ಭಾನುವಾರ, ಏಪ್ರಿಲ್ 27, 2025
Homekarnatakaಸುನಿಲ್‌ ಕನುಗೋಳ್ ಸಮೀಕ್ಷೆಯಲ್ಲಿ ಪಾಸಾದ್ರೆ ಟಿಕೇಟ್: ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೈಕಮಾಂಡ್ ಶಾಕ್

ಸುನಿಲ್‌ ಕನುಗೋಳ್ ಸಮೀಕ್ಷೆಯಲ್ಲಿ ಪಾಸಾದ್ರೆ ಟಿಕೇಟ್: ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹೈಕಮಾಂಡ್ ಶಾಕ್

- Advertisement -

ಬೆಂಗಳೂರು : ರಾಜ್ಯದಲ್ಲಿ ಅಧಿಕಾರದಲ್ಲಿರೋ ಕಾಂಗ್ರೆಸ್ ( Congress Party) ಈ ಅಧಿಕಾರವನ್ನು ಮುಂದಿನ ಒಂದಷ್ಟು ವರ್ಷಗಳ ಕಾಲ‌ ತನ್ನ ‌ಬಳಿಯಲ್ಲೇ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಆರಂಭಿಸಿದೆ. ಈಗಾಗಲೇ ಐದು ಗ್ಯಾರಂಟಿಗಳ  (Congress Guarantee Scheme) ಮೂಲಕ ಜನರ ಮನಗೆದ್ದಿರುವ ಕಾಂಗ್ರೆಸ್ ಲೋಕಸಭಾ ಎಲೆಕ್ಷನ್ (Loka Sabha Election 2024) ಗೆ ಅಭ್ಯರ್ಥಿ ಆಯ್ಕೆಯಲ್ಲೂ ಅತ್ಯಂತ ಜಾಣ ನಡೆ ಪ್ರದರ್ಶಿಸುವ ಮೂಲಕ ಹೆಚ್ಚಿನ ಕ್ಷೇತ್ರ ಗೆಲ್ಲುವ ಲೆಕ್ಕಾಚಾರ ಆರಂಭಿಸಿದೆ.

ಹೌದು, 2019 ರಲ್ಲಿ ಬೆಂಗಳೂರಿನಲ್ಲಿ ಕೇವಲ ಒಂದು ಲೋಕಸಭಾ ಸ್ಥಾನ ಗೆದ್ದಿದ್ದ ಕಾಂಗ್ರೆಸ್ ತೀವ್ರ ಮುಜುಗರ ಎದುರಿಸಿತ್ತು.‌ ಕರ್ನಾಟಕ ದಾದ್ಯಂತ ಕೂಡ ಕಾಂಗ್ರೆಸ್ ಸಾಧನೆ ತೃಪ್ತಿಕರವಾಗಿರಲಿಲ್ಲ. ಹೀಗಾಗಿ 2024 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ವಿಶೇಷ ವ್ಯಕ್ತಿ ಒಬ್ಬರನ್ನು ಅಖಾಡಕ್ಕಿಳಿಸಿದೆ‌. ಕಾಂಗ್ರೆಸ್ ಗಾಗಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯನ್ನು ಸುನೀಲ್ ಕನುಗೋಳ್ (Sunil Kungol ) ನಡೆಸಲಿದ್ದಾರಂತೆ.

ಈಗಾಗಲೇ ಕಾಂಗ್ರೇಸ್‌ ಪರವಾಗಿ ಲೋಕಸಭಾ ಚುನಾವಣೆಯ ಕಣಕ್ಕಿಳಿಯುವ ಕಲಿಗಳ ಆಯ್ಕೆಯಲ್ಲಿ ತೊಡಗಿರುವ ಸುನಿಲ್ , 2019ರ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳ ವಿವರ ಕಲೆ ಹಾಕಿದ್ದಾರಂತೆ.ಅಭ್ಯರ್ಥಿಗಳು ಕ್ಷೇತ್ರದಲ್ಲಿ ಗಳಿಸಿರುವ ವರ್ಚಸ್ಸು, ಜನ ಸ್ಪಂದನೆ ಬಗ್ಗೆ ಸರ್ವೇ ಆರಂಭಿಸಿದ್ದಾರಂತೆ.

