದೆ ಹೋಗ ಬಾರದು. ನಾನು ಇದುವರೆಗೆ ಯಾವುದೇ ಪ್ರಶಸ್ತಿ, ಸನ್ಮಾನದ ಬಗ್ಗೆ ಯೋಚಿಸಿದವನಲ್ಲ ಎಂದಿದ್ದಾರೆ.
ಕಾರ್ಯಕ್ರಮಕ್ಕೆ ಮೊದಲು ರಾಜ್ಯಪಾಲರು ಕೋಟ ಡಾ.ಶಿವರಾಮ ಕಾರಂತರ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕರಾವಳಿಯ ಗಂಡುಕಲೆ ಎಂದೇ ಖ್ಯಾತಿ ಪಡೆದಿರುವ ಯಕ್ಷಗಾನದ ಕಿರೀಟವನ್ನು ತೊಡಿಸಿ ಸನ್ಮಾನಿಸಲಾಯಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕುಂದಾಪುರ ಎ.ಸಿ ರಶ್ಮಿ, ತಹಶೀಲ್ದಾರ್ ಶೋಭಾಲಕ್ಷ್ಮೀ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ಇಬ್ರಾಹಿಂಪುರ್ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಕನ್ನಡದ ಖ್ಯಾತ ಹಿರಿಯ ನಟ ದೊಡ್ಡಣ್ಣಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ 2023
ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಪಡೆದ ಸಾಧಕರು:
ಈಗಾಗಲೇ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ (2005), ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವೆಂಕಟಾಚಲ (2006), ಖ್ಯಾತ ಶಿಕ್ಷಣ ತಜ್ಞ ಕೆ.ಆರ್. ಹಂದೆ (2007), ಪತ್ರಕರ್ತ ರವಿ ಬೆಳಗೆರೆ (2008), ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ (2009), ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ (2010) ಅವರಿಗೆ ಲಭಿಸಿದೆ.
ಪರಿಸರವಾದಿ ಸಾಲು ಮರದ ತಿಮ್ಮಕ್ಕ (2011), ರಂಗಕರ್ಮಿ ಬಿ.ಜಯಶ್ರೀ (2012), ಶಿಕ್ಷಣ ತಜ್ಞ ಡಾ. ಮೋಹನ್ ಆಳ್ವ (2013), ಜಯಂತ ಕಾಯ್ಕಿಣಿ (2014), ರಂಗನಿರ್ದೇಶಕ, ಖ್ಯಾತ ಚಲನಚಿತ್ರ ನಿರ್ದೇಶಕ ಸದಾನಂದ ಸುವರ್ಣ (2015), ಖ್ಯಾತ ವೈದ್ಯರಾದ ಡಾ.ಬಿ.ಎಂ.ಹೆಗ್ಡೆ (2016) ಕಾರಂತರ ಪ್ರಶಸ್ತಿ ಭಾಜರಾಗಿದ್ದಾರೆ.
ಖ್ಯಾತ ನಟ ಪ್ರಕಾಶ್ ರಾಜ್ (2017), ಪರಿಸರ ತಜ್ಞ ಶ್ರೀಪಡ್ರೆ (2018), ಕೃಷಿ ಸಾಧಕಿ ಕವಿತಾ ಮಿಶ್ರಾ (2019), ಡಾ.ಎಸ್.ಎಲ್.ಭೈರಪ್ಪ (2020), ತೂಗುಸೇತುವೆಗಳ ಹರಿಕಾರ ಸುಳ್ಯದ ಗಿರೀಶ್ ಭಾರಧ್ವಾಜ್ (2021), ಖ್ಯಾತ ನಟ ರಮೇಶ್ ಅರವಿಂದ್ (2022), ಖ್ಯಾತ ಹಾಡುಗಾರ ಡಾ.ವಿದ್ಯಾಭೂಷಣ (2023)
Kota Dr. Shivarama Karnath Huttura Prashati 2023 Awarded dr.vidyabhushana Hand over Karnataka Governor Thawar Chand Gehlot