ಯುವ ಜೋಡಿಯ ಲಿವಿಂಗ್ ಟು ಗೆದರ್ ಹುಚ್ಚಾಟ‌ : ತಂದೆ, ತಾಯಿಯಿದ್ದರೂ ಅನಾಥವಾಯ್ತು ಹಸುಗೂಸು

ಮೈಸೂರು : ಇತ್ತೀಚಿನ ವರ್ಷಗಳಲ್ಲಿ ಲಿವಿಂಗ್ ಟು‌ ಗೆದರ್ ಅನ್ನೋದು ಫ್ಯಾಷನ್ ಆಗಿ ಬಿಟ್ಟಿದೆ. ಆದರೆ ಯುವ ದಂಪತಿಗಳ ಹುಚ್ಷಾಟಕ್ಕೆ ತಂದೆ ತಾಯಿಯಿದ್ದರೂ ಹಸುಗೂಸು ಅನಾಥವಾಗಿದೆ.

21 ವರ್ಷದ ಯುವ ಜೋಡಿ ಕಾಲೇಜು ಓದುತ್ತಿದ್ದಾಗಲೇ ಪರಿಚಯ ವಾಗಿತ್ತು. ಕಾಲೇಜು ಮುಗಿದ ಬಳಿಕ ಇಬ್ಬರೂ ಕೆಲಸ ಮಾಡಿಕೊಂಡು ಲಿವಿಂಗ್ ಟು ಗೆದರ್ ನಲ್ಲಿದ್ದರು. ತಾವು ದಂಪತಿಗಳು ಎಂದು ಹೇಳಿ ಮೈಸೂರಿನ ಸರಸ್ವತಿಪುರಂ ನಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ವಾಸವಾಗಿದ್ದರು. ಇಬ್ಬರೂ ದಂಪತಿಗಳಂತೆಯೇ ವಾಸವಾಗಿದ್ದರು.

ಲಿವಿಂಗ್‌ ಟು ಗೆದರ್‌’ ನಲ್ಲಿದ್ದ ಇಬ್ಬರನ್ನೂ ಗಂಡ ಹೆಂಡತಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಯುವತಿ ಕೆಲ ತಿಂಗಳಿನಲ್ಲಿ ಗರ್ಭಿಣಿ ಯಾಗಿದ್ದಳು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗುವಿನ ಪಾಲನೆ ಮಾಡಲು ಮಾತ್ರ ಇಬ್ಬರೂ ಸಿದ್ಸರಿರಲಿಲ್ಲ. ಮಗುವನ್ನು ದತ್ತು ನೀಡುವ ಸಲುವಾಗಿ ಹುಡುಕಾಟ ಆರಂಭಿಸಿದ್ದರು. ಸರಸ್ವತೀಪುರಂ ನಿವಾಸಿ ಯೋರ್ವರು ಮಗುವನ್ನು ದತ್ತು ಪಡೆಯಲು ಮುಂದಾದ್ರು ಆದರೆ ಕಾನೂನಿನ ಭಯಕ್ಕೆ ಹೆದರಿ ಹಿಂಡೇಟು ಹಾಕಿದ್ದಾರೆ.

ಇನ್ನೊಂದೆಡೆ ಇಬ್ಬರೂ ಲಿವಿಂಗ್ ಟು ಗೆದರ್ ನಲ್ಲಿ ಇರುವ ವಿಚಾರ ಮನೆಯವರಿಗೂ ಗೊತ್ತೆ ಇರಲಿಲ್ಲ . ಇಬ್ಬರ ಮನೆಯಲ್ಲಿ‌ ಮದುವೆ ಪ್ರಸ್ತಾಪ ಮಾಡಿದಾಗಲೂ ಒಂದಲ್ಲ ಒಂದು ಕಾರಣ‌ ನೀಡಿ ಮುಂದೂ ಡುತ್ತಲೇ ಬಂದಿದ್ದಾರೆ. ಇಬ್ಬರ ಹುಚ್ಚಾಟ ಗಮನಿಸಿದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ವೇಳೆಯಲ್ಲಿ ಇಬ್ಬರ ಗುಟ್ಟು ರಟ್ಟಾಗಿದೆ. ಪೊಲೀಸರು ದಂಪತಿಗಳ ಬಳಿ ಮಗುವಿನ ಪಾಲನೆ ಮಾಡಲು ವಿನಂತಿಸಿದ್ದಾರೆ. ಆದರೆ ಇಬ್ಬರೂ ಒಪ್ಪಿಗೆ ಸೂಚಿಸಲಿಲ್ಲ.

ಕೊನೆಗೆ ಇಬ್ಬರ ಪೋಷಕರನ್ನು ಕರೆಸಿ ಮನವೊಲಿಸಲು  ಪ್ರಯತ್ನ ಮಾಡಿದ್ರೂ ಪೊಲೀಸರ ಯಾವುದೇ ಪ್ರಯೋಜನ ಆಗಲಿಲ್ಲ. ಕೊನೆಗೆ ಮಗುವನ್ನು ದತ್ತು ನೀಡುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾರೆ. ನಂತರ ಜಿಲ್ಲಾ ಮಕ್ಕಳ ಕಲ್ಯಾಣ‌ ಸಮಿತಿಯವರು ಕೂಡ ಇಬ್ಬರನ್ನು ಕೌನ್ಸಿಲಿಂಗ್ ಗೆ ಒಳಪಡಿಸಿದ್ರೂ ಇಬ್ಬರೂ ಮಗುವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ಹೀಗಾಗಿ ಇಬ್ಬರು ತಮ್ಮ  ತಮ್ಮ ನಿರ್ಧಾರ ತಿಳಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಯಿತು. ಕೊನೆಗೆ ಮಗುವನ್ನು ಸಂಸ್ಥೆ ಯೊಂದಕ್ಕೆ ನೀಡಲಾಗಿದ್ದು, ಪಾಲನೆ ಮಾಡಲಾಗುತ್ತಿದೆ. ಯುವ ಜನತೆ ಯ ಲಿವಿಂಗ್ ಟು ಗೆದರ್ ಹುಚ್ಚಾಟಕ್ಕೆ ಮಗು ತಂದೆ ತಾಯಿ ಇದ್ದರೂ ಅನಾಥವಾಗಿಧೆ.

Comments are closed.