M-K border dispute: ಮಹಾರಾಷ್ಟ್ರದಲ್ಲಿ ಬಣ ಬಡಿದಾಟ: ಕರ್ನಾಟಕದ ಗಡಿ ಭಾಗದ ಜನರು ಹೈರಾಣು

ಬೆಳಗಾವಿ: (M-K border dispute) ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಎಂಇಎಸ್‌ ಪುಂಡರು ಸಿಡಿಸಿದ ಕಿಡಿಗೆ ಕರ್ನಾಟಕದ ಗಡಿ ಭಾಗದ ಜನರು ಹೈರಾಣಾಗಿದ್ದು, ಶಿವಸೇನೆಯ ಬಣಗಳು ಗಡಿ ವಿವಾದವನ್ನೇ ಅಸ್ತ್ರವಾಗಿಸಿಕೊಂಡಿವೆ. ಕನ್ನಡಿಗರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ, ಬೆಳಗಾವಿಯಲ್ಲಿ ಮಹಾರಾಷ್ಟ್ರ ಸಚಿವರು ಹಾಗೂ ಸಂಸದರ ಬೇಟಿಗೆ ನಿರ್ಬಂಧ ಹೇರಿದ್ದರೂ ಕೂಡ ಕನ್ನಡಪರ ಹೋರಾಟಗಾರ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ.

ಮಹಾರಾಷ್ಟ್ರದ ಗಡಿ ವಿವಾದ (M-K border dispute) ವಿರುದ್ದ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರದ ವಿರುದ್ದ ಘೋಷಣೆಗಳನ್ನು ಕೂಗಿ, ರಸ್ತೆಗಳ ಮೇಲೆ ಹೊರಳಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರಕ್ಕೆ ಸೇರಿದ ವಾಹನಗಳನ್ನು ತಡೆದು, ನೊಂದಣಿ ಫಲಕದ ಮೇಲೆ ಕಪ್ಪು ಮಸಿ ಬಳಿದು, ಐದಕ್ಕೂ ಹೆಚ್ಚು ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ.

ಕರವೇ ಪ್ರತಿಭಟನೆ ಹಾಗೂ ಬೆಳಗಾವಿ ಭೇಟಿ ರದ್ದು ಮಾಡಿದ ಮಹಾರಾಷ್ಟ್ರ ಸಚಿವರ ನಿರ್ಧಾರ ಖಂಡಿಸಿ ಶಿವಸೇನೆಯ ಕೊಲ್ಲಾಪುರ ಜಿಲ್ಲಾಧ್ಯಕ್ಷ ವಿಜಯ್‌ ದೇವಣೆ ಹಾಗೂ ಸಹಚರರು ಗಡಿಭಾಗದ ಕೊಗನೊಳ್ಳಿಯ ಚೆಕ್‌ಪೋಸ್ಟ್‌ನಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕದ ಗಡಿಯೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ಗಡಿಯಲ್ಲಿ ಗಲಾಟೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಇದರಿಂದ ಆಕ್ರೋಶಗೊಂಡ ಶಿವಸೇನೆಯ ಕಾರ್ಯಕರ್ತರು, ತಮ್ಮದೇ ಸಚಿವರ ಇರುದ್ದ ಘೋಷಣೆ ಕೂಗಿ ಪೊಲೀಸರ ಮೂಲಕ ಹೂ, ಬಳೆ, ಸೀರೆ ಅರಿಶಿಣ, ಕುಂಕುಮ ನೀಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಹೋರಾಟವನ್ನು ಖಂಡಿಸಿ ಪುಣೆಯಲ್ಲಿ ಉದ್ಧವ್‌ ಠಾಕ್ರೆ ಬಣದ ಶಿವಸೇನಾ ಕಾರ್ಯಕರ್ತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಹತ್ತಕ್ಕೂ ಹೆಚ್ಚು ಬಸ್‌ಗಳ ಮೇಲೆ ‘ಜೈ ಮಹಾರಾಷ್ಟ್ರ’ ಎಂದು ಕೇಸರಿ ಹಾಗೂ ಕಪ್ಪು ಬಣ್ಣದಿಂದ ಬರೆದಿದ್ದಾರೆ. ಅಲ್ಲದೆ, ಮುಂಬೈನಲ್ಲಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ನೀವು ಮಹಾರಾಷ್ಟ್ರದ 5 ಲಾರಿಗಳಿಗೆ ಕಲ್ಲು ಹೊಡೆದರೆ ನಾವು ಕರ್ನಾಟಕದ 50 ಬಸ್‌ಗಳನ್ನು ಒಡೆದು ಹಾಕುತ್ತೇವೆ. ಇದಕ್ಕಾಗಿ ಈಗಾಗಲೇ ಶಿವಸೇನೆ ಕಾರ್ಯಕರ್ತರು ಬೆಳಗಾವಿಯತ್ತ ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ : Post Office New Offer : ಇಂಡಿಯನ್ ಪೋಸ್ಟ್ ನಿಂದ ಭರ್ಜರಿ ಆಫರ್ : ವಿವಾಹಿತರ ಖಾತೆಗೆ 59,400 ರೂ.ಜಮಾ

ಇದನ್ನೂ ಓದಿ : Karnataka weather report: ರಾಜ್ಯದಲ್ಲಿ ಮಳೆ ಮತ್ತೆ ಆರಂಭ: ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆ

ಈ ಘಟನೆಗಳ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರಕ್ಕೆ ಕರ್ನಾಟಕದಿಂದ ತೆರಳುವ ಹಲವು ಬಸ್‌ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

(M-K border dispute) The people of the border area of Karnataka are outraged by the spark ignited by the MES thugs regarding the border dispute, and Shiv Sena factions have made the border dispute a weapon. The state government, yielding to the struggle of the Kannadigas, has banned the hunting of Maharashtra ministers and MPs in Belgaum, but the anger of the pro-Kannada activists has not subsided.

Comments are closed.