Kusuma Hanumantarayappa : ಕಳೆದ ಲೋಕಸಭಾ ಚುನಾವಣೆ (Lok Sabha Election 2024) ಯಲ್ಲಿ ಕಾಂಗ್ರೆಸ್ ನ ಘನತೆ ಕಾಪಾಡಲು ಒಂದೇ ಒಂದು ಸೀಟು ಗೆದ್ದ ಸಂಸದ ರಾದವರು ಡಿ.ಕೆ.. ಈ ಭಾರಿಯೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆಲ್ಲುವ ನೀರಿಕ್ಷೆಯಲ್ಲಿದ್ದಾರೆ. ಗೆಲುವಿನ ನೀರಿಕ್ಷೆಯಲ್ಲಿರೋ ಡಿ.ಕೆ.ಸುರೇಶ್ (DK Suresh) ಬಣದಲ್ಲಿ ದೊಡ್ಡ ಶಕ್ತಿಯಂತೆ ನಿಂತಿರೋ ಒಂದು ಹೆಸರು ರಾಜಕೀಯ. ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅದು ಮತ್ಯಾರು ಅಲ್ಲ ಕುಸುಮಾ ಹನುಮಂತರಾಯಪ್ಪ (kusuma hanumantharayappa)

ಡಿ.ಕೆ.ಸುರೇಶ್ ಬಣದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಅತ್ಯಂತ ಚಟುವಟಿಕೆಯಿಂದ ಪಕ್ಷ ಸಂಘಟನೆ ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಕುಸುಮಾ ಹನುಮಂತರಾಯಪ್ಪ ಕಳೆದ ಭಾರಿ ವಿಧಾನಸವಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮುನಿ ರತ್ನ ಗೆ ಟಕ್ಕರ್ ಕೊಟ್ಟು ಸೋತಿದ್ದರು. ಕಾಂಗ್ರೆಸ್ ನಲ್ಲಿ ಪ್ರಬುದ್ಧಮಾನಕ್ಕೆ ಬರ್ತಿರೋ ಈ ಹೆಣ್ಣುಮಗಳ ಸಾಧನೆಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಇವರ ಹಿನ್ನೆಲೆ ಬಗ್ಗೆ ತಿಳಿದುಕೊಳ್ಳಬೇಕು.
ಕುಸುಮಾ ಹನುಮಂತರಾಯಪ್ಪ ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕಿಯಾಗಿ, ಕಾರ್ಯಕರ್ತೆಯಾಗಿ ಕಣಕ್ಕಿಳಿಯುವ ಮುನ್ನ ಐಎಎಸ್ ಅಧಿಕಾರಿಯೊಬ್ಬರ ಪತ್ನಿಯಾಗಿದ್ದರು. ಹೌದು, ಈ ನಾಡು ಕಂಡ ಪ್ರಬುದ್ಧ ಹಾಗೂ ದಕ್ಷ ಐ ಎಎಸ್ ಅಧಿಕಾರಿ ಡಿ.ಕೆ.ರವಿ ಪತ್ನಿ ಈ ಕುಸುಮಾ ರವಿ. ಡಿ.ಕೆ.ರವಿ ಯವರನ್ನು ಮದುವೆಯಾಗಿ ಸಂಸಾರ ನಡೆಸಿದ್ದರು.
ಇದನ್ನೂ ಓದಿ : ರಾಜಕೀಯಕ್ಕೆ ನಟ ಸುದೀಪ್ ಎಂಟ್ರಿ : ಕಿಚ್ಚ ಈ ಬಗ್ಗೆ ಹೇಳಿದ್ದೇನು ?
ಡಿ.ಕೆ.ರವಿಯವರು ಆತ್ಮಹತ್ಯೆಗೆ ಶರಣಾದ ಬಳಿಕ ಕುಸುಮಾ ಹನುಮಂತರಾಯಪ್ಪ ಡಿ.ಕೆ.ರವಿ ಕುಟುಂಬಸ್ಥರಿಂದ ಹಲವು ಆರೋಪ ಸಹ ಎದುರಿಸಿದ್ದರು. ಡಿ.ಕೆ.ರವಿ ಸಾವಿನ ಸಂದರ್ಭದಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೇ, ಯಾರ ಮೇಲೂ ಏನು ಆರೋಪ ಮಾಡದೇ ತಮ್ಮ ಮೌನದಲ್ಲೇ ಎಲ್ಲವನ್ನು ಸ್ವೀಕರಿಸಿದ ಕುಸುಮಾ ಹನುಮಂತರಾಯಪ್ಪ ಆ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು.

