Nandini Milk : ದುಬಾರಿಯಾಗಲಿದೆ ನಂದಿನಿ ಹಾಲು : ದರ ಏರಿಕೆಗೆ ಕೆಎಂಎಫ್ ಸಿದ್ಧತೆ

ಬೆಂಗಳೂರು : ಕೊರೋನಾ ಮೂರು ಅಲೆ ಮುಗಿಸಿ ಹೈರಾಣಾಗಿರೋ ಜನರಿಗೆ ಸದ್ಯ ಬೆಲೆ ಏರಿಕೆ ಶಾಕ್ ಜೋರಾಗಿಯೇ ಕಾಡಲಾರಂಭಿಸಿದೆ. ಅದರಲ್ಲೂ ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಎಲ್ ಪಿಜಿ ಗ್ಯಾಸ್ ಬಳಿಕ ಈಗ ಹಾಲು ಬಾಯಿ ಸುಡಲಾರಂಭಿಸಿದ್ದು, ಸದ್ಯದಲ್ಲೇ ಹಾಲಿನ (Nandini Milk) ದರ ಏರಿಕೆಗೆ ಸಿದ್ಧತೆ ನಡೆದಿದೆ. ನಷ್ಟದ ನೆಪವೊಡ್ಡಿ ಹಾಲು ಒಕ್ಕೂಟಗಳು ದರ ಪರಿಷ್ಕರಣೆಗೆ ಸರ್ಕಾರಕ್ಕೆ ಒತ್ತಡ ಹೇರಲಾರಂಭಿಸಿವೆ. ಈಗಾಗಲೇ ಕೆಲವು ತಿಂಗಳ ಹಿಂದೆಯೇ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.ಆದ್ರೆ ಕೊರೊನಾ ಮೂರನೇ ಅಲೆಯ ಭೀತಿಗೆ ಸರ್ಕಾರ ಒಪ್ಪಿಗೆ ಸೂಚಿಸಿರಲಿಲ್ಲ. ಇದೀಗ ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ ಕೆಎಂಎಫ್ ಸಿದ್ಧತೆ ನಡೆಸಿದೆ.

Nandini Milk to be expensive, KMF Ready for rate hike

ಹಾಲಿನ ದರ ( Nandini Milk)ಪರಿಷ್ಕರಣೆಗೆ ಮುಂದಾಗಿರುವ ಕೆಎಂಎಫ್, ಪ್ರತಿ ಲೀಟರ್ ಗೆ 2 ರೂಪಾಯಿ ಹೆಚ್ಚಿಸಲು ಚಿಂತನೆ ನಡೆಸಿದೆ. ರಾಜ್ಯದ 14 ಹಾಲು ಒಕ್ಕೂಟಗಳು ಕೆಎಂಎಫ್ ಮುಂದೆ ಪ್ರತಿ ಲೀಟರ್ ಗೆ 5 ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ.ಆದರೆ ಕೆಎಂಎಫ್ ಸಾಧಕ ಬಾಧಕ ಪರಿಶೀಲಿಸಿ ಅಂತಿಮವಾಗಿ ಎರಡು ರೂಪಾಯಿ ಹೆಚ್ಚಿಸಲು ಚಿಂತನೆ ನಡೆಸಿದ್ದು, ಸರ್ಕಾರದ ಅಂಗೀಕಾರದ ಮೇಲೆ‌ಬೆಲೆ ಏರಿಕೆ ಭವಿಷ್ಯ ನಿರ್ಧಾರವಾಗಲಿದೆ.

