Most Consecutive ODI Series WIN : ಪಾಕ್ ವಿಶ್ವದಾಖಲೆ ಪೀಸ್ ಪೀಸ್, ವಿಂಡೀಸ್”ನಲ್ಲಿ ಅದ್ವಿತೀಯ ವಿಶ್ವದಾಖಲೆ ಬರೆದ ಯಂಗ್ ಇಂಡಿಯಾ

ಟ್ರಿನಿಡಾಡ್: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯವನ್ನು 2 ವಿಕೆಟ್’ಗಳಿಂದ ರೋಚಕವಾಗಿ ಗೆಲ್ಲುವ ಮೂಲಕ ಭಾರತ ತಂಡ, 3 ಪಂದ್ಯಗಳ ಏಕದಿನ ಸರಣಿಯನ್ನು(India vs West Indies) ಕೈವಶ ಮಾಡಿಕೊಂಡಿದೆ. ವಿಂಡೀಸ್ ವಿರುದ್ಧದ ಸರಣಿ ಗೆಲುವಿನೊಂದಿಗೆ ಭಾರತ ತಂಡ, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರ ವಿರುದ್ಧ ಸತತ 12 ದ್ವಿಪಕ್ಷೀಯ ಸರಣಿಗಳನ್ನು(Most Consecutive ODI Series WIN) ಗೆದ್ದ ಐತಿಹಾಸಿಕ ದಾಖಲೆ ಬರೆದಿದೆ. ಈ ಮೂಲಕ ಟೀಮ್ ಇಂಡಿಯಾ, ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಹೆಸರಲ್ಲಿದ್ದ ವಿಶ್ವದಾಖಲೆಯನ್ನು ಪುಡಿಗಟ್ಟಿದೆ. 1996ರಿಂದ 2021ರವರೆಗೆ ಕ್ರಿಕೆಟ್ ಶಿಶು ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಸತತ 11 ಏಕದಿನ ಸರಣಿಗಳನ್ನು ಗೆದ್ದದ್ದು ಇದುವರೆಗಿನ ವಿಶ್ವದಾಖಲೆಯಾಗಿತ್ತು.

ವಿಂಡೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ 2007ರಿಂದ 2022ರವರೆಗೆ ಕೆರಿಬಿಯನ್ನರ ವಿರುದ್ಧ ಆಡಿದ 12 ಏಕದಿನ ಸರಣಿಗಳನ್ನು ಭಾರತ ಗೆದ್ದಂತಾಗಿದೆ. ಕಳೆದ 15 ವರ್ಷಗಳಲ್ಲಿ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ 12 ಏಕದಿನ ಸರಣಿಗಳನ್ನಾಡಿದ್ದು, ಆ 12 ಸರಣಿಗಳಲ್ಲೂ ಭಾರತ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದೆ.

ದ್ವಿಪಕ್ಷೀಯ ಏಕದಿನ ಸರಣಿ ಗೆಲುವಿನ ವಿಶ್ವದಾಖಲೆ
12: ಭಾರತ (ವೆಸ್ಟ್ ಇಂಡೀಸ್ ವಿರುದ್ಧ: 2007-2022)
11: ಪಾಕಿಸ್ತಾನ (ಜಿಂಬಾಬ್ವೆ ವಿರುದ್ಧ: 1996-2021)
10: ಪಾಕಿಸ್ತಾನ (ವೆಸ್ಟ್ ಇಂಡೀಸ್ ವಿರುದ್ಧ: 1999-2022)
09: ದಕ್ಷಿಣ ಆಫ್ರಿಕಾ (ಜಿಂಬಾಬ್ವೆ ವಿರುದ್ಧ: 1995-2018)
09: ಭಾರತ (ಶ್ರೀಲಂಕಾ ವಿರುದ್ಧ: 2007-2021)

ಟ್ರಿನಿಡಾಡ್’ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ಭಾನುವಾರ ನಡೆದ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ 2 ವಿಕೆಟ್’ಗಳ ರೋಚಕ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ತಂಡ 50 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 311 ರನ್”ಗಳ ಬೃಹತ್ ಮೊತ್ತ ಕಲೆ ಹಾಕಿತು. ವಿಂಡೀಸ್ ಪರ 100ನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯವಾಡಿದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಶಾಯ್ ಹೋಪ್, 100ನೇ ಪಂದ್ಯದಲ್ಲಿ ಶತಕ ಬಾರಿಸಿದರು.

312 ರನ್’ಗಳ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 79 ರನ್ನಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ 4ನೇ ವಿಕೆಟ್”ಗೆ ಉಪನಾಯಕ ಶ್ರೇಯಸ್ ಅಯ್ಯರ್ (71 ಎಸೆತಗಳಲ್ಲಿ 63 ರನ್) ಮತ್ತು ಸಂಜು ಸ್ಯಾಮ್ಸನ್ (51 ಎಸೆತಗಳಲ್ಲಿ 54 ರನ್) 99 ರನ್”ಗಳ ಜೊತೆಯಾಟವಾಡುವ ಮೂಲಕ ಭಾರತವನ್ನು ಮತ್ತೆ ಗೆಲುವಿನ ಹಳಿಗೆ ತಂದು ನಿಲ್ಲಿಸಿದರು. 6ನೇ ಕ್ರಮಾಂಕದಲ್ಲಿ ಆಲ್ರೌಂಡರ್ ದೀಪಕ್ ಹೂಡ 33 ರನ್ ಗಳಿಸಿದ್ರೆ, ಫಿನಿಷರ್ ರೂಪದಲ್ಲಿ 7ನೇ ಕ್ರಮಾಂಕದಲ್ಲಿ ಕ್ರೀಸ್”ಗಿಳಿದ ಮತ್ತೊಬ್ಬ ಆಲ್ರೌಂಡರ್ ಅಕ್ಷರ್ ಪಟೇಲ್ ಕೇವಲ 35 ಎಸೆತಗಳಲ್ಲಿ 5 ಸಿಕ್ಸರ್’ಗಳ ನೆರವಿನಿಂದ ಅಜೇಯ 64 ರನ್ ಸಿಡಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಸರಣಿಯ 3ನೇ ಪಂದ್ಯ ಬುಧವಾರ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ : Virat Kohli Big Statement : “ಏಷ್ಯಾ ಕಪ್, ವಿಶ್ವಕಪ್ ಗೆಲ್ಲಲು ಯಾವ ತ್ಯಾಗಕ್ಕೂ ಸಿದ್ಧ” ಕೊಹ್ಲಿ ಮಾತಿನ ಅರ್ಥವೇನು ?

ಇದನ್ನೂ ಓದಿ : Rishabh Pant helped Cricket Australia : ರಿಷಭ್ ಪಂತ್ ಕಾರಣದಿಂದ ಕ್ರಿಕೆಟ್ ಆಸ್ಟ್ರೇಲಿಯಾ ಖಜಾನೆಗೆ ಕೋಟಿ ಕೋಟಿ ದುಡ್ಡು.. ಹೇಗೆ ಗೊತ್ತಾ?

India vs West Indies Most Consecutive ODI Series WIN Break Pakistan Record

Comments are closed.