ಪತಿಯ ಸಾವಿನ ದುಃಖ ಮರೆಯುವುದಕ್ಕಾಗಿ ವಿದೇಶಕ್ಕೆ ತೆರಳಿದ ಕುಸುಮಾ ಹನುಮಂತರಾಯಪ್ಪ 2018 ರಲ್ಲಿ ಮ್ಯಾಸಚೂಸೆಟ್ಸ್ ಬೋಸ್ಟನ್ ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಎಂಎಸ್ ಪದವಿ ಪಡೆದು ಭಾರತಕ್ಕೆ ಮರಳಿದ್ದಾರೆ. ದಯಾನಂದ ಸಾಗರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಕುಸುಮಾ ಕೊರೋನಾ ಬಳಿಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿಕೊಟ್ಟರು. ಹಾಗೇ ನೋಡಿದ್ರೇ ಕುಸುಮಾ ಗೆ ರಾಜಕೀಯ ನಂಟು ಹೊಸದಲ್ಲ.
ಇದನ್ನೂ ಓದಿ : ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆ ರದ್ದು ! ಏನಿದು ಲೋಕಸಭಾ ಚುನಾವಣಾ ಲೆಕ್ಕಾಚಾರ
ಕುಸುಮಾ ತಂದೆ ಹನುಮಂತರಾಯಪ್ಪ ಹಲವು ವರ್ಷಗಳಿಂದ ಜೆಡಿಎಸ್ ನಲ್ಲಿದ್ದರು. ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡು ನಿಗಮ ಮಂಡಳಿ ಅಧ್ಯಕ್ಷ ರಾಗಿಯೂ ಕೆಲಸ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದ ಕುಸುಮಾ ಡಿ.ಕೆ.ಸುರೇಶ್ ನೆರವಿನಿಂದ ಮುನಿ ರತ್ನ ಗೆ ಸರಿ ಸಮಾನವಾದ ಮತಗಳನ್ನು ಪಡೆದು ಮುನಿರತ್ನ ಎದೆಯಲ್ಲಿ ನಡುಕಮೂಡಿಸಿದ್ದರು.
ಕೊನೆಯ ಕ್ಷಣದಲ್ಲಿ ಕಷ್ಟದಲ್ಲಿ ಮುನಿ ರತ್ನ ಗೆದ್ದಿದ್ದು ಈಗ ಇತಿಹಾಸ. ವಿಧಾನಸಭಾ ಚುನಾವಣೆಯಲ್ಲಿ ಮನೆ ಮನೆಗೆ ತೆರಳಿದ್ದ ಕುಸುಮಾ ಕಾಂಗ್ರೆಸ್ ನ ಸಾಧನೆಗಳ ಬಗ್ಗೆ ಪ್ರಚಾರ ನಡೆಸಿದ್ದರು. ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಡದ ಕುಸುಮಾ ಈಗ ಡಿ.ಕೆ.ಸುರೇಶ್ ಗೆಲುವಿಗಾಗಿ ಪಣತೊಟ್ಟು ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ : ಪಾರಿವಾಳಕ್ಕೆ ಕಾಳು ಹಾಕೋಕೇ ಮುನ್ನ ಎಚ್ಚರ: ನಿಮಗೆ ಬೀಳುತ್ತೆ ಭಾರಿ ದಂಡ
ಆರ್.ಆರ್. ನಗರ ವ್ಯಾಪ್ತಿಯ ಕಾಂಗ್ರೆಸ್ ನ ಚಿಕ್ಕ ಪುಟ್ಟ ಕಾರ್ಯಕ್ರಮದಿಂದ ಆರಂಭಿಸಿ ಡಿ.ಕೆ.ಶಿವಕುಮಾರ್ ಮನೆಯಲ್ಲಿ ನಡೆದ ಔತಣಕೂಟದವರೆಗೆ ಎಲ್ಲಾ ಹೊತ್ತಿನಲ್ಲೂ ಕುಸುಮಾ ಕಾಣಸಿಗುತ್ತಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಗ್ಯಾರಂಟಿಗಳ ಅನುಷ್ಠಾನದಿಂದ ಆರಂಭವಾಗಿ ಎಲ್ಲ ಕೆಲಸದಲ್ಲೂ ಪಕ್ಷವನ್ನು ಸಮರ್ಥ ವಾಗಿ ಪ್ರತಿನಿಧಿಸುವ ಕುಸುಮಾ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ದಾರೆ.

ಐಎಎಸ್ ಅಧಿಕಾರಿಯ ಪತ್ನಿಯಾಗಿದ್ದ ಕುಸುಮಾ ಈ ಟೀಕೆಗಳಾಚೆಗೆ ಕಾಂಗ್ರೆಸ್ ನಲ್ಲಿ ಭವಿಷ್ಯ ಅರಸುತ್ತಿದ್ದಾರೆ. ಡಿ.ಕೆ.ಸುರೇಶ್ ಗೆದ್ದರೇ ಅವರ ಗೆಲುವಿನಲ್ಲಿ ದೊಡ್ಡ ಪಾಲು ಕುಸುಮಾದ್ದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರ್ತಿದೆ.
Kusuma Hanumantarayappa bet on DK Suresh victory : Who ? Do you know the background ?