Mangalore’s Malali Masjid:ಮಂಗಳೂರಿನ ಮಳಲಿ‌ ಮಸೀದಿ ವರ್ಸಸ್ ಹಿಂದೂ ದೇವಾಲಯ ವಿವಾದ,ಅಕ್ಟೋಬರ್ 17ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್

ಮಂಗಳೂರು : Mangalore’s Malali Masjid : ಮಂಗಳೂರಿನ ಮಳಲಿ‌ ಮಸೀದಿ ವರ್ಸಸ್ ಹಿಂದೂ ದೇವಾಲಯ ಎಂಬ ವಿವಾದದ ತೀರ್ಪು ಮತ್ತೆ ಮುಂದೂಡಿಕೆಯಾಗಿದೆ. ವಿವಾದಿತ ಸ್ಥಳದ ಸತ್ಯಾಸತ್ಯತೆ ತಿಳಿಯಲು ವಿಶ್ವಹಿಂದೂಪರಿಷತ್ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಪ್ರಕಟಿಸದೆ ನ್ಯಾಯಾಲಯ ತೀರ್ಪು ಮುಂದೂಡಿದೆ. ಅಕ್ಟೋಬರ್ ಗೆ ತೀರ್ಪು ಕಾಯ್ದಿರಿಸಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹೌದು..ಮಂಗಳೂರಿನ ಮಳಲಿಯ ಮಸೀದಿ ಹಿಂದೂ ದೇವಾಲಯ ಎಂದು ವಿಎಚ್ ಪಿ ನ್ಯಾಯಾಲಯದಕ್ಕೆ ಸಲ್ಲಿಸಿದ್ದ ಅರ್ಜಿಯ ತೀರ್ಪು ಅಕ್ಟೋಬರ್ 17 ಕ್ಕೆ ಮುಂದೂಡಿಕೆಯಾಗಿದೆ. ಕಳೆದ ಎಪ್ರೀಲ್ 21ರಂದು ಮಂಗಳೂರಿನ‌ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ನವೀಕರಣದ ವೇಳೆ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿತ್ತು. ಹೀಗಾಗಿ ವಿಶ್ವ ಹಿಂದೂ ಪರಿಷತ್ ಇದರ ಸತ್ಯಾಸತ್ಯತೆ ತಿಳಿಯಲು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಲು ದಿನಾಂಕ‌ ನೀಡಿತ್ತು. ಆದ್ರೆ ಅಕ್ಟೋಬರ್ 17ಕ್ಕೆ ತೀರ್ಪು ಕಾಯ್ದಿರಿಸಿದ ಮಂಗಳೂರು ಕೋರ್ಟ್ ಆದೇಶ ಪ್ರಕಟಿಸದೇ ತೀರ್ಪು ಮುಂದೂಡಿದೆ.

ಮಂಗಳೂರು ತಾಲೂಕಿನ ಮಳಲಿಪೇಟೆ ಮಸೀದಿಯ ನವೀಕರಣ ಸಂದರ್ಭ ಹಿಂದೂ ಮಾದರಿಯ ದೇವಾಲಯ ಪತ್ತೆಯಾಗಿತ್ತು. ಈ ಸಂದರ್ಭ ನವೀಕರಣ ಕಾಮಗಾರಿಗೆ ತಡೆ ನೀಡುವಂತೆ ಸ್ಥಳೀಯ ವಿ.ಎಚ್.ಪಿ ಮುಖಂಡರು ಕೋರ್ಟ್ ಮೊರೆ ಹೋಗಿದ್ದರು. ಮಸೀದಿ ಆಡಳಿತ ಕಮಿಟಿಯು ತಮ್ಮ ವಕೀಲರ ಮೂಲಕ ಇದು ವಕ್ಫ್ ಆಸ್ತಿ ಆಗಿರುವುದರಿಂದ ಸಿವಿಲ್ ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡದಂತೆ ವಾದ ಮಾಡಿತ್ತು. ಈ ನಡುವೆ ಕೋರ್ಟ್ ಕಮೀಷನರ್ ಮೂಲಕ ವಿವಾದಿತ ಸ್ಥಳದ ಸರ್ವೆ ನಡೆಸುವಂತೆ ಒತ್ತಾಯವು ಕೇಳಿ ಬಂದಿದ್ದು. ಈ ಎಲ್ಲಾ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಈ ಹಿಂದೆಯೇ ತೀರ್ಪು ನೀಡುವುದಕ್ಕೆ ದಿನಾಂಕ ನಿಗದಿಪಡಿಸಿತ್ತು. ಆದ್ರೆ ಆ ದಿನಾಂಕವೂ ಮುಂದೂಡಿಕೆಯಾಗಿ ಇಂದು ಆದೇಶ ನೀಡುವ ದಿನಾಂಕವೂ ಪೋಸ್ಟ್ ಪೋನ್ ಆಗಿದೆ.

ಹಿಂದೂಪರ ಸಂಘಟನೆಗಳು ಸ್ಥಳದ ಇತಿಹಾಸ, ಹಿನ್ನೆಲೆ ತಿಳಿಯಲು ತಾಂಬೂಲ ಪ್ರಶ್ನೆ ಕಾರ್ಯಕ್ರಮ ಇಟ್ಟಿತ್ತು. ಪ್ರಶ್ನಾ ಚಿಂತನೆಯಲ್ಲಿಯು ದೈವ ಸನ್ನಿದಿ ಇದ್ದ ಬಗ್ಗೆ ಉಲ್ಲೇಖವನ್ನು ಜ್ಯೋತಿಷ್ಯಿಗಳು ಮಾಡಿದ್ದರು.‌ಸದ್ಯ ನ್ಯಾಯಾಲಯದ ತೀರ್ಪಿಗೆ ಎಲ್ಲರೂ ಕಾಯುತ್ತಿದ್ದು ಇದೀಗ ಅಕ್ಟೋಬರ್ 17ಕ್ಕೆ ಎಲ್ಲರ ಚಿತ್ತವಿದೆ.

ಇದನ್ನು ಓದಿ : RSS is the biggest terrorist organization:‘ಈ ದೇಶದ ಬಹುದೊಡ್ಡ ಬಿಜೆಪಿ ಸಂಘಟನೆ ಆರ್​ಎಸ್​ಎಸ್​’ : ಎಸ್​​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್​ ಪ್ರಸಾದ್

ಇದನ್ನೂ ಓದಿ : Iranian security forces: ಇರಾನ್​​ನಲ್ಲಿ ಮುಂದುವರಿದ ಹಿಜಾಬ್ ವಿರುದ್ಧದ ಹೋರಾಟ: 20 ವರ್ಷದ ಯುವತಿಯನ್ನು ಕ್ರೂರವಾಗಿ ಕೊಂದ ಪೊಲೀಸರು

Mangalore’s Malali Masjid vs. Hindu Temple dispute, court reserved judgment for October 17

Comments are closed.