Buffalo Milk Price Hike : ಎಮ್ಮೆ ಹಾಲಿನ ದರ ಏರಿಕೆ : ಲೀಟರ್‌ಗೆ 9.25 ರೂ. ಹೆಚ್ಚಳ

ಕಲಬುರಗಿ : (Buffalo Milk Price Hike) ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಮ್ಮೆ ಹಾಲಿನ ಬೆಲೆಯಲ್ಲಿ ಪ್ರತೀ ಲೀಟರ್‌ಗೆ 9.25 ರೂಪಾಯಿ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ 36.80 ರೂಪಾಯಿ ನೀಡಲಾಗುತ್ತಿದ್ದು, ಈ ದರವನ್ನು 46 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ ಎಂದು ಕಲಬುರಗಿ, ಬೀದರ್‌ ಹಾಗೂ ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್‌ಕೆ ಪಾಟೀಲ್‌ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ದರ ಹೆಚ್ಚಳ ಕೇವಲ ಕಲಬುರಗಿ, ಯಾದಗಿರಿ ಹಾಗೂ ಬೀದರ್‌ ಜಿಲ್ಲೆಗಳಿಗೆ ಮಾತ್ರವೇ ಅನ್ವಯವಾಗಲಿದೆ ಎಂದಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಎಮ್ಮೆಗಳನ್ನು ಸಾಕುತ್ತಿದ್ದಾರೆ. ಎಮ್ಮೆಗಳ ಹಾಲು ಹೆಚ್ಚು ಆರೋಗ್ಯಕರ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಹಸು ಸಾಕಾಣಿಕೆಗೆ ಹೋಲಿಕೆ ಮಾಡಿದ್ರೆ ಎಮ್ಮೆಗಳ ಸಾಕಾಣಿಕೆ ಬಲು ದುಬಾರಿ. ಈ ಹಿನ್ನೆಲೆಯಲ್ಲಿ ರೈತರು ಹಾಲಿನ ದರ ಏರಿಕೆಗೆ ಪಟ್ಟು ಹಿಡಿದಿದ್ದರು. ಇದೀಗ ಎಮ್ಮೆಗಳ ಹಾಲಿನ ದರದಲ್ಲಿ ಏರಿಕೆ ಮಾಡಲಾಗಿದೆ.

ಎಮ್ಮೆ ಹಾಲು ಕುಡಿಯುವುದರಿಂದ ಆರೋಗ್ಯ ವೃದ್ದಿ :
ಎಮ್ಮೆ ಹಾಲು ಸೇವೆ ತೂಕ ಹೆಚ್ಚಿಸಲು ಸಹಕಾರಿಯಾಗಿದೆ. ಎಮ್ಮೆ ಹಾಲಿನ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲೋರಿಯಿದ್ದು, ಮೂಳಗೆಗಳನು ಗಟ್ಟಿಯಾಗಿಸಲು ಸಹಕಾರಿಯಾಗಿದೆ. ಅಲ್ಲದೇ ಹಾಲು ಕುಡಿಯುವುದರಿಂದ ಅಸ್ಟಿಯೋಪೊರೋಸಿಸ್‌ ಮತ್ತು ಸಂಧಿವಾತ ತಡೆಯಲು ಸಹಾಯಕವಾಗಲಿದೆ. ದೇಹದಲ್ಲಿನ ಪ್ರೋಟೀನ್‌ ಕೊರತೆಯನ್ನು ನೀಗಿಸಲು ಎಮ್ಮೆ ಹಾಲು ಸೇವನೆ ಮಾಡುವುದು ಹೆಚ್ಚು ಪ್ರಯೋಜನಕಾರಿ. ಎಮ್ಮೆ ಹಾಲಿನಲ್ಲಿ ಪ್ರೋಟೀನ್‌ ಹೆಚ್ಚು ಪ್ರಮಾಣದಲ್ಲಿದ್ದು ಸ್ನಾಯುಗಳನ್ನು ಬಲ ಪಡಿಸಲು ಕೂಡ ಸಹಕಾರಿಯಾಗಿದೆ.

ಇದನ್ನೂ ಓದಿ : LIC Helpdesks : ಪಶ್ಚಿಮ ಬಂಗಾಳದ ರೈಲು ನಿಲ್ದಾಣಗಳಲ್ಲಿ ಸಹಾಯವಾಣಿ ತೆರೆದ ಎಲ್‌ಐಸಿ

ಅಷ್ಟೇ ಅಲ್ಲಾ ಹೃದಯದ ಆರೋಗ್ಯವನ್ನು ವೃದ್ದಿಸಿಕೊಳ್ಳಲು ಎಮ್ಮೆಯ ಹಾಲು ಹೆಚ್ಚು ಪ್ರಯೋಜನಕಾರಿಯಾಗಿದೆ. ಎಮ್ಮೆ ಹಾಲಿನಲ್ಲಿ ಕಡಿಮೆ ಕೊಲೆಸ್ಟ್ರಾಲ್‌ ಮಟ್ಟ ಇರುವುದರಿಂದ ಹೃದಯದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ. ಎಮ್ಮೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್‌, ವಿಟಮಿನ್‌ ಎ, ಪೊಟ್ಯಾಸಿಯಂ ಮತ್ತು ರಂಜಕ, ಮೆಗ್ನೇಸಿಯಂ, ಸತು ಹಾಗೂ ಉತ್ಕರ್ಷಣ ನಿರೋಧಕಗಳು ಸಮೃದ್ದವಾಗಿದೆ.

Buffalo milk price hike: Rs 9.25 per litre. increase

Comments are closed.