BigBoss : ಬಿಗ್ ಬಾಸ್ ಮನೆಯಿಂದ ಹೊರಬಂದ ನಿಧಿ ಸುಬ್ಬಯ್ಯ

ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತಲೇ ಪೈಪೋಟಿ ಜೋರಾಗಿದೆ. ಎರಡನೇ ವಾರ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.

ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಎರಡನೇ ವಾರ ನಟಿ ನಿಧಿ ಸುಬ್ಬಯ್ಯ ತುಂಬಾ ಚೆನ್ನಾಗಿಯೇ ಆಟವಾಡಿದ್ದಾರೆ. ಟಾಸ್ಕ್ ಗಳಲ್ಲಿ ಯೂ ತುಂಬಾ ಚೆನ್ನಾಗಿ ಭಾಗಿಯಾಗಿದ್ರು. ಆದರೆ ಅರವಿಂದ್ ಜೊತೆ ಕಿರಿಕ್ ಮಾಡಿಕೊಂಡಿದ್ರು. ಈ ವಿಚಾರದ ಕುರಿತು ಸಾಕಷ್ಟು ಚರ್ಚೆಯೂ ನಡೆದಿತ್ತು.

ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ನಲ್ಲಿ ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಹೀಗಾಗಿ ಎಲ್ಲಾ ಸ್ಪರ್ಧಿಗಳು ಜೋಷ್ ನಿಂದಲೇ ಟಾಸ್ಕ್ ಗಳಲ್ಲಿ ಭಾಗಿಯಾಗಿದ್ರು. ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗುವ ಮೂಲಕ ದಾಖಲೆ ಬರೆದಿದ್ದರು‌. ಇದೀಗ ನಿಧಿ 84ನೇ ದಿನಕ್ಕೆ ತಮ್ಮ ಆಟವನ್ನು ಮುಗಿಸಿದ್ದಾರೆ.

https://fb.watch/v/3ne34W5FB/

Comments are closed.