ಗದಗ : PFI leader’s arrest : ರಾಜ್ಯಾದ್ಯಂತ ಕರ್ನಾಟಕ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಾಯಕರು ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸಿಆರ್‌ಪಿಸಿ 107, 151 ಅಡಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇವರನ್ನು ಅರೆಸ್ಟ್ ಮಾಡಲಾಗಿದೆ. ಈ ಬಂಧನ ವಿಚಾರಕ್ಕೆ ಸಂಬಂಧಿಸಿ ಗದಗದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್, ಚಾಮರಾಜನಗರದಲ್ಲಿ ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಗದಗದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಕಾನೂನು ತನ್ನ ಕ್ರಮವನ್ನು ಕೈಗೊಳ್ಳುತ್ತೇ, ಅಧಿಕಾರಿಗಳಿಗೆ ಪ್ರೀ ಆ್ಯಂಡ್ ಇದೆ ಎಂದು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳುವರು, ಸಮಾಜದ ಸ್ವಾಸ್ಥ್ಯ ಕೆಡಿಸುವಂತವರಿಗೆ ಸೂಕ್ತ ಶಿಕ್ಷೆಯನ್ನು ಕೇಂದ್ರ ಸರ್ಕಾರ ನೀಡುತ್ತೇ. ಘನಘೋರವಾದ ಭೀಕರವಾದ ಮಾಹಿತಿಗಳು ಹೊರ ಬರುತ್ತವೆ ಎಂದು ಕುತೂಹಲಕಾರಿ ಮಾತನ್ನು ಸಹ ಇದೇ ಸಂದರ್ಭ ಹೇಳಿದ್ದಾರೆ. ಪ್ರಧಾನಿ ಮಂತ್ರಿ ಹತ್ಯೆ ಸೇರಿದಂತೆ ಹಲವು ಮಾಹಿತಿ ಹೊರ ಬರುತ್ತವೆ. ಅಂತಹ ಪಿಎಫ್ಐ ಕಾರ್ಯಕರ್ತರನ್ನು ಅಂದು ಸಿದ್ದರಾಮಯ್ಯ ಬಿಡುಗಡೆ ಮಾಡಿದ್ರು. ಹಿಂದು ಕಾರ್ಯಕರ್ತರ ಕೊಲೆಯಾದಾಗ ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಬಿಡುಗಡೆ ಮಾಡಿದೆ. ಇದು ಕಾಂಗ್ರೆಸ್ ಪಕ್ಷದ ಸುಂದರ ಪ್ರಜಾಪ್ರಭುತ್ವ, ಎಂದು ಸಿ ಸಿ ಪಾಟೀಲ್ ವ್ಯಂಗ್ಯವಾಡಿದರು.
ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿ ಚಾಮರಾಜನಗರದಲ್ಲಿ ಮಾತನಾಡಿರುವ ವಸತಿ ಸಚಿವ ವಿ.ಸೋಮಣ್ಣ ಧಮನಕಾರಿ ಶಕ್ತಿಗಳನ್ನು ಯಾರು ತಾನೇ ಸಹಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ, ದೇಶದಲ್ಲಿ ಶಾಂತಿ ನೆಮ್ಮದಿ ಅವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಅವರ ನಡವಳಿಕೆಗಳನ್ನು ಸರ್ಕಾರ ಸೂಕ್ಷವಾಗಿ ಗಮನಿಸುತ್ತಿದೆ.
ಸರ್ಕಾರ ಜವಬ್ದಾರಿಯುತವಾಗಿ ಕೆಲಸ ಮಾಡ್ತಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಯಾರೇ ತಪ್ಪು ಮಾಡಿದರು ತಪ್ಪೇ.ಅದಕ್ಕೆ ತಕ್ಕ ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದ ಸಚಿವ ಸೋಮಣ್ಣ, ಪಿಎಫ್ಐ ಮೇಲಿನ ಕೇಸ್ ವಾಪಸ್ ತೆಗೆದು ಕೊಂಡಿದ್ದವರಿಗೆ ಇನ್ನಾದರೂ ಜ್ಞಾನೋದಯವಾಗಲಿ ಎಂದು ಕಾಂಗ್ರೆಸ್ ವಿರುದ್ದ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದರು. ಯಾರು ಎಷ್ಟು ದೊಡ್ಡವರೇ ಆಗಿರಲಿ ದೇಶದ ವ್ಯವಸ್ಥೆ ಗೆ ತಲೆಬಾಗಲೇಬೇಕು ಎಂದು ಇದೇ ಸಂದರ್ಭ ಸೋಮಣ್ಣ ಹೇಳಿದರು.
ಇದನ್ನು ಓದಿ : Iranian security forces: ಇರಾನ್ನಲ್ಲಿ ಮುಂದುವರಿದ ಹಿಜಾಬ್ ವಿರುದ್ಧದ ಹೋರಾಟ: 20 ವರ್ಷದ ಯುವತಿಯನ್ನು ಕ್ರೂರವಾಗಿ ಕೊಂದ ಪೊಲೀಸರು
ಇದನ್ನೂ ಓದಿ : Mangalore’s Malali Masjid:ಮಂಗಳೂರಿನ ಮಳಲಿ ಮಸೀದಿ ವರ್ಸಸ್ ಹಿಂದೂ ದೇವಾಲಯ ವಿವಾದ,ಅಕ್ಟೋಬರ್ 17ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್
Minister of State defends PFI leader’s arrest action, horrendous information comes out: Minister CC Patil