Mekedatu March FIR : ಡಿ.ಕೆ.ಶಿವಕುಮಾರ್ ಸೇರಿ 38 ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು : ಕೊರೋನಾ ಕಾರಣಕ್ಕೆ ಅರ್ಧಕ್ಕೆ ನಿಂತಿದ್ದ ಪಾದಯಾತ್ರೆಯನ್ನು ಡಿ.ಕೆ. ಶಿವಕುಮಾರ್ ನೇತ್ರತ್ವದ ಕೈಪಡೆ ಮುಂದುವರೆಸಿದೆ. ಆದರೆ ಪಾದಯಾತ್ರೆಯ ಎರಡನೇ ದಿನವೇ ಕೈಪಡೆಗೆ ಸರ್ಕಾರ ಶಾಕ್ ನೀಡಿದ್ದು ಡಿ.ಕೆ. ಶಿವಕುಮಾರ್ ಸೇರಿದಂತೆ 38 ಜನರ ಎಫ್ಐಆರ್ (Mekedatu March FIR ) ದಾಖಲಿಸಲಾಗಿದೆ. ಮೇಕೆದಾಟು ಪಾದಯಾತ್ರೆ 2.0 ಹಿನ್ನೆಲೆ ಯಲ್ಲಿ ರಾಮನಗರದ ತಹಶೀಲ್ದಾರ ವಿಜಯ್ ಕುಮಾರ್ ಕೊರೋನಾ‌ ನಿಯಮ ಉಲ್ಲಂಘನೆ ಆರೋಪದಡಿಯಲ್ಲಿ ದೂರು ನೀಡಿದ್ದಾರೆ. 38 ಜನ ಕಾಂಗ್ರೆಸ್ ನಾಯಕರ ವಿರುದ್ಧ FIR ದಾಖಲಾಗಿದೆ.

Mekedatu march FIR Against Congress Leaders 1

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ ಸೇರಿ ಹಲವರನ್ನು ದೂರಿನಲ್ಲಿ ಹೆಸರಿಸಲಾಗಿದೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ (Mekedatu March FIR ) ನಲ್ಲಿ A1 ಡಿ.ಕೆ.ಶಿವಕುಮಾರ್, A2 ವಿಪಕ್ಷ ನಾಯಕ ಸಿದ್ಧರಾಮಯ್ಯ, A3 ಸಂಸದ ಡಿ‌.ಕೆ‌.ಸುರೇಶ್, A 4 ಎಂಎಲ್ ಸಿ ರವಿ ಸೇರಿದಂತೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರಮುಖ ನಾಯಕರೆಲ್ಲರ (Congress Leaders) ಮೇಲೆ ಪ್ರಕರಣ ದಾಖಲಾಗಿದೆ.

Mekedatu march FIR Against Congress Leaders

ಕರ್ನಾಟಕ ಸರ್ಕಾರ ಮೂರನೇ ಅಲೆಯ ನಿಯಂತ್ರಣಕ್ಕೆ ಅಳವಡಿಸಿದ ಕಠಿಣ ನಿಯಮಗಳು ಫೆ.28ರವರೆಗೂ ಜಾರಿಯಲ್ಲಿದೆ.‌ಹೀಗಿದ್ದಾಗ್ಯೂ ಪಾದಯಾತ್ರೆ ಹಮ್ಮಿಕೊಂಡು ಜನರನ್ನು ಒಗ್ಗೂಡಿಸಿ ನಿಯಮ ಉಲ್ಲಂಘಿಸಿದ್ದಕ್ಕೆ ದೂರು ದಾಖಲಿಸಿಕೊಳ್ಳಲಾಗಿದೆ. ಜನವರಿ 9 ರಂದು ಮೇಕೆದಾಟು ನೀರಿಗಾಗಿ ಆರಂಭವಾಗಿದ್ದ ಪಾದಯಾತ್ರೆ ಕೊರೋನಾ ಮೂರನೆ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕುಗೊಂಡಿತ್ತು. ಪಾದಯಾತ್ರೆ ನಿಲ್ಲಿಸುವಾಗಲೇ ಪುನರಾರಂಭಗೊಳಿಸುವುದಾಗಿ ಹೇಳಿದ್ದ ಡಿಕೆಶಿ ಕೋರೋನಾ ಮೂರನೇ ಅಲೆಯ ಪ್ರಭಾವ ತಗ್ಗುತ್ತಿದ್ದಂತೆ ಮತ್ತೆ ಆರಂಭಿಸಿದ್ದಾರೆ.

ಫೆ.27 ರಂದು ಆರಂಭವಾಗಿರುವ ಪಾದಯಾತ್ರೆ ಮಾರ್ಚ್ 3 ಕ್ಕೆ ‌ಜಯನಗರ ನ್ಯಾಶನಲ್ ಕಾಲೇಜ್ ಮೈದಾನದಲ್ಲಿ ಕೊನೆಗೊಳ್ಳಲಿದ್ದು, ಅಂದೂ ಕಾಂಗ್ರೆಸ್ ಬೃಹತ ಸಮಾವೇಶ ನಡೆಯಲಿದೆ. ಪಾದಯಾತ್ರೆಯಲ್ಲಿ ವಿವಿಧ ಜಿಲ್ಲೆಗಳ ಕಾಂಗ್ರೆಸ್ ನಾಯಕರು (Congress Leaders), ಸಂಸದರು,ಶಾಸಕರು ಸಿನಿಮಾ‌ ನಟರು ವಿವಿಧ ಮಠಗಳ‌ ಮಠಾಧೀಶರು ಪಾಲ್ಗೊಂಡಿದ್ದಾರೆ. ಇಂದು ರಾಮನಗರದ ಗಡಿಯಲ್ಲಿ ಕೊನೆಗೊಳ್ಳಲಿರುವ ಪಾದಯಾತ್ರೆ ನಾಳೆ ನಗರದ ವ್ಯಾಪ್ತಿಯಲ್ಲಿ ನಡೆಯಲಿದೆ. ಶಿವರಾತ್ರಿ ಹಬ್ಬದಂದು ಪಾದಯಾತ್ರೆ ನಿಲ್ಲಿಸೋದಿಲ್ಲ ಎಂದು ಸಿದ್ಧರಾಮಯ್ಯ ಗುಡುಗಿದ್ದಾರೆ‌

ಪಾದಯಾತ್ರೆಗೂ ಮುನ್ನವೇ ರಾಮನಗರ ಡಿಸಿ ಪಾದಯಾತ್ರೆಗೆ ಅವಕಾಶವಿಲ್ಲ ಎಂದಿದ್ದರು‌‌. ಅಲ್ಲದೇ ನಮ್ಮಿಂದ ಯಾರು ಪಾದಯಾತ್ರೆಗೆ ಅನುಮತಿ ಕೋರಿಲ್ಲ ಎಂದಿದ್ದರು. ಈಗ ಪಾದಯಾತ್ರೆ ಎರಡನೆ ದಿನ ಡಿ.ಕೆ. ಶಿವಕುಮಾರ್ ಸೇರಿದಂತೆ ಕೈ ನಾಯಕರ ವಿರುದ್ಧ ದೂರು ದಾಖಲಾಗಿದೆ. ಆದರೆ ಈ ದೂರಿಗೆ ಕೈನಾಯಕರು ಕ್ಯಾರೇ ಎನ್ನದೇ ತಮ್ಮ ಯಾತ್ರೆ ಮುಂದುವರೆಸಿದ್ದಾರೆ.

ಇದನ್ನೂ ಓದಿ :  ಚೈತ್ರಾ ಕುಂದಾಪುರ, ಮುತಾಲಿಕ್‌ಗೆ ಕಲಬುರಗಿ ಪ್ರವೇಶ ನಿಷೇಧ : ಜಿಲ್ಲಾಧಿಕಾರಿ ಆದೇಶ

ಇದನ್ನೂ ಓದಿ : ಕೈ ಪಾದಯಾತ್ರೆಗೆ ದಳಪತಿಗಳ ಸೆಡ್ಡು : ಪಾದಯಾತ್ರೆ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ

(Mekedatu march FIR Against Congress Leaders)

Comments are closed.