Sonam Kapoor : ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್​ ನಟಿ ಸೋನಂ ಕಪೂರ್​​​

Sonam Kapoor  : ಬಾಲಿವುಡ್​ ನಟಿ ಸೋನಂ ಕಪೂರ್​ ಹಾಗೂ ಆನಂದ್​ ಅಹುಜಾ ಇಂದು ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ಸೋನಂ ಕಪೂರ್​ ತಾವು ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್​ಗೆ ನೀಲಿ ಬಣ್ಣದ ಹಾರ್ಟ್​ನ್ನು ಶೀರ್ಷಿಕೆಯಲ್ಲಿ ನೀಡಿದ್ದಾರೆ. ನಟಿ ಸೋನಂ ಕಪೂರ್​ ಇತ್ತೀಚಿಗೆ ಕಾಫಿ ವಿತ್​ ಕರಣ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​ ಶೇರ್​ ಮಾಡಿರುವ ನಟಿ ಸೋನಂ ಕಪೂರ್​, 20.08.2022ರಂದು ಆವು ನಮ್ಮ ಸುಂದರ ಗಂಡುಮಗುವನ್ನು ಹೃದಯಪೂರ್ವಕವಾಗಿ ಬರ ಮಾಡಿಕೊಂಡಿದ್ದೇವೆ. ನಮ್ಮ ಈ ಪ್ರಯಾಣದಲ್ಲಿ ನಮಗೆ ಬೆಂಬಲ ನೀಡಿದ ಎಲ್ಲಾ ವೈದ್ಯರು, ದಾದಿಯರು , ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಧನ್ಯವಾದಗಳು . ಇದು ಕೇವಲ ಆರಂಭ. ಆದರೆ ನಮ್ಮ ಜೀವನವು ಇಲ್ಲಿಂದ ಶಾಶ್ವತವಾಗಿ ಬದಲಾಗಲಿದೆ ಎಂದು ಬರೆದುಕೊಂಡಿದ್ದರು.

ಈ ಹಿಂದೆ ಇನ್​ಸ್ಟಾಗ್ರಾಂನಲ್ಲಿ ತಮ್ಮ ಗರ್ಭಾವಸ್ಥೆಯನ್ನು ಘೋಷಿಸಿದ್ದ ಸೋನಂ ಕಪೂರ್​, ನಿನ್ನನ್ನು ಅತ್ಯುತ್ತಮವಾಗಿ ಪೋಷಿಸಲು ನಮ್ಮ ನಾಲ್ಕು ಕೈಗಳು ತಯಾರಿವೆ. ನಿನಗಾಗಿ ಮಿಡಿಯಲು ಎರಡು ಹೃದಯಗಳು ಕಾಯುತ್ತಿವೆ. ನಿನಗಾಗಿ ಪ್ರೀತಿ ಹಾಗೂ ಬೆಂಬಲವನ್ನು ನೀಡಲು ನಮ್ಮ ಕುಟುಂಬವು ಕಾಯುತ್ತಿದೆ ಎಂದು ಬರೆದುಕೊಂಡಿದ್ದರು. ಹೆಚ್ಚಿನ ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸೋನಂ ಕಪೂರ್​ ಹಾಗೂ ಆನಂದ್​ ಅಹುಜಾ ಕೆಲವು ವರ್ಷಗಳ ಕಾಲ ಡೇಟಿಂಗ್​ ಮಾಡಿ 2018ರ ಮೇ ತಿಂಗಳಲ್ಲಿ ಮುಬೈನಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನೂ ನಡೆಸಲಾಗಿತ್ತು. ಆನಂದ್​ ಅಹುಜಾ ಫ್ಯಾಶನ್​​ ಲೇಬಲ್​ ಭಾನೆ ಹಾಗೂ ಸ್ನೀಕರ್​​ ಬೊಟಿಕ್​​ನ್ನು ನಡೆಸುತ್ತಿದ್ದಾರೆ.

ಇದನ್ನು ಓದಿ : jote joteyali serial : ‘ಜೊತೆ ಜೊತೆಯಲಿ’ ಧಾರವಾಹಿ ವೀಕ್ಷಕರಿಗೆ ಬಿಗ್​ ಅಪ್ಡೇ​​ಟ್​​ : ಸೀರಿಯಲ್​​ನಿಂದ ನಟ ಅನಿರುದ್ಧಗೆ ಕೊಕ್​​

ಇದನ್ನೂ ಓದಿ : Amulya Twins Children Photo: ಅಮೂಲ್ಯ ಅವಳಿ ಮಕ್ಕಳ ಪೋಟೋ ರಿವೀಲ್: ಮುದ್ದು ಮಕ್ಕಳ ಮುಖ ತೋರಿಸಿದ ನಟಿ

ಇದನ್ನೂ ಓದಿ : Anirudh Jatkar Reaction : ಜೊತೆ ಜೊತೆಯಲಿ ವಿವಾದಕ್ಕೆ ಬಿಗ್‌ ಟ್ವಿಸ್ಟ್‌ : ನಿರ್ದೇಶಕ, ನಿರ್ಮಾಪಕರ ವಿರುದ್ದ ನಟ ಅನಿರುದ್ದ್ ಆರೋಪ

It’s A Baby Boy For Sonam Kapoor And Anand Ahuja

Comments are closed.