KSRTC bus Rate hike: ಪ್ರಯಾಣಿಕರಿಗೆ ಬಿಗ್‌ ಶಾಕ್‌ ನೀಡಿದ KSRTC: ಮೈಸೂರು ‌- ಬೆಂಗಳೂರು ನಡುವೆ ಪ್ರಯಾಣದ ಬಸ್ ದರ ಹೆಚ್ಚಳ

ಬೆಂಗಳೂರು: (KSRTC bus Rate hike) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬೆಂಗಳೂರು ಮತ್ತು ಮೈಸೂರು ನಡುವಿನ ಬಸ್ ಪ್ರಯಾಣ ದರವನ್ನು ಹೆಚ್ಚಿಸಿದೆ. ಹೊಸದಾಗಿ ತೆರೆದಿರುವ 199-ಕಿಮೀ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಭಾಗದಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಸಂಗ್ರಹಿಸಲು ಪ್ರಾರಂಭಿಸಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಉಭಯ ನಗರಗಳ ನಡುವೆ ಪ್ರಯಾಣದ ಟಿಕೆಟ್‌ ದರ ಹೆಚ್ಚಳ ಮಾಡಿ ಪ್ರಕಟಣೆ ಹೊರಡಿಸಿದೆ.

ವೋಲ್ವೋ ಹಾಗೂ ಸಾಮಾನ್ಯ ಬಸ್‌ ಗಳಿಗೆ ಪ್ರತ್ಯೇಕವಾಗಿ ದರ ಪರಿಷ್ಕರಣೆ ಮಾಡಲಾಗಿದ್ದು, ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೂ 15, ರಾಜಹಂಸ ಬಸ್‌ಗಳಲ್ಲಿ ರೂ 18 ಮತ್ತು ಮಲ್ಟಿ ಆಕ್ಸಲ್ ಮತ್ತು ಇತರ ಬಸ್‌ಗಳಲ್ಲಿ ರೂ 20 ಹೆಚ್ಚಳ ಮಾಡಲಾಗಿದೆ. ಮೈಸೂರು ಬೆಂಗಳೂರು ಎಕ್ಸ್​​ಪ್ರೆಸ್ ವೇಯಲ್ಲಿ ಟೋಲ್ ದರ ಸ್ವಲ್ಪ ಹೆಚ್ಚಿರುವುದರಿಂದ ಟಿಕೆಟ್ ದರದಲ್ಲಿ ಅನಿವಾರ್ಯವಾಗಿ ಹೆಚ್ಚಳ ಮಾಡಬೇಕಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು- ಮೈಸೂರು ಹೆದ್ದಾರಿಯ ಟೋಲ್‌ ಗಳಲ್ಲಿ ಟ್ರಕ್‌ಗಳು/ಬಸ್ಸುಗಳು (ಎರಡು ಆಕ್ಸಲ್‌ಗಳು) ರೂ 460 (ಒನ್-ವೇ) ಮತ್ತು ರೂ 690 (24 ಗಂಟೆಗಳ ಒಳಗೆ ರೌಂಡ್ ಟ್ರಿಪ್) ಪಾವತಿಸಬೇಕಾಗುತ್ತದೆ. ಬಸ್‌ಗೆ ಮಾಸಿಕ ಪಾಸ್ (50 ಸಿಂಗಲ್ ಟ್ರಿಪ್‌ಗಳು) 15,325 ರೂ ಪಾವತಿಸಬೇಕಾಗುತ್ತದೆ. KSRTC ಭಾರತದಲ್ಲಿನ ಅತಿದೊಡ್ಡ ಸಾರ್ವಜನಿಕ ಸಾರಿಗೆ ಪೂರೈಕೆದಾರರಲ್ಲಿ ಒಂದಾಗಿದ್ದು, ಅದರ 8000 ವೇಳಾಪಟ್ಟಿಗಳ ಮೂಲಕ 28 ಲಕ್ಷ ಕಿಲೋಮೀಟರ್‌ಗಳನ್ನು ನಿರ್ವಹಿಸುತ್ತದೆ ಮತ್ತು 28 ಲಕ್ಷ ಪ್ರಯಾಣಿಕರನ್ನು ಸಾಗಿಸುತ್ತದೆ.

ಮೈಸೂರು- ಬೆಂಗಳೂರು ಎ-ಹೈವೇ ತೀವ್ರ ವಿರೋಧದ ನಡುವೆಯೂ ಮೊನ್ನೆಯ ದಿನ ಪ್ರಧಾನಿ ಮೋದಿ ಅವರಿಂದ ಲೋಕಾರ್ಪಣೆಗೊಂಡಿತು. ಲೋಕಾರ್ಪಣೆ ಬೆನ್ನಲ್ಲೇ ಹಲವು ಆಕ್ರೋಶಗಳು, ತೀವ್ರ ವಿರೋಧದ ನಡುವೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಳಿಗ್ಗೆಯಿಂದಲೇ ಮೊದಲ ಹಂತದ ಟೋಲ್‌ ಸಂಗ್ರಹ ಮಾಡಲು ಆರಂಭಿಸಿದೆ.

ಇದನ್ನೂ ಓದಿ : Karnataka weather : ಕರಾವಳಿ ಸೇರಿ‌ ರಾಜ್ಯದ ಹಲವೆಡೆ 5 ದಿನ ಭಾರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

KSRTC bus rate hike: KSRTC gave a big shock to passengers: bus fare hike between Mysore-Bangalore

Comments are closed.