ಆರೋಗ್ಯ ಇಲಾಖೆಗೆ ಮೇಜರ್‌ ಸರ್ಜರಿ : 108 ಅಂಬ್ಯುಲೆನ್ಸ್‌ ಟೆಂಡರ್‌ ರದ್ದು

ಬೆಂಗಳೂರು : 108 Ambulance Tender Cancelled : ಆರೋಗ್ಯ ಇಲಾಖೆಗೆ ಮೇಜರ್‌ ಸರ್ಜರಿ ಮಾಡಲಾಗಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ ನೀಡಲಾಗಿದ್ದ ಟೆಂಡರ್‌ಗಳನ್ನು ಕಾಂಗ್ರೆಸ್‌ ಸರಕಾರ ರದ್ದು ಮಾಡಿದೆ. 108 ನಿರ್ವಹಣೆಗೆ ಸಂಬಂಧಿಸಿದಂತೆ ಜಿವಿಕೆ ಸಂಸ್ಥೆಗೆ ನೀಡಲಾಗಿದ್ದ ಟೆಂಡರ್‌ ರದ್ದು ಮಾಡಲಾಗಿದ್ದು, ಡಯಾಲಿಸಿಸ್‌ ಕೇಂದ್ರಗಳಿಗೆ ಹೊಸ ಟೆಂಡರ್‌ ಕರೆಯಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 108 ಅಂಬ್ಯುಲೆನ್ಸ್‌ಗಳ ನಿರ್ವಹಣೆಯನ್ನು ಜಿವಿಕೆ ಸಂಸ್ಥೆ ನಿರ್ವಹಣೆ ಮಾಡಲಾಗುತ್ತಿತ್ತು. ಆದ್ರೀಗ ಜಿವಿಕೆ ಸಂಸ್ಥೆಗೆ ನೀಡಿದ್ದ ಟೆಂಡರ್‌ ರದ್ದು ಮಾಡಲಾಗಿದ್ದು, ಹೊಸ ಟೆಂಡರ್‌ ಕರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಮುಂದಿನ ಮೂರು ವಾರಗಳ ಒಳಗಾಗಿ ಹೊಸ ಟೆಂಡರ್‌ ಕರೆಯಲಾಗುತ್ತದೆ. ಅಲ್ಲಿಯ ವರೆಗೆ ಜಿವಿಕೆ ಸಂಸ್ಥೆಯೇ 108 ಅಂಬ್ಯಲೆನ್ಸ್‌ ಸೇವೆಯನ್ನು ಒದಗಿಸಲಿದೆ ಎಂದಿದ್ದಾರೆ.

ಇನ್ನು ಡಯಾಲಿಸಿಸ್‌ ಕೇಂದ್ರಗಳ ನಿರ್ವಹಣೆಯೂ ಕೂಡ ಸಮಪರ್ಕಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಡಯಾಲಿಸಿಸ್‌ ಕೇಂದ್ರಗಳ ಗುತ್ತಿಗೆಯನ್ನೂ ಕೂಡ ರದ್ದು ಮಾಡಲಾಗಿದ್ದು, ಹೊಸ ಗುತ್ತಿಗೆಯನ್ನು ಕರೆಯಲಾಗುತ್ತದೆ. ಇನ್ನೊಂದೆಡೆಯಲ್ಲಿ ವೈದ್ಯರು, ಅಧಿಕಾರಿಗಳ ಕಾರ್ಯನಿರ್ವಹಣೆಯನ್ನೂ ಸರಿದಾರಿಗೆ ತರಬೇಕಾದ ಕೆಲಸವನ್ನು ಮಾಡಬೇಕಾಗಿದೆ. ಜನರ ಆರೋಗ್ಯದ ಪರಿಸ್ಥಿತಿಯನ್ನು ಸದೃಢಕ್ಕೆ ತರುವ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ರಾಜ್ಯದಾದ್ಯಂತ 108 ಅಂಬ್ಯುಲೆನ್ಸ್‌ ಸೇವೆ ಆರಂಭವಾದ ದಿನದಿಂದಲೂ ಕೂಡ ಜಿವಿಕೆ ಸಂಸ್ಥೆ ಅಂಬ್ಯುಲೆನ್ಸ್‌ಗಳನ್ನು ನಿರ್ವಹಣೆ ಮಾಡುತ್ತಿತ್ತು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಜಿವಿಕೆ ಸಂಸ್ಥೆಯ ಕಾರ್ಯನಿರ್ವಹಣೆಯ ಬಗ್ಗೆ ಸಾರ್ವಜನಿಕರಿಂದಲೂ ಸಾಕಷ್ಟು ದೂರುಗಳು ಕೇಳಿಬಂದಿತ್ತು. ಅಲ್ಲದೇ ಸಕಾಲದಲ್ಲಿ ಅಂಬ್ಯುಲೆನ್ಸ್‌ ಸೇವೆ ಲಭ್ಯವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸರಕಾರ ಜಿವಿಕೆ ಸಂಸ್ಥೆಯ ಟೆಂಡರ್‌ ರದ್ದು ಮಾಡಲಾಗಿದೆ.‌

ಇದನ್ನೂ ಓದಿ : Me too case : ಮೀ ಟೂ ಕೇಸ್ : ಅರ್ಜುನ್‌ ಸರ್ಜಾ ಲೈಂಗಿಕ ಕಿರುಕುಳದ ಬಗ್ಗೆ ಸಾಕ್ಷಿ ಕೊಡಿ, ನಟಿ ಶ್ರುತಿ ಹರಿಹರನ್‌ಗೆ ಕೋರ್ಟ್‌ ನೋಟಿಸ್‌

ಇದನ್ನೂ ಓದಿ : ಉಡುಪಿಗೆ ಲಕ್ಷ್ಮೀ ಹೆಬ್ಬಾಳ್ಕರ್‌, ಉತ್ತರ ಕನ್ನಡಕ್ಕೆ ಮಂಕಾಳ್‌ ವೈದ್ಯ : ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ

Major Surgery for Health Department Tender for 108 Ambulance is cancelled

Comments are closed.