Lok Sabha Elections 2024 Karnataka Congress Depend Sunil Kanugol poll
Image Credit To Original Source

ಇದನ್ನೂ ಓದಿ : ಸೋಲಿನಲ್ಲೇ ಕೊನೆಯಾಯ್ತಾ ನಿಖಿಲ್‌ ಕುಮಾರಸ್ವಾಮಿ ರಾಜಕೀಯ ಭವಿಷ್ಯ : ಅಂತಿಮ ನಿರ್ಧಾರ ಪ್ರಕಟಿಸಿದ ಎಚ್‌ಡಿಕೆ

ಅಗತ್ಯವಿದ್ದಲ್ಲಿ ಅಭ್ಯರ್ಥಿಗಳ ಬದಲಾವಣೆ ಮಾಡೋದಾಗಿಯೂ ಸುನೀಲ್ ಸೂಚಿಸಿದ್ದಾರಂತೆ. ಬಿಜೆಪಿ ಅಭ್ಯರ್ಥಿಗಳಿಗೆ ಸರಿಸಾಟಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಇರಬೇಕು.ಸ್ಥಳೀಯವಾಗಿ ಜನ ಸಂಪರ್ಕ ಹೊಂದಿರಬೇಕು ಚುನಾವಣೆ ಸಲುವಾಗಿ ಆಕ್ಟೀವ್ ಆದವರಿಗೆ ಸಿಗಲ್ಲ ಕೈ ಟಿಕೆಟ್ ಎಂಬ ಮಾಹಿತಿ ಕಾಂಗ್ರೆಸ್ ವಲಯದಿಂದಲೇ ಲಭ್ಯವಾಗ್ತಿದೆ.

ಇನ್ನೂ ಕಾಂಗ್ರೆಸ್ ಹೈಕಮಾಂಡ್ ಕೂಡ ಸುನೀಲ್ ಕನುಗೋಳ್ ವರದಿ ಮೇಲೆ ವಿಶ್ವಾಸ ಹೊಂದಿದ್ದು ,ಕನಗೋಳ್ ಸಿದ್ದಪಡಿಸಿದ ವರದಿ ಪರಿಗಣಿಸಿ ಈ ಬಾರಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ರಾಜ್ಯ ಗೆದ್ದ ಮಾದರಿಯಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ಕನಗೋಳ್ ವರದಿ ರೆಡಿ ಮಾಡಿರುವ ಕನುಗೋಳ್, ಯಾರನ್ನು ನಿಲ್ಲಿಸಿದರೇ ಪಕ್ಷಕ್ಕೆ ಲಾಭವಾಗಲಿದೆ.

ಇದನ್ನೂ ಓದಿ : ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಬಿ ವೈ ವಿಜಯೇಂದ್ರ : ಪುತ್ರನ ಅಧಿಕಾರಕ್ಕಾಗಿ ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

ಯಾರ ಪರವಾಗಿ ಜನರ ಒಲವಿದೆ ಎಂಬ ಮಾಹಿತಿಗಾಗಿ ಈಗಾಗಲೇ ಗ್ರೌಂಡ್ ವರ್ಕ್ ಆರಂಭಿಸಿದ್ದು, ಇದು ಹಲವು ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿತರ ಅಸಮಧಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸುನೀಲ್ ಕನುಗೋಳ್ ವರದಿ ಆಧರಿಸಿ ಲೋಕಸಭಾ ಚುನಾವಣೆಯ ಟಿಕೇಟ್ ಹಂಚಿಕೆ ಮಾಡಲು ನಿರ್ಧರಿಸಿದ್ದಾರಂತೆ.

Lok Sabha Elections 2024 Karnataka Congress Depend Sunil Kanugol poll
Image Credit To Original Source

ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೇ ಸುನಿಲ್‌ ಕನುಗೋಳ್‌ ಅವರ ಸಮೀಕ್ಷೆಯೇ ಕಾಂಗ್ರೆಸ್‌ ಪಕ್ಷಕ್ಕೆ ಫಲಕೊಟ್ಟಿತ್ತು. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಸುನಿಲ್‌ ಕನುಗೋಳ್‌ ನೇತೃತ್ವದಲ್ಲಿ ಸಮೀಕ್ಷೆಯನ್ನು ನಡೆಸಿತ್ತು.

ಇದನ್ನೂ ಓದಿ : ಮತ್ತೆ ಸಕ್ಕರೆ ನಾಡು ಮಂಡ್ಯದಿಂದ ನಟಿ ರಮ್ಯಾ ಸ್ಪರ್ಧೆ : ಲೋಕಸಭೆ ಎಲೆಕ್ಷನ್ ಗೆ ಡಿಕೆ ಶಿವಕುಮಾರ್‌ ಮಾಸ್ಟರ್ ಪ್ಲ್ಯಾನ್

ಈ ಸಮೀಕ್ಷೆಯ ಆಧಾರದಲ್ಲಿಯೇ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಅಲ್ಲದೇ ಚುನಾವಣೆ ಗೆಲ್ಲಲು ಬೇಕಾದ ಪ್ರನಾಳಿಕೆಯನ್ನೂ ಸಿದ್ದ ಪಡಿಸಿತ್ತು. ಅದ್ರಲ್ಲೂ ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ವರದಾನವಾಗಿ ಪರಿಣಮಿಸಿತ್ತು. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.

Lok Sabha Elections 2024 Karnataka Congress Depend Sunil Kanugol poll

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular