ಬೆಂಗಳೂರು:: Nandini milk price hike ನಿರೀಕ್ಷೆಯಂತೆಯೇ ನಂದಿನಿ ಹಾಲು ಮತ್ತು ಮೊಸರಿನ ಬೆಲೆಯನ್ನು 3 ರೂ. ಹೆಚ್ಚಿಸಲಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಅನ್ವಯವಾಗಲಿದೆ.
ಇದನ್ನೂ ಓದಿ: Chitrapady Children Sante : ಮಕ್ಕಳ ದಿನಾಚರಣೆ : ಚಿತ್ರಪಾಡಿ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ
ಕಳೆದ ಅಕ್ಟೋಬರ್ 31ರಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಅದರಂತೆ ಇದೀಗ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ(ಕೆಎಂಎಫ್) ದರ ಏರಿಕೆಯ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಹಾಲಿನ ದರದಲ್ಲಿ ಏರಿಕೆ ಮಾಡುವ ಕುರಿತು ಕೆಎಂಎಫ್ ಕಳೆದ ಸೆಪ್ಟಂಬರ್ ನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅದಕ್ಕೆ ಈಗ ರಾಜ್ಯ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆ ದರ ಏರಿಕೆಯ ತೀರ್ಮಾನ ಕೈಗೊಳ್ಳಲಾಗಿದೆ.
ಹೊಸ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದ್ದು, ಹೆಚ್ಚಳ ಮಾಡಲಾದ ದರವನ್ನು ಪ್ರೋತ್ಸಾಹ ಧನ ರೂಪದಲ್ಲಿ ರೈತರಿಗೆ ವರ್ಗಾವಣೆ ಮಾಡಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ನಂದಿನಿಯ ಯಾವ ಹಾಲಿಗೆ ಎಷ್ಟು ದರ..?
ಟೋನ್ಡ್ ಹಾಲು- ಹಳೆ ದರ 37 ರೂ. ಹೊಸ ದರ- 40 ರೂ.
ಹೊಮೊಜಿನೈಸ್ಡ್ ಹಾಲು- ಹಳೆ ದರ 38 ರೂ. ಹೊಸ ದರ- 41 ರೂ.
ಹೊಮೊಜಿನೈಸ್ಡ್ ಹಸುವಿನ ಹಾಲು- ಹಳೆ ದರ- 42 ರೂ. ಹೊಸ ದರ- 45 ರೂ.
ಸ್ಪೆಷಲ್ ಹಾಲು- ಹಳೆ ದರ- 43 ರೂ. ಹೊಸ ದರ- 46 ರೂ.
ಶುಭಂ ಹಾಲು- ಹಳೆ ದರ- 43 ರೂ. ಹೊಸ ದರ- 46 ರೂ.
ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು- ಹಳೆ ದರ- 44 ರೂ. ಹೊಸ ದರ- 47 ರೂ.
ಸಮೃದ್ಧಿ ಹಾಲು- ಹಳೆ ದರ- 48 ರೂ. ಹೊಸ ದರ- 51 ರೂ.
ಸಂತೃಪ್ತಿ ಹಾಲು- ಹಳೆ ದರ- 50 ರೂ. ಹೊಸ ದರ- 53 ರೂ.
ಡಬಲ್ ಟೋನ್ಡ್ ಹಾಲು- ಹಳೆ ದರ- 36 ರೂ. ಹೊಸ ದರ- 39 ರೂ.
ಮೊಸರು- ಹಳೆ ದರ- 45 ರೂ. ಹೊಸ ದರ- 48 ರೂ.
ನಂದಿನಿ ಹಾಲಿನ ದರ ಏರಿಕೆ ಹೋಟೆಲ್ ಉದ್ಯಮಗಳ ಮೇಲೆಯೂ ಪ್ರಭಾವ ಬೀಳುವ ಸಾಧ್ಯತೆ ಇದೆ. ಹಾಲಿಗೆ ದರ ಏರಿಕೆ ಆಗಿರುವುದರಿಂದ ಹೋಟೆಲ್ ನಲ್ಲಿ ಟೀ, ಕಾಫಿ ಬೆಲೆಯೂ ಹೆಚ್ಚುವ ಸಾಧ್ಯತೆ ಹೆಚ್ಚಿದೆ.
Nandini milk price hike: Nandini milk and curd price increased by KMF; new price will apply by Monday midnight