Hindu Harsha : ಬಿಜೆಪಿ ಸೂಚಿಸಿದರೇ ಹರ್ಷನ ಕುಟುಂಬಕ್ಕೆ ಸ್ಥಾನಬಿಡಲು ಸಿದ್ಧ ಎಂದ ಈಶ್ವರಪ್ಪ

ಬೆಂಗಳೂರು : ಅಧಿಕಾರಕ್ಕೆ ಎಂಎಲ್ ಎ ಮಕ್ಕಳು, ಹಿಂದೂತ್ವಕ್ಕಾಗಿ ದುಡಿಯಲು ಬಡವರ ಮಕ್ಕಳು ಎಂಬ ವಾಕ್ಯದಡಿ ಈಶ್ವರಪ್ಪನವರ ವಿಧಾನಸಭಾ ಕ್ಷೇತ್ರದ ಟಿಕೇಟ್ ಹರ್ಷನ ಕುಟುಂಬಕ್ಕೆ ನೀಡಬೇಕೆಂಬ ಒತ್ತಡಕ್ಕೆ ಕೊನೆಗೂ ಬೆಲೆ ಬಂದಿದ್ದು ಬಿಜೆಪಿ ಸೂಚಿಸಿದರೇ ಹರ್ಷ ಕುಟುಂಬಕ್ಕೆ ಟಿಕೇಟ್ ನೀಡಲು ಸಿದ್ಧ ಎಂದು ಈಶ್ವರಪ್ಪ ಸ್ಪೋಟಕ ಹೇಳಿಕೆ ನೀಡಿದ್ದಾರೆ. ರಾಯಚೂರಿನಲ್ಲಿ‌ಮಾಧ್ಯಮಗಳ‌ಜೊತೆ ಮಾತನಾಡಿದ ಈಶ್ವರಪ್ಪ, ಹರ್ಷ (Hindu Harsha) ಸಹೋದರಿಗೆ ಟಿಕೇಟ್ ನೀಡಲು ನನಗೆ ಯಾವ ಅಭ್ಯಂತರವೂ ಇಲ್ಲ. ರಾಜಕಾರಣದಲ್ಲಿ ನಾನು ಅವಕಾಶ ನೀಡಿದರೇ ಇನ್ನೊಬ್ಬ ಹಿಂದೂವಿಗೇ ವಿನಃ ಯಾವ ಕಾರಣಕ್ಕೂ ಮುಸ್ಲಿಂನಿಗೆ ಅಧಿಕಾರ ನೀಡುವುದಿಲ್ಲ ಎಂದಿದ್ದಾರೆ.

Minister KS Eshwarappa Says He is Ready to Offer MLA Seat for Hindu Harsha Family

ಹರ್ಷ ಕೊಲೆ (Hindu Harsha Murder) ಪ್ರಕರಣವನ್ನು ಪ್ರಸ್ತಾಪಿಸಿ ಮನಸೋ ಇಚ್ಛೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ನಾನು ಹಿಂದೂಕಾರ್ಯಕರ್ತನಿಗೆ ಟಿಕೇಟ್ ಬಿಟ್ಟು ಕೊಡಲು ಸಿದ್ಧ ನಿದ್ದೇನೆ. ಆದರೆ ಇದನ್ನು ಕಾಂಗ್ರೆಸ್ ನಾಯಕರು ಮಾಡುತ್ತಾರಾ? ಕಾಂಗ್ರೆಸ್ ನವರಿಗೆ ಸ್ಥಾನ ಬೇಕು, ಮುಸ್ಲಿಂರ ಓಟು ಬೇಕು. ಕೊನೆಗೆ ಟೀಕಿಸಲು ಬಿಜೆಪಿ ಬೇಕು ಅಷ್ಟೇ ಅವರ ಯೋಚನೆ ಎಂದು ಟೀಕಿಸಿದ್ದಾರೆ. ಹರ್ಷ ಕುಟುಂಬಕ್ಕೆ ಸಹಾಯ ಮಾಡಲು ಅಥವಾ ನನ್ನ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ. ಹರ್ಷ ಸಹೋದರಿಗೆ ಖುಷಿಯಿಂದ ವಿಧಾನಸಭಾ ಕ್ಷೇತ್ರ ಬಿಟ್ಟುಕೊಡುತ್ತೇನೆ.‌ ಬಿಜೆಪಿಯವರ ಸೂಚನೆ ನೀಡಿದರೇ ನಾನು ಪಾಲಿಸಲು ಸಿದ್ಧವಿದ್ದೇನೆ ಎಂದಿದ್ದಾರೆ.

