ಭಾನುವಾರ, ಏಪ್ರಿಲ್ 27, 2025
HomekarnatakaLaunch of Shakti Yojana : ಶಕ್ತಿ ಯೋಜನೆಗೆ ನಾಳೆ ಚಾಲನೆ, ಸರಕಾರಿ ಬಸ್‌ ಓಡಿಸುವಂತೆ...

Launch of Shakti Yojana : ಶಕ್ತಿ ಯೋಜನೆಗೆ ನಾಳೆ ಚಾಲನೆ, ಸರಕಾರಿ ಬಸ್‌ ಓಡಿಸುವಂತೆ ಕರಾವಳಿಗರು ಪಟ್ಟು

- Advertisement -

ಉಡುಪಿ/ ಮಂಗಳೂರು : (Launch of Shakti Yojana) ಕರ್ನಾಟಕ ರಾಜ್ಯದಾದ್ಯಂತ ಮಹತ್ವಾಕಾಂಕ್ಷಿಯ ಶಕ್ತಿ ಯೋಜನೆ ಜಾರಿಗೆ ಬರಲಿದೆ. ಸಿಎಂ ಸಿದ್ದರಾಮಯ್ಯ ಖುದ್ದು ಬಿಎಂಟಿಸಿ ಬಸ್‌ನಲ್ಲಿ ಟಿಕೆಟ್‌ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯದಾದ್ಯಂತ ನಾಲ್ಕು ವಿಭಾಗಗಳ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಈ ಯೋಜನೆಯ ಪ್ರಯೋಜನ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಲಭ್ಯವಿಲ್ಲ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿಯೂ ಹೆಚ್ಚು ಬಸ್‌ಗಳನ್ನು ಓಡಿಸುವಂತೆ ಕರಾವಳಿ ಭಾಗದ ಮಹಿಳೆಯರು ಬಿಗಿಪಟ್ಟು ಹಿಡಿದಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಸುಗಳು ನಿತ್ಯವೂ ಸಂಚಾರ ಮಾಡುತ್ತಿವೆ. ಆದರೆ ಎಲ್ಲಾ ಬಸ್ಸುಗಳು ಖಾಸಗಿ ಬಸ್‌ ಮಾಲೀಕರ ಒಡೆತನದಲ್ಲಿವೆ. ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸರಕಾರಿ ನರ್ಮ್‌ ಬಸ್‌ಗಳ ಸಂಚಾರ ವಿರಳಾತಿ ವಿರಳ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲಿ ಸರಕಾರಿ ಬಸ್‌ ಸಂಚಾರವಿದೆ. ಆದರೆ ಉತ್ತರ ಕರ್ನಾಟಕ ಭಾಗಗಳಿಗೆ ಹೋಲಿಕೆ ಮಾಡಿದ್ರೆ ತೀರಾ ಕಡಿಮೆ. ಈ ಹಿನ್ನೆಲೆಯಲ್ಲಿಯೇ ಅತೀ ಹೆಚ್ಚು ಬಸ್‌ಗಳನ್ನು ಓಡಿಸುವಂತೆ ಆಗ್ರಹ ಕೇಳಿಬಂದಿದೆ. ಇನ್ನೊಂದೆಡೆಯಲ್ಲಿ ಉಡುಪಿ ಮಂಗಳೂರು ಅವಳಿ ನಗರಗಳಾಗಿದ್ದು, ಎರಡೂ ನಗರಗಳ ನಡುವೆ ಸರಕಾರಿ ಬಸ್‌ಗಳು ಸಂಚರಿಸುತ್ತಿದ್ದರೂ ಕೂಡ ಸಾಮಾನ್ಯ ಬಸ್ಸುಗಳು ಸಂಚರಿಸುವುದು ತೀರಾ ಕಡಿಮೆ ಇದೇ ಕಾರಣಕ್ಕೆ ಜನರು ಖಾಸಗಿ ಬಸ್ಸುಗಳನ್ನೇ ಆಶ್ರಯಿಸಬೇಕಾಗಿದೆ.

ಎರಡೂ ಜಿಲ್ಲೆಗಳಲ್ಲಿನ ಪ್ರತೀ ಗ್ರಾಮಗಳಿಗೆ ಸರಕಾರಿ ಬಸ್ಸುಗಳ ಸಂಚಾರವನ್ನು ಆರಂಭಿಸುವುದರ ಜೊತೆಗೆ ಉಡುಪಿ ಮತ್ತು ಮಂಗಳೂರು ನಡುವೆ ಹೆಚ್ಚುವರಿ ಸರಕಾರಿ ಬಸ್‌ಗಳನ್ನು ಆರಂಭಿಸಬೇಕೆಂಬ ಕೂಗು ಕೇಳಿಬಂದಿದೆ. ಖಾಸಗಿ ಬಸ್ಸುಗಳ ಟಿಕೆಟ್‌ ದರ ಸಾಕಷ್ಟು ದುಬಾರಿಯಾಗಿದ್ದು, ಸರಕಾರಿ ಬಸ್ಸುಗಳನ್ನು ಓಡಿಸುವುದರ ಮೂಲಕ ಜನರಿಗೆ ಅನುಕೂಲ ಆಗುವುದರ ಜೊತೆಗೆ ಕೆಎಸ್‌ಆರ್‌ಟಿಸಿ ಬೊಕ್ಕಸಕ್ಕೂ ಅನುಕೂಲವಾಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ಇದನ್ನೂ ಓದಿ : Buffalo Milk Price Hike : ಎಮ್ಮೆ ಹಾಲಿನ ದರ ಏರಿಕೆ : ಲೀಟರ್‌ಗೆ 9.25 ರೂ. ಹೆಚ್ಚಳ

ನಾಳೆಯಿಂದ ಶಕ್ತಿಯೋಜನೆ ಜಾರಿಗೆ ಬರುತ್ತಿದ್ದು, ರಾಜಹಂಸ, ಸ್ಲೀಪರ್‌, ಎಸಿ, ಐರಾವತ ಸೇರಿದಂತೆ ಐಶಾರಾಮಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ಸರಕಾರದ ಯೋಜನೆ ಜಾರಿಗೊಂಡರೂ ಕರಾವಳಿ ಭಾಗದಲ್ಲಿ ವಾಸಿಸುವ, ಅದರಲ್ಲೂ ಗ್ರಾಮಗಳಲ್ಲಿ ಇರುವ ಪ್ರಯಾಣಿಕರಿಗೆ ಈ ಸೌಲಭ್ಯವಿರುವುದಿಲ್ಲ. ಈ ಕುರಿತಂತೆ ಸರಕಾರ ದಕ್ಷಿಣಕನ್ನಡ, ಮಂಗಳೂರು ಹಾಗೂ ಉಡುಪಿ ಭಾಗದ ಜನರಿಗೆ ವಿಶೇಷವಾಗಿ ಸವಲತ್ತುಗಳನ್ನು ನೀಡಬಹುದೇ ? ಎಂದು ಕಾದು ನೋಡಬೇಕಿದೆ.

Launch of Shakti Yojana: Shakti Yojana will be launched tomorrow, residents have asked to drive government buses

RELATED ARTICLES

Most Popular