ಸುಮಲತಾ ಮನವೊಲಿಸಲು ಆರ್.ಅಶೋಕ್ ಕಸರತ್ತು: ಪಕ್ಷ ಕ್ಕೆ ಸೆಳೆಯಲು ಟಿಕೇಟ್ ಆಫರ್

ಮಂಡ್ಯ : ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿದೆ.ಎಲ್ಲಾ ಪಕ್ಷಗಳು ತಮ್ಮ ತಮ್ಮ ಪಕ್ಷದ ಬಲವರ್ಧನೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಸ್ವತಂತ್ರವಾಗಿ ರಾಜಕೀಯಕ್ಕೆ ಧುಮುಕಿ ಗೆದ್ದ ಸಂಸದೆ ಸುಮಲತಾರನ್ನು (MP Sumalatha) ಚುನಾವಣೆ ಹೊತ್ತಿನಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ಸರ್ಕಸ್ ನಡೆಸಿದ್ದು, ಒಂದು ಹೆಜ್ಜೆ ಮುಂದೇ ಹೋಗಿರೋ ಬಿಜೆಪಿ ಆ ಹೊಣೆಯನ್ನು ಪ್ರಭಾವಿ ಸಚಿವರ ಹೆಗಲಿಗೆ ಹೊರೆಸಿದೆ.

ಹೌದು ಚುನಾವಣೆ ಹೊತ್ತಿನಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಲೋಕಸಭಾ ಸದಸ್ಯೆ ಸುಮಲತಾರನ್ನು ಬಿಜೆಪಿಗೆ ಸೆಳೆಯೋದು ಜಿಲ್ಲೆಯಲ್ಲಿ ಕಮಲ ಅರಳಿಸಲು ನೆರವಾಗಲಿದೆ ಅನ್ನೋ ಲೆಕ್ಕಾಚಾರದಲ್ಲಿದೆ.ಈಗಾಗಲೇ ಹಲವು ಭಾರಿ ಬಿಜೆಪಿ ಈ ಪ್ರಯತ್ನ ಮಾಡಿದೆಯಾದರೂ ಯಶಸ್ವಿಯಾಗಿಲ್ಲ. ಹೀಗಾಗಿ ಈ ಭಾರಿ ಈ ಹೊಣೆಯನ್ನು ಒಕ್ಕಲಿಗ ಸಮುದಾಯದ ಆರ್.ಅಶೋಕ್ ಹೆಗಲಿಗೆ ಹೊರೆಸಲಾಗಿದೆ.

ಮೊನ್ನೆ ಮೊನ್ನೆಯಷ್ಟೇ ಮಂಡ್ಯದ ರಾಜಕೀಯ ವಿಚಾರದಲ್ಲಿ ತನ್ನ ರಣತಂತ್ರವನ್ನು ಬದಲಾಯಿಸಿಕೊಂಡಿದ್ದ ಬಿಜೆಪಿ ಪಕ್ಷದ ಸಂಘಟನೆ ಹಾಗೂ ಜಿಲ್ಲೆಯ ಉಸ್ತುವಾರಿಯನ್ನು ಗೋಪಾಲಯ್ಯ ಹೆಗಲಿನಿಂದ ಇಳಿಸಿ ಆರ್.ಅಶೋಕ್ ಹೆಗಲಿಗೆ ನೀಡಿತ್ತು.ಆದರೆ ಮಂಡ್ಯದಲ್ಲಿ ಪಕ್ಷ ಸಂಘಟನೆಯ ಹೊಣೆ ಹೊತ್ತ ಆರ್.ಅಶೋಕ್ ಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಗೋ ಬ್ಯಾಕ್ ಅಭಿಯಾನ ಮುಜುಗರಕ್ಕೆ ಕಾರಣವಾಗಿದೆ. ಹೀಗಾಗಿ ಈ ಎಲ್ಲ ಅವಮಾನ ಗಳಿಗೆ ತಿರುಗೇಟು ನೀಡಲು ಸಿದ್ಧವಾಗಿರೋ ಆರ‌್.ಅಶೋಕ್ ಆಫರೇಶನ್ ಸುಮಲತಾಗೆ ಸಿದ್ಧವಾಗಿದ್ದಾರಂತೆ.

