ಬೆಂಗಳೂರು : ರಾಜ್ಯದಲ್ಲಿ, ದೇಶದಲ್ಲಿ ಸರ್ಕಾರಿ ಸಂಸ್ಥೆಗಳ, ಉದ್ದಿಮೆಗಳ ಖಾಸಗಿಕರಣ ಸದ್ದು ಮಾಡ್ತಿರೋ ಹೊತ್ತಿನಲ್ಲೇ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯೊಂದನ್ನು ಸಂಸದರು ಆಸಕ್ತಿ ವಹಿಸಿ ಖಾಸಗಿಕರಣ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಹಾಗೂ ರಾಜ್ಯದ ಸಾವಿರಾರು ಸಾರಿಗೆ ನೌಕರರ ಚಿಕಿತ್ಸೆಗೆ ಬಳಕೆಯಾಗುತ್ತಿರೋ ಜಯನಗರದ ಕೆಎಸ್ಆರ್‌ಟಿಸಿಯ (KSRTC hospital ) ಆಸ್ಪತ್ರೆ ಮೇಲೆ ಬೆಂಗಳೂರಿನ ಪ್ರಭಾವಿಗಳ ಕಣ್ಣು ಬಿದ್ದಿದ್ದು ಈ ಆಸ್ಪತ್ರೆಯನ್ನು ಖಾಸಗಿಕರಣ ಮಾಡುವ ಹುನ್ನಾರ ನಡೆದಿದೆ ಎಂದು ಕೆಎಸ್ಆರ್ಟಿಸಿ ನೌಕರರ ಸಂಘ ಆರೋಪಿಸಿದೆ.
ಸಾವಿರಾರು ಸಾರಿಗೆ ನೌಕರರಿಗೆ ಆಸರೆಯಾಗಿರೋ ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಯನ್ನು ಖಾಸಗಿ ಆಸ್ಪತ್ರೆ ಗೆ 30 ವರ್ಷ ಗುತ್ತಿಗೆ ನೀಡಲು ಒತ್ತಡವಿದೆ ಎನ್ನಲಾಗ್ತಿದೆ. ಅದರಲ್ಲೂ ಬೆಂಗಳೂರು ದಕ್ಷಿಣ ವಿಭಾಗದ ಸಂಸದ ತೇಜಸ್ವಿ ಸೂರ್ಯ ಈ ಆಸ್ಪತ್ರೆ ಖಾಸಗಿಕರಣಕ್ಕೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಾಸವಿ ಸಮಾಜದ ಡಯಾಲಿಸ್ ಸಂಸ್ಥೆಗೆ ಕೆಎಸ್ಆರ್ಟಿಸಿ ಆಸ್ಪತ್ರೆಗೆ ಗುತ್ತಿಗೆ ನೀಡಲು ಪ್ಲ್ಯಾನ್ ನಡೆದಿದ್ದು, ಈಗಾಗಲೇ ಸಿಎಂ ಮತ್ತು ಸಾರಿಗೆ ಸಚಿವರ ಮೇಲೆ ಒತ್ತಡ ಹೇರಲಾಗುತ್ತಿದೆ. ಇದಕ್ಕೆ ಸ್ವತಃ ಸಂಸದರೇ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಸಾರಿಗೆ ನೌಕರರು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರೋ ಸಾರಿಗೆ ನೌಕರರ ಯೂನಿಯನ್ ಮುಖಂಡ ಅನಂತ ಸುಬ್ಬರಾವ್ ರಾಜ್ಯದಲ್ಲಿ ಕೆಎಸ್ಆರ್ಟಿಸಿಗೆ ನೌಕರರಿಗೆ ಇರೋ ಏಕೈಕ ಆಸ್ಪತ್ರೆ ಜಯನಗರದ ಆಸ್ಪತ್ರೆ. ಈ ಆಸ್ಪತ್ರೆಯನ್ನ ಖಾಸಗೀಕರಣ ಮಾಡಿದ್ರೆ ಸಂಸದರ ಕಚೇರಿ ಮುಂದೆ ಉಗ್ರ ಹೋರಾಟ ಮಾಡ್ತೇವೆ. ಸಂಸದರು ತಮ್ಮ ಕ್ಷೇತ್ರದ ಮತದಾರರನ್ನು ಓಲೈಕೆ ಮಾಡಲು ಹೀಗೆ ಮಾಡ್ತಿದ್ದಾರೆ. ಆದ್ರೆ ಈ ಆಸ್ಪತ್ರೆ ನಂಬಿ ಸಾವಿರಾರು ನೌಕರರಿದ್ದಾರೆ. ಇದನ್ನ ಖಾಸಗಿಗೆ ಕೊಟ್ರೆ ನೌಕರರು ಎಲ್ಲಿಗೆ ಹೋಗ್ಬೇಕು ? ಇದ್ರ ಹಿಂದೆ ಸಂಸದರ ಸ್ವಹಿತಾಸಕ್ತಿ ಇದೆ ಎಂಬ ಆರೋಪಿಸಿದ್ದಾರೆ.
ಈ ಹಿಂದೆಯೂ ಸಂಸದ ತೇಜಸ್ವಿ ವಿರುದ್ಧ ನಿಯಮ ವಾಸವಿ ಖಾಸಗಿ ಸಂಸ್ಥೆಗೆ ಈ ಆಸ್ಪತ್ರೆಯನ್ನು ಪರಭಾರೆ ಮಾಡಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು ಈಗ ಮತ್ತೊಮ್ಮೆ ಇದೇ ಅರೋಪವನ್ನು ಸಾರಿಗೆ ನೌಕರರೆ ಮಾಡ್ತಿದ್ದಾರೆ. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನಷ್ಟದಲ್ಲಿದ್ದು, ತನ್ನ ಸ್ವತ್ತುಗಳ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಸಾರಿಗೆ ಇಲಾಖೆಯ ಈ ಆಸ್ಪತ್ರೆಯನ್ನು ಖಾಸಗಿಯವರ ಕೈಗಿಡಲು ಹುನ್ನಾರ ನಡೆದಿದೆ ಎಂಬ ಮಾತು ಕೇಳಿಬಂದಿದೆ.
ಇದನ್ನೂ ಓದಿ : terrorist arrested : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್
ಇದನ್ನೂ ಓದಿ : Droupadi Murmu takes oath : ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಪ್ರಮಾಣ ವಚನ
KSRTC hospital to private hands? MP Tejasvi Surya influenced the handover