DK Sivakumar vs R Ashok : ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ಸ್ಪರ್ಧೆ, ಒಕ್ಕಲಿಗರ ಮತ ಒಡೆಯಲು ಮಾಸ್ಟರ್ ಪ್ಲ್ಯಾನ್

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪೈಕಿ ಕಾಂಗ್ರೆಸ್ ನಿಂದ ಸಿಎಂ ರೇಸ್ ನಲ್ಲಿರೋ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್.ಅಶೋಕ್ (DK Sivakumar vs R Ashok) ಕಣಕ್ಕಿಳಿಸಲು ಪ್ಲ್ಯಾನ್ ಮಾಡಿದ್ದು, ಬಿಜೆಪಿಯ ಈ ಪ್ಲ್ಯಾನ್ ಸಖತ್ ಚರ್ಚೆಗೆ ಗ್ರಾಸವಾಗಿದೆ.

ರಾಮನಗರದ ಕನಕಪುರ ಕ್ಷೇತ್ರ ಬಿಜೆಪಿ ಟಿಕೇಟ್ ಘೋಷಣೆ ಬಳಿಕ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಹಾಲಿ ಪದ್ಮನಾಭ ನಗರದ ಶಾಸಕರಾಗಿರುವ ಒಕ್ಕಲಿಗ ಸಮುದಾಯದ ಆರ್.ಅಶೋಕ್ ರನ್ನು ಬಿಜೆಪಿ ಈ ಭಾರಿ ಎರಡು ಕಡೆಯಿಂದ ಕಣಕ್ಕಿಳಿಸಲು ಸಿದ್ಧವಾಗಿದೆ. ಸತತವಾಗಿ ಏಳು ಭಾರಿ ಶಾಸಕರಾಗಿರೋ ಡಿಕೆಶಿ ಕನಕಪುರವನ್ನು ತಮ್ಮ ಭದ್ರಕೋಟೆ‌ ಯಾಗಿಸಿಕೊಂಡಿದ್ದಾರೆ. ಸಹೋದರ ಡಿ.ಕೆ.ಸುರೇಶ್ ಗೆಲುವು ಕೂಡ ಡಿಕೆಶಿ ಬಲ ವರ್ಧಿಸಿದೆ. ಹೀಗಾಗಿ ಸದ್ಯ ಕ್ಷೇತ್ರದ ಗೆಲುವಿನ ಜೊತೆಗೆ ರಾಜ್ಯದಲ್ಲೂ ಗೆದ್ದು ರಾಜ್ಯದಲ್ಲಿ ಅಧಿಕಾರ ಹಿಡಿಯೋ ಲೆಕ್ಕಾಚಾರದಲ್ಲಿದ್ದಾರೆ ಡಿಕೆಶಿ.

ಹೀಗಾಗಿ ಡಿಕೆಶಿಯನ್ನು ಕಟ್ಟಿ ಹಾಕುವ ಉದ್ದೇಶದಿಂದ ಬಿಜೆಪಿ ಆರ್.ಅಶೋಕ್ (DK Sivakumar vs R Ashok) ರನ್ನು ಕನಕಪುರ ದಿಂದ ಕಣಕ್ಕಿಳಿಸಿದೆ. ಒಕ್ಕಲಿಗರನ್ನೇ ಗುರಿಯಾಗಿಸಿಕೊಂಡು ಮತಬೇಟೆ ನಡೆಸ್ತಿರೋ ಡಿಕೆಶಿ, ಎಲ್ಲೆಡೆ ಒಕ್ಕಲಿಗರನ್ನು ಮುಖ್ಯಮಂತ್ರಿಯಾಗಿಸಲು ತಮ್ಮನ್ನು ಬೆಂಬಲಿಸಿ ಎಂದು ಮನವಿ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಒಕ್ಕಲಿಗರ ಮತವನ್ನು ಒಡೆಯೋ ಉದ್ದೇಶದಿಂದಲೇ ಪ್ಲ್ಯಾನ್ ಮಾಡಿರೋ ಬಿಜೆಪಿ ಆರ್.ಅಶೋಕ್ ರನ್ನು ಕಣಕ್ಕಿಳಿಸಲು ಮುಂದಾಗಿದೆ.

