MP Tejaswi Surya: ಚಪ್ಪಲಿ ಧರಿಸಿ ದೈವದ ದೀವಟಿಕೆ ಹಿಡಿದ ಸಂಸದ ತೇಜಸ್ವಿ ಸೂರ್ಯ: ಹಿಂದೂಗಳ ಆಕ್ರೋಶ

ಬೆಂಗಳೂರು: (MP Tejaswi Surya) ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರುದ್ದ ಹಿಂದೂ ಸಂಘಟನೆಗಳು ತೀವ್ರ ಆಕೋಶ ವ್ಯಕ್ತಪಡಿಸಿದ್ದು, ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಆರೋಪ ಕೇಳಿಬಂದಿದೆ. ಚಪ್ಪಲಿ ಹಾಕಿಕೊಂಡು ದೈವದ ದೀವಟಿಗೆ ಹಿಡಿದು ನಿಂತು ಪೋಟೋ ಒಂದಕ್ಕೆ ಫೋಸ್‌ ನೀಡಿದ್ದು, ಈ ಮೂಲಕ ಕರಾವಳಿಯ ಪವಿತ್ರ ದೈವಾರಾಧನೆಗೆ ಸಂಸದ ತೇಜಸ್ವಿ ಸೂರ್ಯ ಅವರು ಅವಮಾನ ಮಾಡಿದ್ದಾರೆ. ಇದೀಗ ಸಂಸದ ತೇಜಸ್ವಿ ಸೂರ್ಯ ವಿರುದ್ದ ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನದ ಸಾಂಸ್ಕ್ರತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ದೈವಾರಾಧನೆಯ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿತ್ತು. ಈ ವೇಳೆ ಸಂಸದ ತೇಜಸ್ವಿ ಸೂರ್ಯ (MP Tejaswi Surya) ಅವರು ದೈವದ ದೀವಟಿಗೆ ಹಿಡಿದು ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ದೈವದ ದೀವಟಿಗೆ ಹಿಡಿದು ನಿಂದ ಫೋಟೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ದೈವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಫೋಟೋದ ಕುರಿತು ಅಖಿಲ ಭಾರತ ಹಿಂದೂ ಮಹಾ ಸಭಾ ಸದಸ್ಯರು ಸಾಮಾಜಿಕ ಜಾಲತಾಣವೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ” ಜೈ ಹಿಂದೂ ರಾಷ್ಟ್ರ.. ಇದೇನಾ ಸಂಸ್ಕ್ರತಿ?? ಇದೇನಾ ಪದ್ದತಿ??? ಭಾರತೀಯ ಜನತಾ ಪಕ್ಷಕ್ಕೆ ಹಿಂದೂ ಸಂಸ್ಕ್ರತಿಯ ಬಗ್ಗೆ, ದೈವರಾದನೆಯ ಬಗ್ಗೆ, ಹಿಂದೂ ಸಮುದಾಯದ ಬಗೆಗೆ ಇರುವಂತ ಗೌರವ ಎಂತದ್ದು ಎಂಬುದನ್ನು ನೋಡಿ.. ಆಡಳಿತದಲ್ಲಿರುವಂತಹ ಡಬಲ್‌ ಇಂಜಿನ್‌ ಸರಕಾರದ ಮಾನ್ಯ ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಅವರು ಚಪ್ಪಲಿಯನ್ನು ಧರಿಸಿ ದೈವ ದೀವಟಿಕೆಯನ್ನು ಹಿಡಿದು ನಿಂತಿಡುವುದು ನೋಡಿ.. ಇಂಥವರಿಂದ ಹಿಂದೂ ಸಮಾಜ ಏನನ್ನು ಅಪೇಕ್ಷಿಸಲು ಸಾಧ್ಯ??” ಎಂದು ಬರೆದುಕೊಂಡಿದ್ದಾರೆ.

ಚಪ್ಪಲಿ ಹಾಕಿಕೊಂಡು ದೈವಕ್ಕೆ ಅವಮಾನ ಮಾಡಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆ ಪೋಟೋವನ್ನು ಸಾಮಾಜಿಕ ಜಾಲತಾಣಗಳಿಂದ ತೇಜಸ್ವಿ ಸೂರ್ಯ ಅವರು ಡಿಲೀಟ್‌ ಮಾಡಿದ್ದಾರೆ. “ಫೋಟೋ ಡಿಲೀಟ್‌ ಮಾಡಿ ಏನು ಪ್ರಯೋಜನ? ನಮ್ಮ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ಸಮಸ್ತ ಹಿಂದೂ ಜನರ ಬಳಿಯಲ್ಲಿ ತೇಜಸ್ವಿ ಸೂರ್ಯ ಕ್ಷಮೆಯಚಿಸಬೇಕು” ಎಂದು ಹಿಂದೂ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ : Muruga Math: ನ್ಯಾಯ ಕೊಡಿಸಿ ಇಲ್ಲ ದಯಾಮರಣ ನೀಡಿ : ಸಂತ್ರಸ್ತ ಬಾಲಕಿಯರ ತಾಯಿಯರಿಂದ ರಾಷ್ಟ್ರಪತಿಗೆ ಪತ್ರ

ಇದನ್ನೂ ಓದಿ : Bus facility for government school : ಶಾಲೆಗಳಿಗೆ ಸರಕಾರದಿಂದಲೇ ಬಸ್‌ ಸೌಲಭ್ಯ : ಸಿಎಂ ಬಸವರಾಜ್‌ ಬೊಮ್ಮಾಯಿ

(MP Tejaswi Surya) Bengaluru South Constituency MP Tejaswi Surya has been accused of hurting Hindu religious sentiments by Hindu organizations. MP Tejaswi Surya has insulted the sacred deity worship of the coast by wearing slippers and holding the deity’s lamp and posing for a photo.

Comments are closed.