sive, KMF Ready for rate hike

ಕಳೆದ 2 ವರ್ಷದಿಂದ ನಂದಿನಿ (Nandini Milk) ಹಾಲಿನ ದರ ಏರಿಕೆ ಆಗಿಲ್ಲ. ಸಾಕಷ್ಟು ನಷ್ಟ ಉಂಟಾಗುತ್ತಿದೆ ಎಂಬ ಅಳಲು ಹಾಲು ಒಕ್ಕೂಟದ್ದು. ಹೀಗಾಗಿ ಸದ್ಯವೇ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡು ಬಳಿಕ ಸಿಎಂ ಬೊಮ್ಮಾಯಿಯವರನ್ನ ಭೇಟಿ ಮಾಡಿ ಬೆಲೆ ಏರಿಕೆ ಮಾಡಲು ಅನುಮತಿ ನೀಡುವಂತೆ ಕೋರಲು ನಿರ್ಧರಿಸಿದೆ. ಅಲ್ದೇ ಒಂದೊಮ್ಮೆ ಕೆಎಂಎಫ್ ( KMF) ಬೆಲೆ ಏರಿಕೆ ಮಾಡದೇ ಇದ್ದಲ್ಲಿ, ಅಥವಾ ಸರ್ಕಾರ ಅನುಮತಿ ನೀಡದೇ ಹೋದಲ್ಲಿ ಪ್ರತಿಭಟನೆ ಮಾಡೋ ಎಚ್ಚರಿಕೆಯನ್ನು ಹಾಲು ಒಕ್ಕೂಟ ರವಾನಿಸಿದೆ.

sive, KMF Ready for rate hike

ನಂದಿನಿ ಹಾಲು ದರ (Nandini Milk )ಏರಿಕೆಗೆ ಒಕ್ಕೂಟಗಳ ಮನವಿ

ಇನ್ನು ದರ ಏರಿಕೆಯ ಪ್ರಸ್ತಾಪದ ಬಗ್ಗೆ ಮಾತನಾಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್, ಕೋವಿಡ್ ಮೂರನೇ ಅಲೆ ಕಾರಣಕ್ಕೆ ಸರ್ಕಾರ ಬೆಲೆ ಹೆಚ್ಚಳ ಬೇಡ ಎಂದು ಹೇಳಿತ್ತು. ಆದರೆ ಈಗ ಮತ್ತೊಮ್ಮೆ ಬೆಲೆ ಏರಿಕೆ ಪ್ರಸ್ತಾಪ ಬಂದಿದೆ. ಲೀಟರ್ ಗೆ ಕನಿಷ್ಠ 2 ರೂಪಾಯಿ ಏರಿಸಲು ಒತ್ತಡವಿದೆ. ಈ ಬಗ್ಗೆ ಅಧ್ಯಕ್ಷರ ಜೊತೆ ಚರ್ಚಿಸಿ ಬಳಿಕ ಸಿಎಂ ಭೇಟಿ‌ ಮಾಡ್ತಿವಿ. ಒಂದೊಮ್ಮೆ ಸರಕಾರ ಅನುಮತಿ ನೀಡಿದ್ರೇ 24 ಗಂಟೆಗಳಲ್ಲೇ ಹೊಸ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ನಿರ್ವಹಣೆ, ಉತ್ಪಾದನಾ ವೆಚ್ಚ, ನೌಕರರ ಸಂಬಳ, ಸಾಗಾಣಿಕಾ ವೆಚ್ಚ ಹೆಚ್ಚಿದ ಹಿನ್ನಲೆಯಲ್ಲಿ ಹಾಲು ಒಕ್ಕೂಟಗಳು ದರ ಹೆಚ್ಚಳಕ್ಕೆ ಮನವಿ ಮಾಡಿವೆ. ಹೀಗಾಗಿ ಇನ್ಮುಂದೆ ಅಮೃತ ಸಮಾನ ಹಾಲು ನಿಮ್ಮ ಕಿಸೆಗೆ ಬಿಸಿ ಮುಟ್ಟಿಸೋದಂತು ಫಿಕ್ಸ್.

ಇದನ್ನೂ ಓದಿ : ಮ್ಯಾಗಿ ಬೆಲೆ ಏರಿಕೆ; ಇನ್ನೂ ಯಾವೆಲ್ಲ ತಿಂಡಿ ತಿನಿಸಿನ ಬೆಲೆ ಏರಿಕೆಯಾಗಿದೆ ?

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಮಾರ್ಚ್‌ನಲ್ಲೇ 7 ದಿನ ಬ್ಯಾಂಕ್‌ ರಜೆ

Nandini Milk to be expensive, KMF Ready for rate hike

Comments are closed.