ಹೇಗಿದ್ದರೂ ಪದ್ಮನಾಭ ನಗರದಲ್ಲಿ ಬಿಜೆಪಿಯ ಆರ್.ಅಶೋಕ್ ಗೆಲ್ಲುವ ಕುದುರೆ. ಹೀಗಾಗಿ ಕನಕಪುರ ದಲ್ಲಿ ಆರ್.ಅಶೋಕ್ ಗೆಲ್ಲದಿದ್ದರೂ ಅವರ ಸ್ಥಾನಮಾನಕ್ಕೇನು ದಕ್ಕೆಯಾಗೋದಿಲ್ಲ. ಹೀಗಾಗಿ ಬಂದರೇ ಒಂದು ಶಾಸಕ ಸ್ಥಾನ ಹೋದರೇ ಒಂದು ಪ್ರಯತ್ನ ಎಂಬ ಲೆಕ್ಕಾಚಾರದಲ್ಲಿ ಅಶೋಕ್ ರನ್ನು ಕನಕಪುರಕ್ಕೆ ಕಳಸ್ತಿದೆ ಬಿಜೆಪಿ. ಇನ್ನು ಪಕ್ಷದ ಈ ತೀರ್ಮಾನವನ್ನು ಸಚಿವ ಆರ್.ಅಶೋಕ್ ಸ್ವಾಗತಿಸಿದ್ದಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಅಗತ್ಯವಿದ್ದು ಪಕ್ಷ ಸೂಚಿಸಿದಾಗ ನಾನು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೂ ಹೋಗಿದ್ದೇನೆ. ಉತ್ತರ ಪ್ರದೇಶದಲ್ಲಿ 21 ದಿನ ಒಂದೇ ಬಟ್ಟೆಯಲ್ಲಿ ಕಳೆದಿದ್ದೇನೆ. ನಮಗೆ ಪಕ್ಷ ಮುಖ್ಯ. ಹೀಗಾಗಿ ಕರ್ಮಣ್ಯೇ ವಾದಿಕಾರಸ್ಥೆ ಎಂಬಂತೆ ಪಕ್ಷ ನನಗೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಅತಿ ಶೀಘ್ರದಲ್ಲೇ ಕನಕಪುರದಿಂದ ಪ್ರಚಾರ ಆರಂಭಿಸುತ್ತೇನೆ ಎಂದು ಅಶೋಕ್ ಹೇಳಿದ್ದಾರೆ. ಕೇವಲ ಅಶೋಕ್ ಮಾತ್ರವಲ್ಲ ಕಾಂಗ್ರೆಸ್ ಸಿದ್ಧರಾಮಯ್ಯ ಸಿಎಂ ಕನಸು ಭಗ್ನಗೊಳಿಸಲು ಬಿಜೆಪಿ ಸಿದ್ಧು ವಿರುದ್ಧ ಸೋಮಣ್ಣರನ್ನು ಕಣಕ್ಕಿಳಿಸಲು ಸಿದ್ದವಾಗಿದೆ.

ಇದನ್ನೂ ಓದಿ : ಕರ್ನಾಟಕ ವಿಧಾನಸಭಾ ಚುನಾವಣೆ : ಬಿಜೆಪಿ 189 ಅಭ್ಯರ್ಥಿಗಳ ಪಟ್ಟಿ ಪ್ರಕಟ, ಯಾರಿಗೆಲ್ಲಾ ಟಿಕೆಟ್‌

ಇದನ್ನೂ ಓದಿ : Jagadish Shettar : ಚುನಾವಣಾ ಟಿಕೆಟ್‌ ಮಿಸ್‌, ಹೈಕಮಾಂಡ್‌ಗೆ ಸಡ್ಡು ಹೊಡೆದ ಜಗದೀಶ್‌ ಶೆಟ್ಟರ್‌

Comments are closed.