Liquor Price hike : ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ : ಇಂದಿನಿಂದ ಮದ್ಯದ ಬೆಲೆ ಶೇ. 20ರಷ್ಟು ಏರಿಕೆ

ಬೆಂಗಳೂರು : ರಾಜ್ಯದಾದ್ಯಂತ ಮದ್ಯ ಪ್ರಿಯರಿಗೆ ಶಾಕಿಂಗ್‌ (Liquor Price hike) ಸುದ್ದಿಯೊಂದು ಕಾದಿದೆ. ಇತ್ತೀಚೆಗೆ ರಾಜ್ಯ ಕಾಂಗ್ರೆಸ್‌ ಸರಕಾರದ ಬಜೆಟ್‌ ಮಂಡನೆಯಿಂದ ಮದ್ಯಪ್ರಿಯರಿಗೆ ಶಾಕ್‌ ಕೊಟ್ಟಂತೆ ಆಗಿದೆ. ಇದೀಗ ರಾಜ್ಯ ಸರಕಾರ ಅಬಕಾರಿ ಸುಂಕವನ್ನು ಏರಿಕೆ ಮಾಡಿರುವ ಹಿನ್ನಲೆಯಲ್ಲಿ ಶೇ. 20ರಷ್ಟು ಹೆಚ್ಚಿನ ದರದೊಂದಿಗೆ ಹೊಸ ಬೆಲೆಯಲ್ಲಿ ಶುಕ್ರವಾರದಿಂದ ಮದ್ಯ ಮಾರಾಟವಾಗಲಿದೆ.

ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಂತೆ ಮದ್ಯದ ಅಬಕಾರಿ ಸುಂಕವನ್ನು ಏರಿಕೆ ಮಾಡಲಾಗಿದೆ. ಸರಕಾರ ಈಗಾಗಲೇ ಜಾರಿಗೆ ತಂದಿರುವ ಶಕ್ತಿ ಯೋಜನೆಗಳು ಹಾಗೂ ಮುಂದಿನ ದಿನಗಳಲ್ಲಿ ಯೋಜನೆಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ ದೃಷ್ಟಿಯಿಂದ ಮದ್ಯದ ಬೆಲೆಯನ್ನು ಹೆಚ್ಚಿಸಲಾಗಿದೆ.

ಸದ್ಯ ಈ ನಿಯಮವು ಗುರುವಾರ ಮದಯರಾತ್ರಿಯಿಂದ ಜಾರಿಗೆ ಬಂದಿರುತ್ತದೆ. ಸರಕಾರ ಬಜೆಟ್‌ನಲ್ಲಿ ಬಾಂದ್ರಿ, ವಿಸ್ಕಿ, ಜಿನ್‌, ರಮ್‌ ಮತ್ತು ಅಂತಹ ಇತರ ಮದ್ಯಗಳ ಸುಂಕವನ್ನು ಶೇ. 20ರಷ್ಟು ಏರಿಕೆ ಹಾಗೂ ಬಿಯರ್‌ ಮೇಲಿನ ಅಬಕಾರಿ ಸುಂಕವನ್ನು ಶೇ. 10ರಷ್ಟು ಏರಿಕೆ ಮಾಡುವಂತೆ ಸೂಚಿಸಲಾಗಿದೆ. ಹೀಗಾಗಿ ಈ ಹಿಂದಿನ ದರಕ್ಕೆ ಹೋಲಿಸಿದಾಗ ಶೇ. 10ರಷ್ಟು ಬಿಯರ್‌ ದರ ಹೆಚ್ಚಳವಾಗಲಿದೆ.

ಇದನ್ನೂ ಓದಿ : Heavy Rainfall in Karnataka : ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ 13 ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಇದನ್ನೂ ಓದಿ : B. S. Yediyurappa : ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಕೃಷಿ ವಿವಿ ವತಿಯಿಂದ ಗೌರವ ಡಾಕ್ಟರೇಟ್‌ ಪ್ರಧಾನ

ಪ್ರತಿ ರಟ್ಟಿನ ಪೆಟ್ಟಿಗೆಯ ಬೆಲೆ 450 ರೂಪಾಯಿ ತನಕ ಇದ್ದರೆ ಅದರ ಅಬಕಾರಿ ಸುಂಕ 215 ರೂಪಾಯಿ ಆಗಲಿದೆ. ಇದೇ ರೀತಿ, 450ರಿಂದ 499 ರೂಪಾಯಿ ತನಕದ ಮೌಲ್ಯದ ಪೆಟ್ಟಿಗೆ ಮೇಲಿನ ಅಬಕಾರಿ ಸುಂಕ 294 ರೂಪಾಯಿ ಆಗಲಿದೆ. ಅದೇ ರೀತಿ 500 ರೂಪಾಯಿಯಿಂದ 549 ರೂಪಾಯಿ ತನಕದ ಪೆಟ್ಟಿಗೆಯ ಸುಂಕ 386 ರೂಪಾಯಿ ಆಗಲಿದೆ. ಈ ರೀತಿ, 18 ಸ್ತರದಲ್ಲಿ ಅಬಕಾರಿ ಸುಂಕ ಹೆಚ್ಚಳವಾಗಿದೆ. ಇದರಲ್ಲಿ ಬ್ರಾಂದಿ, ವಿಸ್ಕಿ, ಜಿನ್‌, ರಮ್‌ ಮತ್ತು ಅಂಥ ಇತರ ಮದ್ಯಗಳು ಮಾತ್ರ ಒಳಗೊಂಡಿವೆ. ಆದರೆ, ಬಿಯರ್‌, ವೈನ್‌, ಸೇಂದಿ ಮತ್ತು ಪೆನ್ನಿಗಳು ಈ ವ್ಯಾಪ್ತಿಗೆ ಬರುವುದಿಲ್ಲ.

Liquor Price Hike: Shocking News for Liquor Lovers: Liquor price hike from today. 20 percent increase

Comments are closed.