ಬೆಂಗಳೂರು : ಒಂದೆಡೆ ಬೆಲೆ ಏರಿಕೆ ಸಂಕಷ್ಟವಾದರೇ, ಇನ್ನೊಂದೆಡೆ ಮದ್ಯ ಪ್ರಿಯರಿಗೆ ಇಂದಿನಿಂದ ಎಣ್ಣೆ ಸಿಗೋದೇ ಡೌಟ್ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದ ಬಹುತೇಕ ಎಣ್ಣೆ ಅಂಗಡಿಯಲ್ಲಿ ನಿನ್ನೆಯೇ ಸ್ಟಾಕ್ ಖಾಲಿಯಾಗಿದ್ದು ಬಿಲ್ಲಿಂಗ್ ಸಾಫ್ಟವೇರ್ ಸಮಸ್ಯೆಯಿಂದ ಮದ್ಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಸಮಸ್ಯೆ ವಿರುದ್ಧ ಮದ್ಯದಂಗಡಿಯ ಮಾಲೀಕರು ಸಿಡಿದೆದ್ದಿದ್ದು (Bar Close ) ವಿವಿಧೆಡೆ ಪ್ರತಿಭಟನೆಗೆ ಮುಂದಾಗಿದ್ದಾರೆ.
KSBCL ಬಿಲ್ಲಿಂಗ್ ಗಾಗಿ ಹೊಸ ಸ್ವಾಪ್ಟವೇರ್ ಸಿದ್ಧಪಡಿಸಲಾಗಿದ್ದು ಇದರಿಂದಾಗಿ ತುರ್ತಾಗಿ ಬಿಲ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮದ್ಯ ಪೊರೈಕೆ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ವ್ಯವಸ್ಥೆ ವಿರುದ್ದ ಮದ್ಯದಂಗಡಿ ಮಾಲೀಕರು ಸಿಡಿದೆದ್ದಿದ್ದಾರೆ. ಕಳೆದ ಮೂರು ದಿನಗಳಿಂದ ಬಿಲ್ ಸಮಸ್ಯೆಯಾಗಿರೋದರಿಂದ ಕರ್ನಾಟಕದ ಬಹುತೇಕ ಮದ್ಯದಂಗಡಿಗಳಲ್ಲಿ ನಿನ್ನೆಯೇ ಎಣ್ಣೆ ಖಾಲಿಯಾಗಿದೆ. ಹೊಸ ಸಾಫ್ಟ್‌ವೇರ್ ಆಪ್ ಡೇಟ್ ನಿಂದಾಗಿ ಮದ್ಯ ಸರಬರಾಜಿನಲ್ಲಿ ಭಾರಿ ವ್ಯತ್ಯಯ
ಈ ಹಿನ್ನೆಲೆ ಇಂದು ರಾಜ್ಯಾದ್ಯಂತ ಸನ್ನದುದಾರರು ಕೆಎಸ್ಬಿಸಿಎಲ್ ಡಿಪೋಗಳ ಎದುರು ಧರಣಿ. ಬೆಂಗಳೂರಿನ ಶಾಂತಿ ನಗರದಲ್ಲಿರುವ ಕೆಎಸ್ಬಿಸಿಎಲ್ ಮುಖ್ಯ ಕಚೇರಿ ಮುಖ್ಯ ಮುಂದೆ ಜಮಾಯಿಸಲಿರುವ ಎಣ್ಣೆ ಅಂಗಡಿ ಮಾಲೀಕರು ಹೊಸ ಸಾಫ್ಟ್‌ವೇರ್ ಆಪಡೇಟ್ ನಿಂದ ಹೀಗೆ ಅವ್ಯವಸ್ಥೆಯಾಗಿದೆ .ಹೊಸ ಸಾಫ್ಟ್‌ವೇರ್ ಆಪಡೇಟ್ ನಿಂದ ಸನ್ನದುದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯಕ್ಕೆ ಇನ್ನು ಒಂದು ತಿಂಗಳ ಕಾಲ ಹಳೆ ಪದ್ದತಿಯೊಂದಿಗೆ ಮದ್ಯ ಪೂರೈಕೆ ಮಾಡುವಂತೆ ಮದ್ಯದಂಗಡಿ ಮಾಲೀಕರು ಆಗ್ರಹಿಸುತ್ತಿದ್ದಾರೆ.
ಈ ಅವ್ಯವಸ್ಥೆ ಹಾಗೂ ಮದ್ಯ ಪೊರೈಕೆ ಅವಾಂತರ ಖಂಡಿಸಿ ರಾಜ್ಯದ ಎಲ್ಲಾ KSBCL ಡಿಪೋಗಳ ಮುಂದೆ ಬೃಹತ್ ಧರಣಿ ನಡೆಸಲು ಮದ್ಯ ಮಾರಾಟಗಾರರು ನಿರ್ಧಾರಿಸಿದ್ದಾರೆ. ನಿನ್ನೆಯೇ ಕೊಪ್ಪಳ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್ಬಿಸಿಎಲ್ ಮುಂದೇ ಮದ್ಯ ಮಾರಾಟಗಾರರು ಪ್ರತಿಭಟನೆ ಆರಂಭಿಸಿದ್ದಾರೆ. ಈಗ ಜನಜೀವನ ಸಹಜಸ್ಥಿತಿಗೆ ಮರಳುತ್ತಿದೆ. ವ್ಯಾಪಾರ ಸುಧಾರಿಸುತ್ತಿದೆ.
ಮದುವೆ ಹಬ್ಬಗಳ ಸೀಸನ್ ನಲ್ಲಿ ಮದ್ಯಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಇಂಥ ಹೊತ್ತಿನಲ್ಲೇ ಸಾಫ್ಟವೇರ್ ಅಪ್ಡೇಟ್ ಕಾರಣಕ್ಕೆ ಮದ್ಯ ಪೊರೈಕೆಮಾಡದೇ ಇರೋದರಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ಕರ್ನಾಟಕ ರಾಜ್ಯ ಪಾನಿಯ ನಿಗಮದಿಂದ ರಾಜ್ಯದ ಎಲ್ಲೆಡೆಗೂ ಮದ್ಯ ಸರಬರಾಜುಗೊಳ್ಳುತ್ತದೆ. ಆದ್ರೆ ಎರಡು ದಿನದಿಂದ CL-9 CL-2 CL-11C ಹಾಗೂ ಎಂಎಸ್ಐಎಲ್ ಗಳಿಗೆ ಸಫ್ಲೈ ಆಗದೆ ಮದ್ಯ ಮಾರಾಟಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಇದನ್ನೂ ಓದಿ : ಮದ್ಯ ಪ್ರಿಯರಿಗೆ ಶಾಕಿಂಗ್ ಸುದ್ದಿ: ಸದ್ಯದಲ್ಲೇ ಪರಿಷ್ಕರಣೆಯಾಗಲಿದೆ ಬಿಯರ್ ದರ
ಇದನ್ನೂ ಓದಿ : ಪೇಪರ್ ಲೆಸ್ ಪಾಸ್ : ಬಿಎಂಟಿಸಿಯಲ್ಲಿ ಮೊಬೈಲ್ ತೋರಿಸಿ ಪ್ರಯಾಣಿಸಿ
Liquor Shortage, Owners Decided Bar Close in Karnataka