ಮತ್ತೆ ಸಕ್ಕರೆ ನಾಡು ಮಂಡ್ಯದಿಂದ ನಟಿ ರಮ್ಯಾ ಸ್ಪರ್ಧೆ : ಲೋಕಸಭೆ ಎಲೆಕ್ಷನ್ ಗೆ ಡಿಕೆ ಶಿವಕುಮಾರ್‌ ಮಾಸ್ಟರ್ ಪ್ಲ್ಯಾನ್

ಲೋಕಸಭಾ ಚುನಾವಣೆಯಲ್ಲಿ (Lok Sabha Elections 2024) ಡಿಕೆ ಶಿವಕುಮಾರ್ (DK Shivakumar) ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದು, ರಾಜ್ಯದ ಪ್ರತಿಷ್ಠೆಯ ಕಣವಾಗಿರೋ ಮಂಡ್ಯದಿಂದ ( Mandya Lok sabha constituency) ನಟಿ ರಮ್ಯರನ್ನು (Actress Ramya ) ಕಣಕ್ಕಿಳಿಸಲು ಸಿದ್ಧವಾಗ್ತಿದ್ದಾರೆ.

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸದ್ಯ ಲೋಕಸಭಾ ಚುನಾವಣೆಯದ್ದೇ (Lok Sabha Elections 2024)  ಸದ್ದು. ಶತಾಯ ಗತಾಯ ಲೋಕಸಭೆ ಚುನಾವಣೆಯನ್ನು ಹೆಚ್ಚಿನ ಸೀಟ್ ಗಳ ಜೊತೆ ಗೆಲ್ಲಲು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಇನ್ನಿಲ್ಲದ ಸರ್ಕಸ್ ಆರಂಭಿಸಿವೆ. ಈ ಮಧ್ಯೆ ಇನ್ನೂ ಒಂದೆ ಹೆಜ್ಜೆ ಮುಂದೇ ಹೋದ ಡಿಕೆ ಶಿವಕುಮಾರ್ (DK Shivakumar) ರಾಜ್ಯದ ಪ್ರತಿಷ್ಠೆಯ ಕಣವಾಗಿರೋ ಮಂಡ್ಯದಲ್ಲಿ ( Mandya Lok sabha constituency) ಮತ್ತೆ ನಟಿ ರಮ್ಯರನ್ನು (Actress Ramya ) ಕಣಕ್ಕಿಳಿಸಲು ಸಿದ್ಧವಾಗ್ತಿದ್ದಾರೆ.

ಲೋಕಸಭಾ ಚುನಾವಣೆಯನ್ನು ಹೆಚ್ಚಿನ ಸಂಖ್ಯೆಯೊಂದಿಗೆ ಗೆಲ್ಲೋದು ಸದ್ಯ ಮೂರು ಪಕ್ಷಗಳ ಅಜೆಂಡಾ. ಹೀಗಾಗಿ ಸಾಂಪ್ರದಾಯಿಕ ಎದುರಾಳಿ ಎನ್ನಿಸಿದ್ದ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ಮಾತುಗಳನ್ನಾಡುತ್ತಿವೆ. ಹೀಗಾಗಿ ಸದ್ಯ ಕಾಂಗ್ರೆಸ್ ಗೆ ಚುನಾವಣೆಯನ್ನು ಎದುರಿಸೋದರ ಜೊತೆಗೆ ಈ ಮೈತ್ರಿಯನ್ನು ಎದುರಿಸೋ ಅನಿವಾರ್ಯತೆ ಇದೆ.

ಹೀಗಾಗಿ ಈಗಾಗಲೇ‌ ಮಾಸ್ಟರ್ ಪ್ಲ್ಯಾನ್ ಮಾಡ್ತಿದ್ದ ಡಿಕೆಶಿ ತಮ್ಮ ಒಂದೊಂದು ಹೆಜ್ಜೆಯನ್ನು ಯೋಚಿಸಿ ಯೋಚಿಸಿ ಇಡ್ತಿದ್ದಾರೆ. ಸದ್ಯ ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೂ ಅಳೆದು ಸುರಿದು ತೂಗಿ ಆಭ್ಯರ್ಥಿ ಆಯ್ಕೆ ಮಾಡ್ತಿರೋ ಕಾಂಗ್ರೆಸ್ , ಮಂಡ್ಯದಿಂದ‌ ಮತ್ತೊಮ್ಮೆ ರಮ್ಯರನ್ನು ಕಣಕ್ಕಿಳಿಸೋ ಲೆಕ್ಕಾಚಾರದಲ್ಲಿದೆ ಎನ್ನಲಾಗ್ತಿದೆ.