Minister KS Eshwarappa Says He is Ready to Offer MLA Seat for Hindu Harsha Family
ಶಿವಮೊಗ್ಗದಲ್ಲಿ ಕೊಲೆಯಾಗಿರುವ ಭಜರಂಗದಳ ಕಾರ್ಯಕರ್ತ ಹರ್ಷ

ಡಿಕೆಶಿಯ ಸಿಎಂ ಆಗೋ ಕನಸಿನಲ್ಲಿದ್ದಾರೆ. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಗಳಿಸೋದಿಲ್ಲ ಎಂದು ಟೀಕಿಸಿದ್ದಾರೆ.
ಶಿವಮೊಗ್ಗದ ಹಿಂದೂಪರ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಈಶ್ವರಪ್ಪ ಹಾಗೂ ಬಿಎಸ್ವೈ ವಿರುದ್ಧ ತೀವ್ರ ಅಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಸೋಷಿಯಲ್ ಮೀಡಿಯಾ ದಲ್ಲೂ ದೊಡ್ಡ ಅಭಿಯಾನವೇ ನಡೆದಿತ್ತು.

Minister KS Eshwarappa Says He is Ready to Offer MLA Seat for Hindu Harsha Family
ಭಜರಂಗದಳ ಕಾರ್ಯಕರ್ತ ಹರ್ಷ, ಜೆಪಿ ನಡ್ಡಾ ಹಾಗೂ ಆರಗ ಜ್ಞಾನೇಂದ್ರ

ಹಿಂದೂತ್ವದ ಹೆಸರಿನಲ್ಲಿ ಬಲಿಯಾಗಲು ಬಡವರ ಮಕ್ಕಳು. ಅಧಿಕಾರ ಅನುಭವಿಸಲು ಈಶ್ವರಪ್ಪ, ಯಡಿಯೂರಪ್ಪ ಮಕ್ಕಳು. ಈ ಪದ್ಧತಿ ಬಿಟ್ಟು ಈ ಭಾರಿ ಬಿಜೆಪಿ ಹರ್ಷನ ಕುಟುಂಬ ಕ್ಕೆ ಟಿಕೇಟ್‌ ನೀಡಿ ಅವನ ತ್ಯಾಗಕ್ಕೆ ಗೌರವ ನೀಡಿ ಎಂಬಪೋಸ್ಟ್ ಸಿದ್ಧಪಡಿಸಲಾಗಿತ್ತು.ಈ ವೈರಲ್ ಪೋಸ್ಟ್ ಗೆ ಹೇಳಿಕೆ ನೀಡಿದ್ದ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಒಂದೊಮ್ಮೆ ಬಿಜೆಪಿ ಹರ್ಷ (Hindu Harsha) ಕುಟುಂಬಕ್ಕೆ ಟಿಕೇಟ್ ನೀಡಿದರೇ ನಾವು ಕ್ಯಾಂಡಿಡೇಟ್ ಹಾಕದೇ ಬೆಂಬಲ‌ ನೀಡುತ್ತೇವೆ ಎಂದಿದ್ದರು.

ಇದನ್ನೂ ಓದಿ : ಮೃತ ಹರ್ಷ ತಾಯಿಗೆ ಬಿಜೆಪಿ ಟಿಕೇಟ್ : ಈಶ್ವರಪ್ಪ, ಯಡಿಯೂರಪ್ಪ ಎದೆಯಲ್ಲಿ ನಡುಕ

ಇದನ್ನೂ ಓದಿ : ಪ್ರಥಮ್ ಮೂಲಕ ಹರ್ಷ ಕುಟುಂಬಕ್ಕೆ 5 ಲಕ್ಷ ನೆರವು ನೀಡಿದ ಧ್ರುವ ಸರ್ಜಾ

(Minister KS Eshwarappa Says He is Ready to Offer MLA Seat for Hindu Harsha Family)

Comments are closed.