ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ದೈಹಿಕ ಶಿಕ್ಷಕ ಸತೀಶ್ ಶೆಟ್ಟಿ ಆಯ್ಕೆ

ವರ್ಷಂಪ್ರತಿ ನೀಡಲಾಗುತ್ತಿರುವ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ (Aghoreshwara Rajyotsava Award ) ಈ ಬಾರಿ ಚಿತ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ , ಖ್ಯಾತವಾಗ್ಮಿ ಸತೀಶ್ ಶೆಟ್ಟಿ (Teacher Sathish Shetty ) ಅವರು ಆಯ್ಕೆ ಆಗಿದ್ದಾರೆ.

ಕೋಟ: ಶ್ರೀ ಅಘೋರೇಶ್ವರ ಕಲಾರಂಗ (ರಿ) ಕಾರ್ತಟ್ಟು, ಚಿತ್ರಪಾಡಿ ಇದರ ವತಿಯಿಂದ ವರ್ಷಂಪ್ರತಿ ನೀಡಲಾಗುತ್ತಿರುವ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ (Aghoreshwara Rajyotsava Award ) ಈ ಬಾರಿ ಚಿತ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ , ಖ್ಯಾತವಾಗ್ಮಿ ಸತೀಶ್ ಶೆಟ್ಟಿ (Teacher Sathish Shetty ) ಅವರು ಆಯ್ಕೆ ಆಗಿದ್ದಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮ ಚಿತ್ರಪಾಡಿಯಲ್ಲಿರುವ ಶ್ರೀ ಅಘೋರೇಶ್ವರ ಕಲಾರಂಗ (Aghoreshwara Kalaranga Kota) ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುತ್ತಿದೆ. ಕನ್ನಡದ ಕಂಪನ್ನು ಬೆಳಗಿಸುವ ಸಲುವಾಗಿ ವರ್ಷಂಪ್ರತಿ ಕನ್ನಡ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದೆ.

Aghoreshwara Kalaranga kota Sri Aghoreshwar Rajyotsava Award 2023 selected for Chitrapadi teacher Satish Shetty
Image Credit : News Next

ಶ್ರೀ ಅಘೋರೇಶ್ವರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಈ ಬಾರಿ ನವೆಂಬರ್ 18ರಂದು ನಡೆಯಲಿದೆ. ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಯನ್ನು ಕಳೆದ ಹಲವು ವರ್ಷಗಳಿಂದಲೂ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾಮಟ್ಟದಲ್ಲಿನ ಸಾಧನೆಗೈದ ಸಾಧಕರಿಗೆ ನೀಡಲಾಗುತ್ತಿದೆ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ : ಗೃಹಿಣಿಯರಿಗೆ ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸರಕಾರ

ಈ ಬಾರಿ ದೈಹಿಕ ಶಿಕ್ಷಕರಾಗಿ ಗ್ರಾಮೀಣ ಭಾಗದ ಸಾವಿರಾರ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯನ್ನು ನೀಡುವುದರ ಜೊತೆಗೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ  ಗ್ರಾಮೀಣ ಪ್ರತಿಭೆಗಳು ಮಿಂಚುವಂತೆ ಮಾಡಿದವರು ದೈಹಿಕ ಶಿಕ್ಷ ಸತೀಶ್‌ ಶೆಟ್ಟಿ ಅವರು. ಶಾಲೆಯಿಂದ ಹೊರಗೆ ಉಳಿದ ಮಕ್ಕಳನ್ನು ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡುವಲ್ಲಿಯೂ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಖ್ಯಾತ ವಾಗ್ಮಿಯಾಗಿರುವ ಸತೀಶ್‌ ಶೆಟ್ಟಿ ಅವರ ನಿರೂಪಣೆ ಎಂತವರನ್ನೂ ಮಂತ್ರಮುಗ್ದರನ್ನಾಗಿಸುತ್ತದೆ. ಶಿಕ್ಷಕರಾಗಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರಪಾಡಿಯಲ್ಲಿರುವ ಸರಕಾರಿ ಶಾಲೆಯ ಉಳಿವಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.Aghoreshwara Kalaranga kota Sri Aghoreshwar Rajyotsava Award 2023 selected for Chitrapadi teacher Satish Shetty

