ಹುಟ್ಟೂರಲ್ಲಿ ಹುತಾತ್ಮ ವೀರಯೋಧನಿಗೆ ಅಂತಿಮ ನಮನ

ವಿಜಯಪುರ :  ಹುತಾತ್ಮರಾದ ವೀರ ಯೋಧ ಕಾಶಿರಾಯ ಅವರ ಅಂತ್ಯಕ್ರಿಯೆಯನ್ನು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಯಲ್ಲಿ ಇಂದು ಸಕಲ ಸರಕಾರಿ ಗೌರವದೊಂದಿಗೆ ನಡೆಯಿತು.

ಪುಲ್ವಾಮಾದಲ್ಲಿ ಉಗ್ರರ  ಕಾರ್ಯಾಚರಣೆಯಲ್ಲಿ ಕಾಶಿರಾಯ ಬೊಮ್ಮನಹಳ್ಳಿ ವೀರ ಮರಣವನ್ನಪ್ಪಿದ್ದರು.  ಯೋಧ ಕಾಶಿರಾಯ ಬೊಮ್ಮನಹಳ್ಳಿ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ತರಲಾಗಿತ್ತು. ವಿಜಯ ಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಸ್ವಗ್ರಾಮ ದಲ್ಲಿ ಜೈಕಾರಗಳೊಂದಿಗೆ ದೇಶಪ್ರೇಮಿಯ ಪಾರ್ಥಿವ ಶರೀರ ವನ್ನು ಅದ್ದೂರಿಯಾಗಿ ಸ್ವಾಗತಕೋರಲಾಯಿತು, ಉಕ್ಕಲಿ ಗ್ರಾಮದ ಸರಕಾರಿ ಗಂಡು ಮಕ್ಕಳ ಶಾಲೆಯ ಆವರಣ ದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಯನ್ನು  ಮಾಡಲಾಗಿತ್ತು.

ಪತ್ನಿ ಹಾಗೂ ತಾಯಿಗೆ ಯೋಧನ ಪಾರ್ಥಿವ ಶರೀರದ ಮೇಲೆ ಹಾಕಿದ್ದ ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಲಾಯ್ತು. ಪತ್ನಿ, ಇಬ್ಬರು ಮಕ್ಕಳು ತಾಯಿ ಹಾಗೂ ಸಹೋದರರು, ಯೋಧರು ಪಾರ್ಥೀವ ಶರೀರಕ್ಕೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಸರಕಾರಿ ಗೌರವದ ಜೊತೆಗೆ  ಲಿಂಗಾಯತ  ವಿಧಿ ವಿಧಾನ ಮೂಲಕ ನಡೆದ ಅಂತ್ಯಕ್ರಿಯೆ ನಡೆಸಲಾಯಿತು.

ಈ ವೇಳೆ ಮಗನನ್ನ ಅಪ್ಪನಂತೆ ಸೈನಿಕ ಮಾಡುವೆ ಎಂದು ಹುತಾತ್ಮ ಯೋಧನ ಪತ್ನಿ ಸಂಗೀತಾ ಪಾರ್ಥಿವ ಶರೀರದ ಎದುರು ನಿಂತು ಶಪಥ ಮಾಡಿದ್ದಾರೆ. ಪಾರ್ಥಿವ ಶರೀರ ಮುಂಭಾಗದಲ್ಲಿ ಕುಳಿತು ಪತ್ನಿ ಸಂಗೀತಾ ಕಣ್ಣೀರು ಹಾಕಿದ್ದಾರೆ.

Comments are closed.