ಗದಗ : Minister CC Patil : ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಪ್ರಮುಖರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಅತ್ಯಂತ ಕೀಳು ಮಟ್ಟದಲ್ಲಿ ಪ್ರತಿನಿತ್ಯ ಮಾತನಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗದಗದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ದೇಶಕ್ಕಾಗಿ ಹೋರಾಟ ಮಾಡಿದವರ ತ್ಯಾಗ ಬಲಿದಾನಗಳು ಇವರಿಗೆ ನೆನಪಿಗೆ ಬರೋದಿಲ್ಲ. ದೇಶಪ್ರೇಮಿ ಅಂತಾ ಕರೆಯದಿದ್ರೂ ತೊಂದರೆ ಇಲ್ಲಾ, ದೇಶ ದ್ರೋಹಿ ಅಂತಾ ಕರೆದ್ರೆ ಅದು ಇತಿಹಾಸಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಮಾಡಿದ ಅನ್ಯಾಯ ಎಂದು ಹೇಳಿದರು.
ಸಾವಿರಾರು ಕೋಟಿ ರೂಪಾಯಿ ಹಗರಣದಲ್ಲಿ ಜೈಲು ಸೇರಿದವರನ್ನು ಮಹಾನ್ ನಾಯಕರು ಎಂದು ಬಣ್ಣಿಸುತ್ತೀರಿ. 28 ವರ್ಷ ಜೈಲಿನಲ್ಲಿ ಕಳೆದ ಮಹಾನ್ ನಾಯಕನ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅನ್ನೋದನ್ನು ಕಾಂಗ್ರೆಸ್ ಸ್ಪಷ್ಟ ಪಡಿಸಲಿ. ತಿಹಾರ್ ಜೈಲಿನಿಂದ ಹೊರ ಬಂದಾಗ ನಿಮ್ಮ ನಾಯಕನಿಗೆ ಯಾವ ರೀತಿ ಮೆರವಣಿಗೆ ಮಾಡಿದ್ದೀರಿ..? ಸಿದ್ದರಾಮಯ್ಯ ಮೊದಲು ಇದನ್ನು ನೆನಪಿಸಿಕೊಳ್ಳಿ, ಇತಿಹಾಸ ಮೆಲುಕು ಹಾಕಲಿ ಎಂದು ಟಾಂಗ್ ನೀಡಿದರು.
ಸಾವರ್ಕರ್ ಅಂಚೆ ಚೀಟಿ ಬಿಡುಗಡೆ ಮಾಡಿ, ಸಾಕ್ಷ್ಯ ಚಿತ್ರಗಳನ್ನು ಬಿಡುಗಡೆ ಮಾಡಿದ ಇಂದಿರಾ ಗಾಂಧಿ ಬಗ್ಗೆ ಏನು ಹೇಳ್ತೀರಾ..? ಇಲೆಕ್ಟ್ರಾನಿಕ್ ಮೀಡಿಯಾ ಇದೆ.. ಕೇಳುವವರಿದ್ದಾರೆ ಅಂತಾ ಬಾಯಿಗೆ ಬಂದಂತೆ ಮಾತಾಡೋದಲ್ಲ ಎಂದು ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ ಸಿ.ಸಿ ಪಾಟೀಲ್ ಆ ಮೊಟ್ಟೆಯನ್ನು ನಮ್ಮ ಪಕ್ಷದವರು ಎಸೆದರೋ ಅಥವಾ ಅವರೇ ತಾವಾಗಿಯೇ ಎಸೆದುಕೊಂಡರೋ ಅನ್ನೋದು ತನಿಖೆಯಲ್ಲಿ ಹೊರ ಬರಲಿ. ವಿರೋಧ ಪಕ್ಷದ ನಾಯಕನಿಗೆ ಭದ್ರತೆ ನೀಡುವಲ್ಲಿ ನಮ್ಮ ಸರ್ಕಾರದಿಂದ ಯಾವುದೇ ಲೋಪವಾಗಿಲ್ಲ. ಮೊಟ್ಟೆ ಪ್ರಕರಣಕ್ಕೆ ಕಾಂಗ್ರೆಸ್ ರಾಜಕೀಯ ಬಣ್ಣ ಹಚ್ಚುತ್ತಿದೆ ಎಂದು ಹೇಳಿದರು.
ಕಾರಿಗೆ ಮೊಟ್ಟೆ ಬಿದ್ದಿದ್ದನ್ನು ಕಾಂಗ್ರೆಸ್ ಕಾಶ್ಮೀರದಲ್ಲಿ ಯೋಧರಿಗೆ ಪಾಕಿಸ್ತಾನದವರು ಬಾಂಬ್ ದಾಳಿ ಮಾಡಿದಂತೆ ಮಾಡ್ತಿದ್ದಾರೆ. ಒಂದು ಮೊಟ್ಟೆ ಹೀಗೆ ಹೆದರಿದರೆ ಹೇಗೆ..? ನೀವು ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಹಿಂದೂ ಕಾರ್ಯಕರ್ತರ ಹತ್ಯೆಯಾಯ್ತು..? ಮೊಟ್ಟೆ ಹಿಡಿದುಕೊಂಡು ರಾಜಕೀಯ ಮಾಡುವ ದುಸ್ಥಿತಿ ಕಾಂಗ್ರೆಸ್ಗೆ ಬಂದಿದ್ದು ಸೂಚನಿಯ . ಟಿಪ್ಪುಗೆ ಕೊಡಗಿನಲ್ಲಿ ವಿರೋಧವಿದೆ. ಹೀಗಾಗಿ ಟಿಪ್ಪು ವಿರೋಧವಿರುವ ಸ್ಥಳಕ್ಕೆ ಉದ್ದೇಶಪೂರ್ವಕವಾಗಿಯೇ ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಇದನ್ನು ಓದಿ : Govinda Karajola : ‘ಮುಪ್ಪಿನಲ್ಲಿ ಸಿದ್ದರಾಮಯ್ಯಗೆ ಮಠ-ಮಾನ್ಯಗಳ ಬಗ್ಗೆ ಜ್ಞಾನೋದವಾಗಿದೆ’ : ಗೋವಿಂದ ಕಾರಜೋಳ ವ್ಯಂಗ್ಯ
Minister CC Patil outraged against Siddaramaiah