ಭಾನುವಾರ, ಏಪ್ರಿಲ್ 27, 2025
Homekarnataka70 ಕಿಲೋಮೀಟರ್ ಬಾನೆಟ್ ಒಳಗೆ ಪ್ರಯಾಣಿಸಿದ ನಾಯಿ : ಜೀವಂತವಾಗಿ ಹೊರಬಂದ ಶ್ವಾನ ಕಂಡು ಅಚ್ಚರಿ

70 ಕಿಲೋಮೀಟರ್ ಬಾನೆಟ್ ಒಳಗೆ ಪ್ರಯಾಣಿಸಿದ ನಾಯಿ : ಜೀವಂತವಾಗಿ ಹೊರಬಂದ ಶ್ವಾನ ಕಂಡು ಅಚ್ಚರಿ

- Advertisement -

ಪುತ್ತೂರು: ಆಯುಷ್ಯ ಗಟ್ಟಿಯಾಗಿದ್ದರೇ ಬಂಡೆ ಮೇಲೆ ಬಿದ್ದು ಬದುಕಬಹುದು ಅಂತಾರೇ. ಅಂತಹ ಮಾತಿಗೆ ಸಾಕ್ಷಿಯಾಗಿರೋದು ಕಾರಿಗೆ ಅಡ್ಡಿ ಸಿಕ್ಕ‌ ಕರಿನಾಯಿ ಕತೆ. ಹೌದು, ಕಾರಿಗೆ ಡಿಕ್ಕಿ ಯಾದ ನಾಯಿಯೊಂದು ಕಾರಿನೊಂದಿಗೆ 70 ಕಿಲೊಮೀಟರ್ (Dog traveled Car bonnet) ಪ್ರಯಾಣಿಸಿ ಜೀವಂತವಾಗಿ ಹೊರಬಂದ ವಿಸ್ಮಯಕಾರಿ ಘಟನೆ ನಡೆದಿದೆ. ಸುಬ್ರಮಣ್ಯದಿಂದ ಪುತ್ತೂರಿಗೆ ದಂಪತಿ ಗಳಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ಟಿ.ಎಸ್ ಅವರು ಪ್ರಯಾಣಿಸುತ್ತಿದ್ದ ವೇಳೆ ಸುಬ್ರಮಣ್ಯ – ಪುತ್ತೂರು ರಸ್ತೆಯ ಬಳ್ಪ ಎಂಬಲ್ಲಿ ಕಾರಿಗೆ ಬೀದಿ ನಾಯಿಯೊಂದು ಅಡ್ಡ ಬಂದಿದೆ.

ಈ ವೇಳೆ ಕಾರಿಗೆ ನಾಯಿ ಡಿಕ್ಕಿ ಹೊಡೆಯುತ್ತಿದ್ದಂತೆ ಕಾರು ನಿಲ್ಲಿಸಿದ ದಂಪತಿ ನಾಯಿಯ ಬಗ್ಗೆ ಪರಿಶೀಲನೆ ನಡೆಸಿದ್ದರು. ಆದರೆ ಕಾರಿಗೆ ಡಿಕ್ಕಿ ಹೊಡೆದ ನಾಯಿ ಕ್ಷಣ ಮಾತ್ರದಲ್ಲಿ ನಾಪತ್ತೆಯಾಗಿತ್ತು. ಅತ್ತ ಇತ್ತ ರಸ್ತೆ ಬದಿಗೆಲ್ಲ ಹುಡುಕಿದ ದಂಪತಿ ನಾಯಿ ಓಡಿ ಹೋಗಿರಬಹುದೆಂದು ಭಾವಿಸಿ ಮನೆಗೆ ಮರಳಿದ್ದರು. ಅಪಘಾತದ ಸ್ಥಳದಿಂದ ಬರೋಬ್ಬರಿ 70 ಕಿಲೋಮೀಟರ್ ಪ್ರಯಾಣಿಸಿದ ದಂಪತಿ ಮನೆ ತಲುಪಿದ್ದರು. ಮನೆಗೆ ಬಂದು ಮನೆಯಲ್ಲಿ ಕಾರನ್ನು ಪರಿಶೀಲಿಸಿದ ಸಮಯದಲ್ಲಿ ಬಂಪರ್ ಒಳಗೆ ನಾಯಿ ಇರೋದು ಪತ್ತೆಯಾಗಿದೆ.

ನಾಯಿ‌ ಕಾರಿನ ಒಳಕ್ಕೆ ಇರೋದನ್ನು ಕಂಡು ಕಂಗಾಲಾದ ಕಾರಿನ ಮಾಲೀಕರು ತಕ್ಷಣ ಮೆಕ್ಯಾನಿಕ್ ರನ್ನು ಕರೆಯಿಸಿದ್ದಾರೆ. ಮೆಕ್ಯಾನಿಕ್ ಬಂದು ಕಾರಿನ ಬಾನೆಟ್ ಒಫನ್ ಮಾಡುತ್ತಿದ್ದಂತೆ ಕರಿನಾಯಿಯೊಂದು ಕಾರಿನ ಒಳಗಿಂದ ಹೊರಬಂದಿದೆ. ಅಪಘಾತಕ್ಕೊಳಗಾದ ನಾಯಿ ಕಾರಿನ ಒಳಗಿನಿಂದ ಅರಾಮವಾಗಿ ಹೊರಕ್ಕೆ ಬಂದಿದ್ದನ್ನು ಕಂಡ ಕಾರಿನ ಮಾಲಿಕರು ಹಾಗೂ ಮೆಕ್ಯಾನಿಕ್ ಅಚ್ಚರಿಗೊಂಡಿದ್ದಾರೆ.

https://www.youtube.com/watch?v=oYC_v9MHoQ0

ಆದರೆ ನಾಯಿ ಮಾತ್ರ ನಂಗೇನೂ ಆಗೇ ಇಲ್ಲ ಎಂಬಂತೆ ಕಾರಿನ ಬಾನೆಟ್ ಒಳಗಿಂದ ಹೊರಕ್ಕೆ ಬಂದು ಬಾಲ ಅಲ್ಲಾಡಿಸಿಕೊಂಡು ಓಡಿ ಹೋಗಿದೆ. ಕಾರಿನ ಬಾನೆಟ್ ನಿಂದ ನಾಯಿ ಸಣ್ಣ ಪುಟ್ಟ ಗಾಯವೂ ಇಲ್ಲದೇ ಹೊರಬಂದಿರೋ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು , ಜನರು ಆಯುಷ್ಯವಿದ್ದರೇ ಏನಾದ್ರೂ ಬದುಕ ಬಹುದು ನೋಡಿ ಎಂದು ಕಮೆಂಟ್ ಮಾಡ್ತಿದ್ದಾರೆ.

ಇದನ್ನೂ ಓದಿ : Car fire accident: ಕಾರಿಗೆ ಬೆಂಕಿ ತಗುಲಿ ಗರ್ಭಿಣಿ, ಪತಿ ಸಜೀವ ದಹನ

ಇದನ್ನೂ ಓದಿ : Actor K. Vishwanath: ಕಲಾತಪಸ್ವಿ ಖ್ಯಾತ ನಟ, ನಿರ್ದೇಶಕ ಕೆ. ವಿಶ್ವನಾಥ್‌ ಇನ್ನಿಲ್ಲ

ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಧಾನ: ಡಾ.ಜಿ.ಪರಮೇಶ್ವರ್ ರಾಜೀನಾಮೆ

Mangalore news Dog traveled 70 kilometers inside the car bonnet Surprised to find a dog that came out alive

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular