Mini Tempo washed away : ಭಾರಿ ಮಳೆಗೆ ಕೆರೆಯಲ್ಲಿ ಕೊಚ್ಚಿ ಹೋದ ಮಿನಿ ಟೆಂಪೋ :ಓರ್ವ ನೀರುಪಾಲು

ತುಮಕೂರು : Mini Tempo washed away : ರಾಜ್ಯದಲ್ಲಿ ವರುಣನ ಅಬ್ಬರ ಮಿತಿಮೀರಿದೆ. ಭಾರೀ ಮಳೆಯಿಂದಾಗಿ ಕೆರೆ ಕೋಡಿಗಳು ಮಿತಿಮೀರಿ ಹರಿಯುತ್ತಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಮಲನಪನಹಳ್ಳಿ ಸೇತುವೆ ಬಳಿಯಲ್ಲಿ ಕೆರೆ ಕೋಡಿಯ ನೀರಿನಲ್ಲಿ ಮಿನಿ ಟೆಂಪೋ ಕೊಚ್ಚಿಕೊಂಡು ಹೋಗಿದ್ದು ಮಿನಿ ಟೆಂಪೋದಲ್ಲಿದ್ದ ಓರ್ವ ಕಣ್ಮರೆಯಾಗಿದ್ದಾನೆ.


ಆಂಧ್ರ ಪ್ರದೇಶ ಪೆನಗೊಂಡದಿಂದ ತುಮಕೂರಿಗೆ ಬರುತ್ತಿದ್ದ ಮಿನಿ ಟೆಂಪೋ ಇದಾಗಿತ್ತು. ಸತತವಾಗಿ ಸುರಿದ ಮಳೆಯಿಂದಾಗಿ ತುಂಬಾಡಿ ಕರೆಯಲ್ಲಿ ಕೋಡಿ ಬಿದ್ದಿತ್ತು. ಹೀಗಾಗಿ ಕಳೆದೊಂದು ವಾರದಿಂದ ಮಲ್ಲಪ್ಪನಹಳ್ಳಿ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿತ್ತು. ಹೀಗಾಗಿ ವಾಹನಗಳು ಸಂಚಾರ ಮಾಡದಂತೆ ಈ ಭಾಗದಲ್ಲಿ ತಡೆ ಹಿಡಿಯಲಾಗಿತ್ತು. ಆದರೆ ಇಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಏಕಾಏಕಿಯಾಗಿ ಬಂದ ಮಿನಿ ಟೆಂಪೋ ಸೇತುವೆ ಮಾರ್ಗದಲ್ಲೇ ಸಂಚರಿಸಿದೆ.


ರಭಸವಾಗಿ ಹರಿಯುತ್ತಿರುವ ನೀರಿನಲ್ಲಿಯೇ ಮಿನಿ ಟೆಂಪೋ ಚಾಲಕ ಗಾಡಿಯನ್ನು ಚಲಾಯಿಸಿದ್ದಾನೆ. ಆದರೆ ನೀರಿನ ರಭಸಕ್ಕೆ ಮಿನಿ ಟೆಂಪೋ ಕೊಚ್ಚಿ ಹೋಗಿದೆ. ಟೆಂಪೋ ಚಾಲಕ ಹರಿಯುವ ನೀರಿನಿಂದ ಈಜಿಕೊಂಡು ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಮತ್ತೋರ್ವ ವ್ಯಕ್ತಿ ನೀರುಪಾಲಾಗಿದ್ದಾನೆ. ಈತನಿಗೆ ಈಜಲು ಬಾರದ ಕಾರಣ ಈ ಅವಘಡ ಸಂಭವಿಸಿದೆ. ಕೊರಟಗೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್​ ಠಾಣಾ ಸಿಬ್ಬಂದಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ . ಕಣ್ಮರೆಯಾಗಿರುವ ವ್ಯಕ್ತಿಗಾಗಿ ಹುಡಕಾಟ ಭರದಿಂದ ಸಾಗಿದೆ.

ಇತ್ತ ಭಾರೀ ಮಳೆಯಿಂದಾಗಿ ಮೈಸೂರು ತಾಲೂಕಿನ ಇಲವಾಲ ಹೊಬಳಿಯ ಕೆರೆಯೊಂದು ಕೋಡಿ ಬಿದ್ದಿದೆ. ಬೊಮ್ಮನಹಳ್ಳಿ ಕೆರೆ ಕೋಡಿ ಒಡೆದು ಅಪಾರ ನಷ್ಟ ಸಂಭವಿಸಿದೆ. ಕೋಡಿ ನೀರು ಕೃಷಿ ಜಮೀನಿಗೆ ನುಗ್ಗಿ ಅಪಾರ ನಷ್ಟ ಸಂಭವಿಸಿದೆ. ಮಳೆಯಿಂದಾಗಿ ಕೃತಕ ಜಲಪಾತ ಸೃಷ್ಟಿಯಾಗಿದೆ. 20 ಅಡಿ ಆಳ ಹಾಗೂ 20 ಅಡಿ ಅಗಲಕ್ಕೆ ರಸ್ತೆ ಮುರಿದು ಬಿದ್ದಿದೆ. ಮೈಸೂರು ಇಲವಾಲ ಸಂಪರ್ಕಿಸುವ ಗ್ರಾಮಾಂತರ ರಸ್ತೆ ಸಂಪೂರ್ಣ ನಾಶವಾಗಿದೆ.

ಇದನ್ನು ಓದಿ : Bangalore Rain : ಬೆಂಗಳೂರಿನಲ್ಲಿ ರಣಮಳೆಯ ಅವಾಂತರ

ಇದನ್ನೂ ಓದಿ : Neginahala Swamiji commits suicide : ಮುರುಘಾ ಶರಣರ ಮೇಲಿನ ಪೋಕ್ಸೋ ಪ್ರಕರಣಕ್ಕೆ ಹೊಸ ತಿರುವು : ನೇಗಿನಹಾಳ ಸ್ವಾಮೀಜಿ ಆತ್ಮಹತ್ಯೆ

Mini Tempo washed away in the lake :

Comments are closed.