Murder and suicide: ಬಾಲಕಿಯನ್ನು ಇರಿದು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಬಾಲಕ

ರೇವಾರಿ: (Murder and suicide) ಅಪ್ರಾಪ್ತ ಬಾಲಕಿಯನ್ನು ಬಾಲಕನೊಬ್ಬ ಚಾಕುವಿನಿಂದ ಇರಿದು ಹತ್ಯೆಗೈದಿದ್ದು, ಆಕೆಯನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ರೇವಾರಿಯಲ್ಲಿ ನಡೆದಿದೆ. ಸದ್ಯ ಘಟನೆಯ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ.

ಅಪ್ರಾಪ್ತ ಬಾಲಕಿ ಶಾಲೆಗೆ ಹೋದವಳು ಮನೆಗೆ ಹಿಂತಿರುಗದೇ ಇದ್ದಾಗ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಲಕಿಯ ಶವ ಹಲವು ಇರಿತದ ಗಾಯಗಳೊಂದಿಗೆ ಪತ್ತೆಯಾಗಿದೆ. ಅಲ್ಲೆ ಪಕ್ಕದಲ್ಲಿದ್ದ ರೈಲ್ವೇ ಹಳಿಗಳ ಮೇಲೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವುದು ಕೂಡ ತಿಳಿದುಬಂದಿದೆ. ಇನ್ನೂ ಬಾಲಕಿಯ ಶಾಲಾ ಬ್ಯಾಗ್‌ ಹಾಗೂ ಕೊಲೆಗೆ ಬಳಸಲಾದ ಚಾಕು ಕೂಡ ಪತ್ತೆಯಾಗಿದ್ದು, ಬಾಲಕನ ಸ್ಕೂಟರ್‌ ಕೂಡ ಪೊಲೀಸರಿಗೆ ಪತ್ತೆಯಾಗಿದೆ.

“ಅಪ್ರಾಪ್ತ ಬಾಲಕಿಯ ಕಾಣೆಯಾದ ದೂರಿನ ಆಧಾರದ ಮೇಲೆ, ನಾವು ಹುಡುಕಾಟ ನಡೆಸಿದ್ದೇವೆ ಮತ್ತು ರಾಷ್ಟ್ರೀಯ ಹೆದ್ದಾರಿಯ ಬಳಿ ಇರಿತದ ಗಾಯಗಳೊಂದಿಗೆ ಆಕೆಯ ಶವವನ್ನು ಪತ್ತೆ ಮಾಡಿದೆವು. ರೈಲ್ವೇ ಹಳಿಗಳ ಮೇಲೆ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತನಿಂದಲೇ ಬಾಲಕಿಗೆ ತೊಂದರೆಯಾಗಿದೆ ಎಂದು ನಮಗೆ ತಿಳಿದುಬಂದಿದೆ. ಬಾಲಕನ ಸ್ಕೂಟಿ ಪತ್ತೆಯಾಗಿದೆ, ಸ್ಕೂಟಿಯಲ್ಲಿ ರಕ್ತದ ಕಲೆಗಳಿದ್ದವು,” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಸುಭಾಷ್ ಚಂದ್ ಮಾಹಿತಿ ನೀಡಿದರು.

ಅಲ್ಲದೇ “ಹುಡುಗಿಯ ಶಾಲಾ ಬ್ಯಾಗ್, ಕೊಲೆಗೆ ಬಳಸಿದ ಚಾಕು ಸ್ಥಳದಲ್ಲೇ ಪತ್ತೆಯಾಗಿದೆ” ಎಂದು ಡಿಎಸ್ಪಿ ತಿಳಿಸಿದ್ದಾರೆ. “ಇದು ಅತ್ಯಾಚಾರದ ಪ್ರಕರಣವಲ್ಲ. ಆದರೆ, ನಾವು ಎಲ್ಲಾ ಕೋನಗಳಿಂದ ಕೊಲೆಯನ್ನು ತನಿಖೆ ಮಾಡುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ವಿಷಯಗಳು ಸ್ಪಷ್ಟವಾಗುತ್ತವೆ. ತನಿಖೆ ಮುಂದುವರೆದಿದೆ” ಎಂದು ಡಿಎಸ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ : Car fire accident: ಕಾರಿಗೆ ಬೆಂಕಿ ತಗುಲಿ ಗರ್ಭಿಣಿ, ಪತಿ ಸಜೀವ ದಹನ

ಇದನ್ನೂ ಓದಿ : Scent of Terror : ಶಿಕ್ಷಕನಾಗಿದ್ದ ಭಯೋತ್ಪಾದಕನಿಂದ ಸುಗಂಧ ದ್ರವ್ಯ ಸುಧಾರಿತ ಸ್ಫೋಟಕ ಸಾಗಾಟ

Murder and suicide: A boy who stabbed a girl to death and then committed suicide

Comments are closed.