ಸುಮಲತಾ ಜೊತೆ ಪೋನ್ ನಲ್ಲಿ ಮಾತನಾಡಿರೋ ಆರ್.ಅಶೋಕ್ ಪಕ್ಷಕ್ಕೆ ಆಹ್ವಾನಿಸಿದ್ದಾರಂತೆ.‌ಮಾತ್ರವಲ್ಲ ಪಕ್ಷದ ವರಿಷ್ಠರ ಜೊತೆ ಮಾತನಾಡಿ ಸೂಕ್ತ ಸ್ಥಾನಮಾನ ಒದಗಿಸುವ ಭರವಸೆಯನ್ನು ನೀಡಿದ್ದಾರಂತೆ.ಸುಮಲತಾರನ್ನು ಪಕ್ಷಕ್ಕೆ ಆಹ್ವಾನಿಸುವ ಪ್ರಯತ್ನ ಈಗಾಗಲೇ ಹಲವು ಭಾರಿ ನಡೆದಿದೆ.ಆದರೆ ಫಲಪ್ರದವಾಗಿಲ್ಲ. ನಾರಾಯಣ ಗೌಡ,.ಸಿ.ಟಿ.ರವಿ , ಅಶ್ವತ್ಥ ನಾರಾಯಣ್ ಸೇರಿದಂತೆ ಹಲವು ಸಚಿವರೇ ಬಹಿರಂಗವಾಗಿ ಸುಮಲತಾರನ್ನು ಆಹ್ವಾನಿಸಿದ್ದಾರೆ.

ಇದನ್ನೂ ಓದಿ : Exclusive : ಮೂಡಬಿದಿರೆಗೆ ಮಿಥುನ್ ರೈ, ಬಂಟ್ವಾಳಕ್ಕೆ ಪದ್ಮರಾಜ್ ಫಿಕ್ಸ್

ಇದನ್ನೂ ಓದಿ : MLA Election 2023 Kodagu : ವಿರಾಜಪೇಟೆಗೆ ಪೊನ್ನಣ್ಣ ಮಡಿಕೇರಿಗೆ ಡಾ. ಮಂತರ್ ಗೌಡ ಫಿಕ್ಸ್ : ಕೊಡಗಿನಲ್ಲಿ ಕಾಂಗ್ರೆಸ್ ನಿಂದ ಹೊಸಮುಖ

ಇದನ್ನೂ ಓದಿ : ಪಕ್ಷೇತರ ಸ್ಪರ್ಧಿಯಾಗಿ ಕಾರ್ಕಳ ಕ್ಷೇತ್ರದಿಂದ ಪ್ರಮೋದ್‌ ಮುತಾಲಿಕ್‌ ಸ್ಪರ್ಧೆ

ಆದರೆ ಸುಮಲತಾ ಯಾವುದೇ ತೀರ್ಮಾನ ಪ್ರಕಟಿಸಿರಲಿಲ್ಲ. ಈಗ ಆರ್.ಅಶೋಕ್ ಶತಾಯ ಗತಾಯ ಸುಮಲತಾರನ್ನು ಪಕ್ಷಕ್ಕೆ ಕರೆದುಕೊಂಡು ಬರಲೇ ಬೇಕೆಂದು ಪ್ರಯತ್ನ ಆರಂಭಿಸಿದ್ದಾರೆ.ಒಂದು ಮೂಲಗಳ ಮಾಹಿತಿ ಪ್ರಕಾರ, ಆರ್.ಅಶೋಕ್ ವರಿಷ್ಠರ ಜೊತೆ ಮಾತನಾಡಿ ಯುವ ಮುಖಗಳಿಗೆ ಚುನಾವಣೆಯಲ್ಲಿ ಅವಕಾಶ ಕೊಡೋ ನಿಟ್ಟಿನಲ್ಲಿ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಗೆ ಮಂಡ್ಯದ ಯಾವುದೇ ಕ್ಷೇತ್ರದಿಂದ ಟಿಕೇಟ್ ನೀಡೋ ಭರವಸೆಯನ್ನು ನೀಡಿದ್ದಾರಂತೆ.ಈ ಎಲ್ಲಾ ಕಾರಣಗಳಿಂದ ಆರ್.ಅಶೋಕ್ ನಡೆಸ್ತಿರೋ ಆಫರೇಶನ್ ಸುಮಲತಾ ಸಾಕಷ್ಟು ಕುತೂಹಲ ಮೂಡಿಸಿದ್ದು,ಈ ಭಾರಿಯಾದ್ರೂ ಸುಮಲತಾ ಕಮಲ ಹಿಡಿಯುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

MP Sumalatha : R.Ashok exercise to convince Sumalatha: Ticket offer to attract to the party

Comments are closed.