Sandalwood Actress Ramya Contest Congress Candidate  from Mandya Again DK Shivakumar Master Plan for Lok Sabha Elections 2024
Image credit to Original Source

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಸಂಸದೆಯಾಗಿ ದಿ.ಮಂಡ್ಯದ ಗಂಡು ಅಂಬರೀಶ್ ಪತ್ನಿ ಸುಮಲತಾ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಭಾರಿ ಒಂದೊಮ್ಮೆ ಜೆಡಿ ಎಸ್, ಬಿಜೆಪಿ ಅಧಿಕೃತ ಮೈತ್ರಿ ಘೋಷಿಸಿದಲ್ಲಿ ಸುಮಲತಾ ಅಥವಾ ಬೇರೆ ಯಾವುದೇ ಅಭ್ಯರ್ಥಿ ಆದರೂ ಗೆಲುವು ಸುಲಭವಾಗಲಿದೆ ಎಂಬ ವಿಶ್ವಾಸವಿದೆ.

ಇದನ್ನೂ ಓದಿ : ಲಿಂಗಾಯಿತರ ಮುನಿಸು ತಣಿಸಲು ಅಖಾಡಕ್ಕಿಳಿದ ಬಿ.ಎಸ್.ಯಡಿಯೂರಪ್ಪ : ಕೊನೆಗೂ ಎಚ್ಚೆತ್ತ ಬಿಜೆಪಿ

ಸುಮಲತಾ ಅಂಬರೀಶ್ ಸಾವಿನ ಅನುಕಂಪದ ಅಲೆಯಲ್ಲಿ ಗೆದ್ದು ಬಂದರೂ ಅನ್ನೋದು ನಿಜವಾದ್ರೂ ಜೆಡಿಎಸ್, ಕಾಂಗ್ರೆಸ್ ಮೈತ್ರಿಯ ಪೈಪೋಟಿಯನ್ನು ಎದುರಿಸಿ ಗೆದ್ದು ಬಂದ್ರು ಅನ್ನೋದು ಸುಳ್ಳಲ್ಲ. ಹೀಗಾಗಿ ಈಗ ಮತ್ತೊಮ್ಮೆ ಸುಮಲತಾರನ್ನು ಎದುರಿಸೋದು ಸುಲಭವಲ್ಲ. ಹೀಗಾಗಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಕಷ್ಟವಿದೆ. ಇದನ್ನು ಮನಗಂಡ ಡಿಸಿಎಂ ಡಿಕೆಶಿ, ರಮ್ಯರನ್ನು ಮನವೊಲಿಸಿ ಮತ್ತೊಮ್ಮೆ ಕಾಂಗ್ರೆಸ್ ನಿಂದ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ ಎನ್ನಲಾಗ್ತಿದೆ.

ಮೂಲತಃ ಮಂಡ್ಯದವರೇ ಎಂದು ಗುರುತಿಸಿಕೊಳ್ಳುವ ರಮ್ಯ ಈಗಾಗಲೇ ಒಂದು ಭಾರಿ ಮಂಡ್ಯವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲೇ ಸಂಸದೆ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಅಲ್ಲದೇ ಮಂಡ್ಯದ ಜನರು ರಮ್ಯ ಮೇಲೆ‌ ವಿಶೇಷ ಪ್ರೀತಿ ಹೊಂದಿದ್ದಾರೆ.