ಇಂತಹ ಅಪರೂಪದ ದೈಹಿಕ ಶಿಕ್ಷಕರಿಗೆ ಈ ಬಾರಿಯ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಾಡಲಾಗುತ್ತದೆ. ರಾಜ್ಯದ ಮಟ್ಟದ ಪ್ರತಿಷ್ಠಿತ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಯು ಬೆಳ್ಳಿಯ ಕವಚ ಹೊಂದಿರುವ ಸ್ಮರಣಿಕೆಯಾಗಿದ್ದು, ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ : ಅಶಕ್ತ ಕುಟುಂಬಗಳಿಗೆ ನೆರವಾದ ಅಘೋರೇಶ್ವರ ಕಲಾರಂಗ, ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್

ಅಘೋರೇಶ್ವರ ಕಲಾರಂಗವು ಕಳೆದ ಹಲವು ವರ್ಷಗಳಿಂದಲೂ ಹಲವು ಸಾಧಕರನ್ನು ಗುರುತಿಸಿ ಗೌರವಿಸಿದೆ. ರಾಜ್ಯೋತ್ಸವದಂದು ಬೆಳಗ್ಗೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದಿರುವ ಸ್ಥಳೀಯ ಕೃಷಿಕರೊಬ್ಬರನ್ನು ಸಮ್ಮಾನಿಸುವುದು ಹಿಂದಿನಿಂದಲೂ ಬೆಳೆದು ಬಂದ ವಾಡಿಕೆ. ಈ ಮೂಲಕ ಕೃಷಿಗೆ ಉತ್ತೇಜನ ನೀಡುವುದು ಕಲಾರಂಗದ ಆಶಯ.Aghoreshwara Kalaranga kota Sri Aghoreshwar Rajyotsava Award 2023 selected for Chitrapadi teacher Satish Shetty

ದಶಮಾನೋತ್ಸವ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿಕೊಂಡಿರುವ ಶ್ರೀ ಅಘೋರೇಶ್ವರ ಕಲಾರಂಗವು ಅಶಕ್ತರ ಪಾಲಿನ ಆಶಾಕಿರಣವಾಗಿದೆ. ಸಾಧಕರಿಗೆ ಸನ್ಮಾನ, ಅಶಕ್ತರಿಗೆ ವೈದ್ಯಕೀಯ ನೆರವು, ಹಡಿಲು ಬಿದ್ದ ಭೂಮಿಯನ್ನು ಕಲಾರಂಗದ ಸದಸ್ಯರೇ ಉಳುಮೆ ಮಾಡಿ ಬೆಳೆದ ಫಸಲನ್ನು ಅನಾಥಾಶ್ರಮಕ್ಕೆ ಹತ್ತು ವರ್ಷಗಳಿಂದಲೂ ನೀಡುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ : ಕನ್ನಡದ ಖ್ಯಾತ ಹಿರಿಯ ನಟ ದೊಡ್ಡಣ್ಣಗೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ 2023

ಇಷ್ಟೇ ಅಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ ವಿದ್ಯಾಭ್ಯಾಸದಲ್ಲಿ ನೆರವು ನೀಡುವುದು ಮಾತ್ರವಲ್ಲ, ವಸತಿ ರಹಿತರಿಗೆ ಮನೆ ನಿರ್ಮಾಣ, ಸ್ಥಳೀಯವಾಗು ಸ್ಮಶಾನ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.Aghoreshwara Kalaranga kota Sri Aghoreshwar Rajyotsava Award 2023 selected for Chitrapadi teacher Satish Shetty

ದಿನಾಂಕ ನವೆಂಬರ್ 18 ರ ಶನಿವಾರದಂದು ಕೋಟ ಮೂರುಕೈನ ಬಳಿಯಿರುವ ಶ್ರೀ ಅಘೋರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವು ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ನೃತ್ಯ ವೈಭವ, ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದು ಕಲಾರಂಗದ ಕಾರ್ಯದರ್ಶಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Aghoreshwara Kalaranga kota Sri Aghoreshwar Rajyotsava Award 2023 selected for Chitrapadi teacher Satish Shetty

Comments are closed.