Sandalwood Actor Yash: ಆರ್ ಆರ್ ಆರ್ ಸಿನಿಮಾದ ಯಶಸ್ಸು ಪ್ರಷರ್ ಅಲ್ಲ, ನಮ್ಮೆಲ್ಲರ ಪ್ಲಷರ್ ಎಂದ ನಟ ಯಶ್

ನಿರ್ದೇಶಕ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿದೆ. ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿರುವುದಂತು ಸತ್ಯ. ಹೀಗಾಗಿ, ಮುಂಬರುವ Sandalwood Actor Yashಬಿಗ್ ಬಜೆಟ್ ಸಿನಿಮಾಗಳು ಕೂಡ ಇದೇ ಮಾರ್ಗದಲ್ಲಿ ನಡೆಯುತ್ತವೆಯೇ ಅಥವಾ ಅಭಿಮಾನಿಗಳ ನಿರೀಕ್ಷೆ ಕೂಡ ಆ ಮಟ್ಟಕ್ಕೆ ಇರಲಿದೆಯೇ- ಇಂಥದ್ದೊಂದು ಪ್ರಶ್ನೆ ಮುಂಬಯಿ ಕೆಜಿಎಫ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಯಶ್ (Sandalwood Actor Yash) ಮುಂದೆ ಬಂತು. ಅದಕ್ಕೆ ಅವರ ಬಹಳ ನಯವಾಗಿ ಉತ್ತರಿಸಿದರು.

ಇದನ್ನೂ ಓದಿ : Aamir Khan : ಕಳೆದ ವರ್ಷ ಚಿತ್ರರಂಗ ತೊರೆಯುವ ತೀರ್ಮಾನ ಮಾಡಿದ್ದೆ! ಮನದಾಳದ ಮಾತು ಬಿಚ್ಚಿಟ್ಟ ಬಾಲಿವುಡ್‌ ನಟ ಅಮೀರ್‌ ಖಾನ್‌

‘ಆರ್ ಆರ್ ಆರ್ ಸಿನಿಮಾ ರೆಕಾರ್ಡ್ ಮಾಡಿದೆ. ಟ್ರೆಂಡ್ ಸೃಷ್ಟಿ ಮಾಡಿದೆ. ನನ್ನ ಪ್ರಕಾರ ಇವೆಲ್ಲವೂ ಕೆಜಿಎಫ್ ಚಾಪ್ಟರ್ -2 ಸಿನಿಮಾಗೆ ಪ್ರಷರ್ ಅಲ್ಲ. ಪ್ಲಷರ್ ಅಂತಲೇ ತಿಳಿದುಕೊಂಡಿದ್ದೀನಿ. ನಮ್ಮ ಸಿನಿಮಾ ಜಾಸ್ತಿ ಜನಕ್ಕೆ ಇಷ್ಟ ಆಗಬೇಕು ಅನ್ನೋ ನಿರೀಕ್ಷೆ ನಮ್ಮದು. ನಾನು ನಂಬಿರೋದು ಸಿನಿಮಾ ಬಿಡುಗಡೆಯಾಗಿ, ಚೆನ್ನಾಗಿದ್ದರೆ, ಜನರ ಬಾಯಿಂದ ಬಾಯಿಗೇ ತಲುಪಿ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಸಿಗುತ್ತದೆ ಅಂತ. ಚೆನ್ನಾಗಿದ್ದರೆ ಅದೇ ರೆಕಾರ್ಡ್ ಆಗುತ್ತದೆ. ಇವೆಲ್ಲ ಪ್ರೇಕ್ಷಕರಿಗೆ ಬಿಟ್ಟ ವಿಚಾರ’ ಎಂದು ಉತ್ತರ ಕೊಟ್ಟಿದ್ದಾರೆ ಯಶ್.

ಹಾಗಂತ ಕೆ.ಜಿಎಫ್ ವಿಚಾರವಾಗಿ ನಿರೀಕ್ಷೆಗಳಿಲ್ಲ ಅಂತಲ್ಲ. ‘ರೆಕಾರ್ಡ್ ಗಳನ್ನು ಮಾಡಲೇಬೇಕು ಅಂತ ಸಿನಿಮಾ ಮಾಡೋಕ್ಕಿಂತ, ಅದ್ಬುತ ಸಿನಿಮಾ ಮಾಡಿ ಅದೇ ರೆಕಾರ್ಡ್ ಸೃಷ್ಟಿ ಮಾಡುವಹಾಗೇ ಮಾಡಬೇಕು ಅನ್ನೋದು ನನ್ನ ಉದ್ದೇಶ. ನಾವು ಅದನ್ನು ಮಾಡಿದ್ದೇವೆ. ಈಗ ಆರ್ ಆರ್ ಆರ್ ಸಿನಿಮಾ ಬೆಂಚ್ ಮಾರ್ಕ್ ಮಾಡಿದೆ. ಅದನ್ನು ಮೀರಿ ಇನ್ನು ಏನಾದರು ಪ್ರಯತ್ನ ಮಾಡಬೇಕು’ ಎಂದರು.

ಬಾಲಿವುಡ್ ನಿರ್ದೇಶಕರ ಜೊತೆ ಏನಾದರು ಟೈಅಪ್ ಆಗಬಹುದೇ ಅನ್ನೋದಕ್ಕೂ ಯಶ್ ಉತ್ತರಕೊಟ್ಟಿದ್ದು ಹೀಗೆ- ‘ನಾಯಕ ನಿರ್ದೇಶಕರ ಕೂಸು ಅಂತ ನಂಬಿದ್ದೇನೆ. ಆತನ ವಿಷನ್ ಮೂಲಕವೇ ಬೆಳಕಿಗೆ ಬರುವುದು. ಪ್ರಶಾಂತ್ ವಿಷನ್ ನಿಂದ ರಾಖಿ ಅನ್ನೋ ಪಾತ್ರ ಸೃಷ್ಟಿಯಾಯಿತು. ನಾನು ರಾಖೀಬಾಯ್ ಆದೆ. ನಾಯಕನನ್ನು ಪ್ರಸೆಂಟ್ ಮಾಡೋದು ನಿರ್ದೇಶಕ. ಹೀಗಿರುವಾಗ ಬಾಲಿವುಡ್ ನ ಒಳ್ಳೆ ನಿರ್ದೇಶಕರು ಜೊತೆ ಕೆಲಸ ಮಾಡೋ ಅವಕಾಶ ಸಿಕ್ಕರೆ ನನಗಂತೂ ಆಸಕ್ತಿ ಇದೆ’ ಬಾಲಿವುಡ್ ನಲ್ಲಿ ಸಿನಿಮಾದಲ್ಲಿ ತೊಡಗಿಕೊಳ್ಳುವ ಆಸಕ್ತಿ ತೋರಿದರು.

ಇದನ್ನೂ ಓದಿ : Amitabh Bachchan : ಶುರುವಾಗ್ತಿದೆ ಬಿಗ್ ಬಿ ಅಭಿಮಾನಿಗಳಿಗೆ ದರ್ಶನ ಭಾಗ್ಯ!

(Sandalwood Actor Yash Said Why dont I work with Bollywood Directors)

Comments are closed.