ಫ್ರೀ ಯೋಜನೆಗಳು ಹಾಗೂ ರಮ್ಯ ವರ್ಚಸ್ಸು ಲೋಕಸಭಾ ಚುನಾವಣೆಯ ಗೆಲುವಿಗೆ ಸಹಾಯವಾಗಲಿದೆ ಅನ್ನೋದು ಡಿಕೆಶಿ ಲೆಕ್ಕಾಚಾರ. ಈಗಾಗಲೇ ಈ ವಿಚಾರವನ್ನು ಡಿಕೆಶಿ ಸಚಿವ ಚೆಲುವರಾಯಸ್ವಾಮಿ ಜೊತೆ ಚರ್ಚಿಸಿದ್ದು ಸದ್ಯದಲ್ಲೇ ರಮ್ಯ ಜೊತೆಗೆ ಮಾತನಾಡಿ ಅವರ ಮನವೊಲಿಸಲಿದ್ದಾರೆ ಎನ್ನಲಾಗ್ತಿದೆ

Sandalwood Actress Ramya Contest Congress Candidate  from Mandya Again DK Shivakumar Master Plan for Lok Sabha Elections 2024
Image Credit to Original Source

ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಅದರ ಜೊತೆಗೆ ಮಂಡ್ಯದಲ್ಲಿ ಹೆಚ್ಚಿನ ಕಾಂಗ್ರೆಸ್ ಶಾಸಕರು ಇದ್ದಾರೆ. ಇದೆಲ್ಲವೂ ಕೂಡ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ವನ್ನು ಗೆಲ್ಲಲು ಸಹಾಯಮಾಡಲಿದೆ ಅನ್ನೋದು ಡಿಕೆಶಿ ಲೆಕ್ಕಾಚಾರ. ಅಲ್ಲದೇ ಜೆಡಿಎಸ್, ಬಿಜೆಪಿ ಮೈತ್ರಿಯನ್ನೇ ಅಸ್ತ್ರವಾಗಿ ಮಾಡಿಕೊಂಡು ಮಂಡ್ಯದ ಜನರನ್ನು ಕಾಂಗ್ರೆಸ್ ಕಡೆಗೆ ಸೆಳೆಯೋದು ಡಿಕೆಶಿ ಪ್ಲ್ಯಾನ್. ಆದರೆ ನಟಿ ಹಾಗೂ ಮಾಜಿ ಸಂಸದೆ ರಮ್ಯ, ಕಳೆದ ಕೆಲ ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ.

ಇದನ್ನೂ ಓದಿ : ಬಿಜೆಪಿಯ ನಿರ್ಲಕ್ಷ್ಯ ಕ್ಕೆ ಬೇಸತ್ತ ದಿ.ಅನಂತಕುಮಾರ್ ಕುಟುಂಬ ಕೈಪಾಳಯ ಸೇರ್ತಾರಾ ತೇಜಸ್ವಿನಿ

ತಮ್ಮ ಆರೋಗ್ಯ ಸಮಸ್ಯೆ ಕಾರಣಕ್ಕೆ ಪಕ್ಷದೊಂದಿಗೆ ಸಕ್ರಿಯವಾಗಿ ಜೋಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವರ್ಷಗಳ ಹಿಂದೆಯೇ ಬ್ರೇಕ್ ಪಡೆದಿದ್ದಾರೆ. ಕಾಂಗ್ರೆಸ್ ಬ ಸೋಷಿಯಲ್ ಮೀಡಿಯಾ ನೋಡಿಕೊಳ್ತಿದ್ದ ರಮ್ಯ ಸದ್ಯ ವಿದೇಶದಲ್ಲೇ ಪ್ರವಾಸ ಮಾಡ್ಕೊಂಡು ಹಾಯಾಗಿದ್ದಾರೆ. ಹೀಗಾಗಿ ಮತ್ತೆ ರಮ್ಯ ರಾಜ್ಯಕ್ಕೆ ಹಾಗೂ ರಾಜ್ಯದ ರಾಜಕಾರಣಕ್ಕೆ ಮರಳ್ತಾರಾ ಅನ್ನೋದು ಸದ್ಯದ ಕುತೂಹಲ.

Sandalwood Actress Ramya Contest Congress Candidate  from Mandya Again DK Shivakumar Master Plan for Lok Sabha Elections 2024

Comments are closed.